ಶಾಸಕರು ಕ್ಷೇತ್ರ ಅಭಿವೃದ್ಧಿಯತ್ತ ಗಮನಹರಿಸಲಿ: ಎ.ಮಂಜುನಾಥ್‌

KannadaprabhaNewsNetwork |  
Published : Sep 20, 2025, 01:00 AM IST
ಮಾಗಡಿ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾಜಿ ಶಾಸಕ ಎ.ಮಂಜುನಾಥ್  ಮಾತನಾಡಿದರು. | Kannada Prabha

ಸಾರಾಂಶ

ಮಾಗಡಿ: ಶಾಸಕ ಬಾಲಕೃಷ್ಣ ಉಡಾಫೆ ಮಾತುಗಳನ್ನು ನಿಲ್ಲಿಸಿ ಸರ್ಕಾರದಿಂದ ವಿಶೇಷ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಲಿ, ಅದನ್ನು ಬಿಟ್ಟು ಮಾತಿನಲ್ಲಿ ಸಮಗ್ರ ಅಭಿವೃದ್ಧಿ ಎಂದು ಹೇಳಿಕೆ ಕೊಡುವುದು ಸರಿಯಲ್ಲ ಎಂದು ಮಾಜಿ ಶಾಸಕ ಎ.ಮಂಜುನಾಥ್ ವ್ಯಂಗ್ಯವಾಡಿದರು.

ಮಾಗಡಿ: ಶಾಸಕ ಬಾಲಕೃಷ್ಣ ಉಡಾಫೆ ಮಾತುಗಳನ್ನು ನಿಲ್ಲಿಸಿ ಸರ್ಕಾರದಿಂದ ವಿಶೇಷ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಲಿ, ಅದನ್ನು ಬಿಟ್ಟು ಮಾತಿನಲ್ಲಿ ಸಮಗ್ರ ಅಭಿವೃದ್ಧಿ ಎಂದು ಹೇಳಿಕೆ ಕೊಡುವುದು ಸರಿಯಲ್ಲ ಎಂದು ಮಾಜಿ ಶಾಸಕ ಎ.ಮಂಜುನಾಥ್ ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಅವಧಿಯಲ್ಲಿ 15ನೇ ಹಣಕಾಸಿನಡಿ ಪುರಸಭಾ ವ್ಯಾಪ್ತಿಯ ವಾರ್ಡ್‌ಗಳಿಗೆ ಅನುದಾನ ತರಲಾಗಿತ್ತು. ಚುನಾವಣೆ ಘೋಷಣೆಯಾದ್ದರಿಂದ ಅನುದಾನ ತಡೆಹಿಡಿಯಲಾಗಿತ್ತು. ಈಗ ಅದೇ ಅನುದಾನವನ್ನು ತಮಗೆ ಬೇಕಾದ ವಾರ್ಡ್‌ಗಳಿಗೆ ಶಾಸಕರು ಹಾಕಿಸಿ, 50 ಲಕ್ಷ ಅನುದಾನವೆಂದು ಭೂಮಿಪೂಜೆ ಮಾಡಿ ಬಿಂಬಿಸಿಕೊಳ್ಳುತ್ತಿದ್ದಾರೆ. ನನ್ನ ಅವಧಿಯಲ್ಲಿ 1000 ಕೋಟಿ ಅನುದಾನ ತಂದು ಅಂದಿನ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ಮಾಡಿಸಿದ್ದೇನೆ. ಅದೇ ರೀತಿ ತಾವು ಕೂಡ ಕೋಟಿಗಟ್ಟಲೆ ಹಣ ತಂದು ಕ್ಷೇತ್ರದ ಅಭಿವೃದ್ಧಿ ಮಾಡಲಿ ನಾವು ಅಭಿವೃದ್ಧಿಗೆ ವಿರೋಧ ಮಾಡುವುದಿಲ್ಲ ಅದನ್ನು ಬಿಟ್ಟು ಸಮಗ್ರ ಅಭಿವೃದ್ಧಿ ಎಂದು ಮಾಧ್ಯಮದಲ್ಲಿ ಬಿಂಬಿಸಿಕೊಳ್ಳುವುದು ನಿಲ್ಲಿಸಿ ಎಂದು ವಾಗ್ದಾಳಿ ನಡೆಸಿದರು.

ಗಾಂಧಿ ಪುತ್ಥಳಿಗೆ ನೇಣು:

50 ವರ್ಷಗಳಿಂದ ಮಾಗಡಿ ತಾಲೂಕನ್ನು ಬಾಲಕೃಷ್ಣ ಕುಟುಂಬದವರೇ ಆಳುತ್ತಿದ್ದಾರೆ. ಎಂದೂ ಕೂಡ ಒಂದೇ ಒಂದು ಪುತ್ಥಳಿ ಅಥವಾ ಪ್ರತಿಮೆ ನಿರ್ಮಿಸಿಲ್ಲ. ನನ್ನ ಅವಧಿಯಲ್ಲಿ ಎನ್ಇಎಸ್ ವೃತದಲ್ಲಿ ಗಾಂಧಿ ಪುತ್ಥಳಿ ನಿರ್ಮಾಣ ಮಾಡಿದೆ. ಪುತ್ಥಳಿಯಲ್ಲಿ ನನ್ನ ಹೆಸರಿದೆ ಎಂಬ ಕಾರಣಕ್ಕೆ ಯಾರಿಗೂ ಮಾಹಿತಿ ನೀಡದೆ ಅಧಿಕಾರ ದುರ್ಬಳಸಿಕೊಂಡು ಏಕಾಏಕಿ ಗಾಂಧಿ ಪುತ್ಥಳಿಯನ್ನು ನೇಣು ಹಾಕಿ ತೆರವು ಮಾಡಿದ್ದಾರೆ. ನಿಮ್ಮ ಯೋಗ್ಯತೆಗೆ ಯಾವುದಾದರೂ ಒಂದು ಪುತ್ಥಳಿ ನಿರ್ಮಾಣ ಮಾಡಿದ್ದರೆ, ಅದರೆ ಬೆಲೆ ಏನೆಂದು ನಿಮಗೆ ಗೊತ್ತಾಗುತ್ತಿತ್ತು. ಪ್ರತಿಭಟನೆ ಮಾಡಿದ ಜೆಡಿಎಸ್ ಮುಖಂಡರ ಮೇಲೆ ಎಫ್ಐಆರ್ ಮಾಡಿಸಿದ್ದಾರೆ. ಈ ಬಗ್ಗೆ ಅವರು ಮಾತನಾಡಿರುವ ಫೋನಿನ ಸಂಭಾಷಣೆ ನನ್ನ ಬಳಿ ಇದೆ. ಆಡಿಯೋ ಬಿಡುಗಡೆ ಮಾಡಿಸಿ ಪೊಲೀಸ್ ಅಧಿಕಾರಿಗೆ ಚೀಮಾರಿ ಹಾಕಿಸುತ್ತೇವೆ. ಈ ಗೊಡ್ಡು ಬೆದರಿಕೆಗೆ ಹೆದರುವ ನಾಯಕ ನಾನಲ್ಲ ಎಂದು ಮಂಜುನಾಥ್‌ ವಾಗ್ದಾಳಿ ನಡೆಸಿದರು‌.

ಒಂದು ಅಡಿ ಭೂ ಕಬಳಿಕೆ ಮಾಡಿಲ್ಲ:

ನಾನು ರಾಜಕೀಯದಲ್ಲಿ ಯಾರ ಆಸ್ತಿಯನ್ನು ಕಬಳಿಕೆ ಮಾಡಿಲ್ಲ. ಶಾಸಕ ಬಾಲಕೃಷ್ಣ ತಮ್ಮ ಏಜೆಂಟರನ್ನು ಇಟ್ಟುಕೊಂಡು ಎಷ್ಟು ನಕಲಿ ಖಾತೆ ಸೃಷ್ಟಿಸಿ ತಾವರೆಕೆರೆ ಹೋಬಳಿಯಲ್ಲಿ ಸರ್ಕಾರಿ ಜಾಗವನ್ನು ತಮ್ಮ ಹೆಂಡತಿ ಹೆಸರಿಗೆ ಬರೆಸಿಕೊಂಡಿರುವ ಬಗ್ಗೆ ಸಂಪೂರ್ಣ ದಾಖಲೆಗಳು ನನ್ನ ಬಳಿ ಇಟ್ಟುಕೊಂಡಿದ್ದು, ಶೀಘ್ರದಲ್ಲೇ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡುತ್ತೇನೆ. ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೂ ತಿಳಿಸುತ್ತೇನೆ. ನಿಮ್ಮ ಭೂಕಬಳಿಕೆ ವಿರುದ್ಧ ನಿರಂತರ ಹೋರಾಟ ಮಾಡುತ್ತೇನೆ. ನಾನು ಒಂದು ಅಡಿ ಭೂಕಬಳಿಕೆ ಮಾಡಿರುವುದಿದ್ದರೆ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ತೀನಿ ಎಂದು ಮಾಜಿ ಶಾಸಕ ಮಂಜುನಾಥ್ ಸವಾಲು ಹಾಕಿದರು.

ಈ ವೇಳೆ ಜೆಡಿಎಸ್ ಮುಖಂಡರಾದ ಕೆಂಪೇಗೌಡ ಕೆ ಕೆ.ವಿ.ಬಾಲು, ವಿಜಯಕುಮಾರ್, ಕುಮಾರ್, ಪಂಚೆ ರಾಮಣ್ಣ, ರಂಗಣಿ, ಮಂಜುನಾಥ್, ಪುರುಷೋತ್ತಮ್, ವೆಂಕಟೇಶ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರವಾರದಲ್ಲಿ ನಾಳೆ ರಾಷ್ಟ್ರಪತಿ ಮುರ್ಮು ಸಬ್‌ಮರೀನ್‌ ಯಾನ
ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ