ಕನ್ನಡಪ್ರಭ ವಾರ್ತೆ ಇಂಡಿ
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮನರೇಗಾ ಹೆಸರು ಬದಲಾವಣೆ ಮಾಡಿ ಗಾಂಧಿಜೀಯವರ ಹೆಸರಿಗೆ ಧಕ್ಕೆ ತರಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಳ್ಳುವ ಹೋರಾಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ದೇಶದಲ್ಲಿ ಶ್ರೀರಾಮನನ್ನು ಸ್ಮರಿಸಿದವರು ಮಹಾತ್ಮಾ ಗಾಂಧಿಯವರು. ರಾಮರಾಜ್ಯದ ಕನಸು ಕಾಣುವುದರ ಮೂಲಕ ಶ್ರೀರಾಮನನ್ನು ಸ್ಮರಿಸಿದ್ದಾರೆ. ಅಂತಹ ರಾಷ್ಟ್ರಪಿತನ ಹೆಸರು ಮನರೇಗಾ ಯೋಜನೆಯ ಹೆಸರಿನಿಂದ ಅಳಿಸಿಹಾಕುತ್ತಿರುವ ಕೇಂದ್ರದ ಧೋರಣೆ ಖಂಡಿಸುವುದಾಗಿ ತಿಳಿಸಿದರು.ಇದು ಕೇಂದ್ರದ ಅವೈಜ್ಞಾನಿಕ ನಿರ್ಣಯವಾಗಿದ್ದು, ರಾಷ್ಟ್ರನಾಯಕರ ಹೆಸರು ತೆಗೆದು ಇನ್ನೊಬ್ಬರ ಭಾವನೆಗೆ ನೋವು ತರುವ ಕೆಲಸ ಬಿಟ್ಟು, ದೇಶದ ಜನರಿಗೆ ಅನುಕೂಲವಾಗುವ ಹೊಸ ಯೋಜನೆ ರೂಪಿಸಿ ಹೆಸರಿಡುವ ಕೆಲಸ ಕೇಂದ್ರ ಮಾಡಬೇಕು. ನಮ್ಮ ಕೂಗಿಗೆ ಸ್ಪಂದಿಸದಿದ್ದರೆ ಗ್ರಾಮದಿಂದ ದೆಹಲಿಯವರೆಗೆ ಕೇಂದ್ರದ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿ ಗ್ರಾಮದಲ್ಲಿ ಸಭೆ ಕರೆದು ಕೇಂದ್ರದ ಷಡ್ಯಂತ್ರದ ವಿರುದ್ಧ ನಿರ್ಣಯ ಮಾಡುವ ಕೆಲಸ ಮಾಡಬೇಕು. ಕೇಂದ್ರ ಸರ್ಕಾರ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿಂದಿನ ಹಾಗೂ ಇಂದಿನ ಅವಧಿಯಲ್ಲಿ ಇಂಡಿ ಮತಕ್ಷೇತ್ರದ ಅಭಿವೃದ್ಧಿಗಾಗಿ ₹8 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಉಪಕಾರ ಸ್ಮರಣೆ ಮಾಡುವುದು ನಮ್ಮ ಧರ್ಮ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೊಗಳಿ ಅಭಿನಂದಿಸುವೆ. ಮುಂಬರುವ ಜನವರಿ ಒಳಗಾಗಿ ಮತಕ್ಷೇತ್ರದ ಎಲ್ಲಾ ರಸ್ತೆಗಳನ್ನು ಗುಣಮಟ್ಟದ ಉತ್ತಮ ಡಾಂಬರೀಕರಣ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದ ಅವರು, ಇಂಡಿಯ ಹೃದಯವಂತ ಜನರು ಭ್ರಷ್ಟಾಚಾರ, ಮಾಫಿಯಾ ಮುಕ್ತ ವಾತಾವರಣ ನಿರ್ಮಾಣ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ನನಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಇಂಡಿಯಲ್ಲಿ ಕಾಂಗ್ರೆಸ್ ಪಕ್ಷ ಭದ್ರಕೋಟೆಯಾಗಿದೆ ಎಂದರು.ಮುಂಬರುವ ದಿನದಲ್ಲಿ ಡಾ.ಅಂಬೇಡ್ಕರ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಂತ ಸೇವಾಲಾಲ ಸೇರಿದಂತೆ ದೇಶಕ್ಕಾಗಿ, ನಾಡಿಗಾಗಿ ಹೋರಾಡಿದ ಮಹನೀಯರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗೌರವಿಸುವ ಕೆಲಸ ಮಾಡಲಾಗುತ್ತದೆ. ನಗರದ ಪ್ರಮುಖ ರಸ್ತೆಗಳಲ್ಲಿ ಶರಣರ ವೃತ್ತ, ರಾಷ್ಟ್ರನಾಯಕರ ವೃತ್ತಗಳನ್ನು ಸ್ಥಾಪಿಸಿ ಗೌರವಿಸಲಾಗಿದೆ ಎಂದ ಅವರು, ಮುಂಬರುವ ಗ್ರಾಪಂ, ತಾಪಂ, ಜಿಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಕಾರ್ಯಕರ್ತರು ಪಕ್ಷ ಸಂಘಟನೆ ಮಾಡಬೇಕು. ಸಮಿತಿ ರಚಿಸಿ ಆಕಾಂಕ್ಷಿಗಳಿಗೆ ಟಿಕೆಟ್ ನೀಡುವ ಕೆಲಸ ಮಾಡಲಾಗುತ್ತದೆ ಎಂದರು.ಇಲಿಯಾಸ ಬೊರಾಮಣಿ, ಬಿ.ಸಿ.ಸಾಹುಕಾರ ಮಾತನಾಡಿದರು. ಭೀಮಣ್ಣ ಕವಲಗಿ, ಮಲ್ಲನಗೌಡ ಪಾಟೀಲ, ಶಿವಯೋಗೆಪ್ಪ ಚನಗೊಂಡ, ಶ್ರೀಕಾಂತ ಕುಡಿಗನೂರ, ಪ್ರಶಾಂತ ಕಾಳೆ, ರಷೀದ್ ಅರಬ, ಅಣ್ಣಪ್ಪ ಬಿದರಕೋಟಿ, ಜಟ್ಟೆಪ್ಪ ರವಳಿ, ಭೀಮಾಶಂಕರ ಮೂರಮನ ವೇದಿಕೆಯಲ್ಲಿ ಇದ್ದರು. ಈ ವೇಳೆ ನಿರ್ಮಲಾ ತಳಕೇರಿ, ಆಸೀಫ್ ಕಾರಬಾರಿ, ಜಾವೀದ ಮೋಮಿನ, ಬಾಬು ಗುಡಮಿ, ಜೈನುದ್ದಿನ ಬಾಗವಾನ, ಪ್ರಭುಗೌಡ ಬಿರಾದಾರ, ಜಹಾಂಗೀರ್ ಸೌದಾಗರ, ಸಣ್ಣಪ್ಪ ತಳವಾರ, ಶೇಖರ ಶಿವಶರಣ, ಸದಾಶಿವ ಪ್ಯಾಟಿ, ದಸ್ತಗೀರ ದೇವರನಾವದಗಿ, ಶೈಲಶ್ರೀ ಜಾಧವ, ಸೋಮು ಮ್ಯಾಕೇರಿ, ಜೀತಪ್ಪ ಕಲ್ಯಾಣಿ, ಸಂತೋಷ ಪರಸೆನವರ, ನೀಲಕಂಠಗೌಡ ಪಾಟೀಲ, ಸಂಗಣ್ಣ ಈರಾಬಟ್ಟಿ, ರುದ್ರಗೌಡ ಅಲಗೊಂಡ, ಅಯುಬ್ ಬಾಗವಾನ, ಮುಸ್ತಾಕ ಇಂಡಿಕರ, ಅವಿನಾಶ ಬಗಲಿ, ಶೇಖರ ನಾಯಕ, ಸುಭಾಷ ಬಾಬರ, ಸತೀಶ ಕುಂಬಾರ, ಪರಶುರಾಮ ಹತ್ತರಕಿ, ನೀಲಕಂಠ ರೂಗಿ ಸಭೆಯಲ್ಲಿ ಭಾಗವಹಿಸಿದ್ದರು.