ಮನರೇಗಾ ಯೋಜನೆ ಶೇ. 84 ಗುರಿ ಸಾಧನೆ: ಶಾಂತಗೌಡ ಪಾಟೀಲ

KannadaprabhaNewsNetwork |  
Published : Jun 12, 2025, 03:52 AM ISTUpdated : Jun 12, 2025, 03:53 AM IST
(ಫೋಟೋ 11ಬಿಕೆಟಿ1, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ಅವರು  ಬುಧವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು) | Kannada Prabha

ಸಾರಾಂಶ

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ಮನರೇಗಾ) 50 ಲಕ್ಷ ಮಾನವ ದಿನಗಳ ಅಂದಾಜಿತ ಗುರಿಯಲ್ಲಿನ ಶೇಕಡಾ 84.33ರಷ್ಟು ಸಾಧನೆಯಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ತಿಳಿಸಿದರು.,

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ಮನರೇಗಾ) 50 ಲಕ್ಷ ಮಾನವ ದಿನಗಳ ಅಂದಾಜಿತ ಗುರಿಯಲ್ಲಿನ ಶೇಕಡಾ 84.33ರಷ್ಟು ಸಾಧನೆಯಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ ತಿಳಿಸಿದರು.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆಯ ಕುರಿತು ವಿವರ ನೀಡಿದರು. ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿವೆ ಎಂದವರು ಹೇಳಿದರು.

ಚತುಷ್ಪಥ ಹೆದ್ದಾರಿ 24.8 ಕಿ.ಮೀ. ಹಾಗೂ ದ್ವಿಪಥ ಹೆದ್ದಾರಿ 26.08 ಕಿ.ಮೀ. ರಸ್ತೆಗಳು ಅಭಿವೃದ್ಧಿಯಲ್ಲಿವೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 208.76 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಮಂಜೂರಾತಿ. ಬದಾಮಿ, ಕಟಗೇರಿ, ಬಾಗಲಕೋಟೆ ರೈಲು ನಿಲ್ದಾಣಗಳು ಮೇಲ್ದರ್ಜೆಗೇರಿವೆ. ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಒಟ್ಟು ₹11.44 ಕೋಟಿ ಬಿಡುಗಡೆ, ಸೂರ್ಯಕಾಂತಿ:257 ರೈತರಿಂದ 2,285 ಕ್ವಿಂಟಾಲ್ ಖರೀದಿ ₹1.66 ಕೋಟಿ ಪಾವತಿ, ತೊಗರಿ: 82,365 ಕ್ವಿಂಟಲ್ ಖರೀದಿ ₹65.89 ಕೋಟಿ ಪಾವತಿ. ಪ್ರಧಾನಿ ಆವಾಸ್ ಯೋಜನೆ (202425): 2,386 ಮನೆಗಳಿಗೆ ಮಂಜೂರಾತಿ. ಸ್ವಚ್ಛ ಭಾರತ ಯೋಜನೆ: 195 ಗ್ರಾಮ ಪಂಚಾಯತಿಗಳಲ್ಲಿ 84 ಪೂರ್ಣ, 103 ಬಾಕಿ ಇವೆ ಎಂದರು.

4,84,095 ಪಡಿತರ ಚೀಟಿದಾರರಿಗೆ 83,402 ಕ್ವಿಂಟಲ್ ಅಕ್ಕಿ ಪೂರೈಕೆ. ಜಲಜೀವನ ಮಿಷನ್: 676 ಯೋಜನೆಗಳಲ್ಲಿ 627 ಪೂರ್ಣ, 346.5 ಕೋಟಿ ಬಿಡುಗಡೆ. ಉಜ್ವಲ ಯೋಜನೆ: 1,96,876 ಗ್ಯಾಸ್ ಸಂಪರ್ಕ. ಮುದ್ರಾ ಯೋಜನೆ: 80,344 ಖಾತೆಗಳಿಗೆ 922.47 ಕೋಟಿ ಸಾಲ ಮಂಜೂರು ಮಾಡಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆ: 83,124 ಖಾತೆಗಳು, 100 ಗ್ರಾಮಗಳು "ಸಂಪೂರ್ಣ ಸುಕನ್ಯಾ ಸಮೃದ್ಧಿ ಗ್ರಾಮಗಳಾಗಿವೆ. ಪಿಎಂ ಸುರಕ್ಷ ಭೀಮಾ ಯೋಜನೆ: 10,255 ಜನರಿಗೆ ಪರಿಹಾರ. ಪಿಎಂ ಜೀವನ ಜ್ಯೋತಿ ಭೀಮಾ ಯೋಜನೆಯಡಿ 517 ಜನರಿಗೆ ಪರಿಹಾರ. ಜಿಲ್ಲೆಯಲ್ಲಿ ಸರಾಸರಿ ಪ್ರತಿ ತಿಂಗಳು 357 ಜನ ಪಾಸ್ಪೋರ್ಟ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈಶ್ವರ ಅದ್ಯಪ್ಪಗೋಳ, ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಬಸವರಾಜ ಅವರಾದಿ, ಮುತ್ತಣ್ಣ ಬೆಣ್ಣೂರ, ಶಿವು ಸುರಪುರ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ