ಜಮಖಂಡಿ: ತಾಲೂಕಿನ ಕಲಬೀಳಗಿ ಗ್ರಾಮದ ವೇದಾಂತ ನಾವಿ ಎಂಬ ವಿದ್ಯಾರ್ಥಿಯನ್ನು ಶಾಸಕ ಜಗದೀಶ ಗುಡಗುಂಟಿ ಯವರು ಶೈಕ್ಷಣಿಕ ದತ್ತು ಪಡೆದು ಕೊಂಡಿದ್ದಾರೆ. ವೇದಾಂತ ದ್ವಿತಿಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಿದ್ದು, ಅವನ ಮುಂದಿನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಶಾಸಕರು ವಹಿಸಿ ಕೊಳ್ಳಲಿದ್ದಾರೆ. ಈ ಪ್ರತಿಭಾವಂತ ವಿದ್ಯಾರ್ಥಿಯ ಉನ್ನತ ವ್ಯಾಸಾಂಗದ ಜವಾಬ್ದಾರಿ ತೆಗೆದು ಕೊಂಡಿರುವ ಶಾಸಕರು ಶೈಕ್ಷಣಿಕ ದತ್ತು ಪಡೆದಿದ್ದಾರೆ ಎಂದು ಶ್ರೀಧರ ಕಂಬಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಲಬೀಳಗಿ ಗ್ರಾಮದ ಮುಖಂಡರು ಮತ್ತು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.