ಜನವಸತಿ ಪ್ರದೇಶದಲ್ಲಿ ಮೊಬೈಲ್ ಟವರ್; ಸ್ಥಳೀಯರ ಆಕ್ರೋಶ

KannadaprabhaNewsNetwork |  
Published : Mar 03, 2026, 02:45 AM IST
೦೨ ಎಂ ಎಲ್ ಪಿ ೦೧ ಪೋಟೋ | Kannada Prabha

ಸಾರಾಂಶ

ಮಹಾಲಿಂಗಪುರಸ್ಥಳೀಯ ಬಳಗಾರ ಬಡಾವಣೆಯ ೭/೧ಇ ಪ್ಲಾಟ್ ನಂ.೧೮ರಲ್ಲಿ ಮೊಬೈಲ್ ಟವರ್ ಕೂಡಿಸಲು ಕಾಮಗಾರಿ ಆರಂಭಿಸಲಾಗಿದೆ. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಟವರ್ ಕೂಡಿಸಲು ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸಿ, ಪೊಲೀಸ್ ಠಾಣೆಗೆ ಭೇಟಿ ನೀಡಿ ಕಾಮಗಾರಿ ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸ್ಥಳೀಯ ಬಳಗಾರ ಬಡಾವಣೆಯ ೭/೧ಇ ಪ್ಲಾಟ್ ನಂ.೧೮ರಲ್ಲಿ ಮೊಬೈಲ್ ಟವರ್ ಕೂಡಿಸಲು ಕಾಮಗಾರಿ ಆರಂಭಿಸಲಾಗಿದೆ. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಟವರ್ ಕೂಡಿಸಲು ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸಿ, ಪೊಲೀಸ್ ಠಾಣೆಗೆ ಭೇಟಿ ನೀಡಿ ಕಾಮಗಾರಿ ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇದು ಜನವಸತಿ ಪ್ರದೇಶವಾಗಿದೆ. ಇಲ್ಲಿ ಮೊಬೈಲ್ ಟವರ್ ಕಾಮಗಾರಿ ಆರಂಭಿಸಲಾಗಿದೆ. ಈ ಭಾಗದ ಜನರಿಗೆ ಹಾಗೂ ರೋಗಿಗಳಿಗೆ, ವಯೋವೃದ್ಧರಿಗೆ, ಮಕ್ಕಳಿಗೆ ಸಾಕಷ್ಟು ಆರೋಗ್ಯದ ತೊಂದರೆಗಳು ಕಾಣಿಸಿಕೊಳ್ಳುವ ಭಯವಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ಟವರ್ ಕೂಡಿಸಲು ನಾವು ಬಿಡುವುದಿಲ್ಲ ಎಂದು ಸ್ಥಳೀಯ ನಿವಾಸಿ ಸುರೇಖಾ ಬಿಸಗುಪ್ಪಿ ಹೇಳಿದರು.

ಸ್ಥಳೀಯ ನಿವಾಸಿ ಮಹಾಲಿಂಗಪ್ಪ ಶಿರೋಳ ಮಾತನಾಡಿ, ಯಾವುದೇ ರೀತಿ ಸ್ಥಳ ತನಿಖೆ ಮಾಡದೆ, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪುರಸಭೆ ಮುಖ್ಯಾಧಿಕಾರಿಗಳು ಮೊಬೈಲ್ ಟವರ್ ಕೂಡಿಸಲು ಅನುಮತಿ ನೀಡಿದ್ದು, ಸಾರ್ವಜನಿಕರ ಆರೋಗ್ಯ ಮತ್ತು ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಕೂಡಲೇ ಈ ಕಾಮಗಾರಿ ಸ್ಥಗಿತಗೊಳಿಸಬೇಕು. ಇಲ್ಲಿ ತೆಗೆದಿರುವ ಸುಮಾರು ೨೦ ಅಡಿ ಆಳ ೩೦ ಅಡಿ ಅಗಲದ ಗುಂಡಿ ಮುಚ್ಚಬೇಕು. ಮಕ್ಕಳು, ವೃದ್ಧರು, ದನಕರುಗಳು ಬೀಳುವ ಸಂಭವವಿದೆ. ಒಂದು ವೇಳೆ ನಮ್ಮ ಮನವಿ ಪರಿಗಣಿಸದೆ ಹೋದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಸತ್ಯಾಗ್ರಹ ಕೈಗೊಳ್ಳುವುದಾಗಿ ತಿಳಿಸಿದರು.ಪುರಸಭೆ ಮಾಜಿ ಸದಸ್ಯ ಚನ್ನಬಸು ಯರಗಟ್ಟಿ, ಸಂಜಯ ರಾಥೋಡ, ಎಸ್.ಎಂ. ಶಿರೋಳ, ಪಿ.ಎನ್. ಮಗದುಮ್‌, ಶಿವಾನಂದ ಬಿರಾಜನವರ, ಸುಶೀಲವ್ವ ಬಿರಾಜನವರ, ಎಂ.ಎಂ. ಶಿರೋಳ, ಪಿ.ಎಂ. ಬಿಸಿಗುಪ್ಪಿ, ಉದಯ ಬಿಸಗುಪ್ಪಿ, ವಿ.ಎಂ. ಬಿಸುಗುಪ್ಪಿ, ಆರ್.ಎ. ಬಿಸಗುಪ್ಪಿ, ಬಿ.ಎಂ. ತೋಟದ, ಎಂ.ವೈ. ತೋಟದ, ಜಿ.ಎನ್. ಮುಂಡಗನೂರ, ಎಲ್ . ಎಸ್. ಶಿರೋಳ, ಎಸ್.ಎಂ. ಅಂಗಡಿ, ಶ್ರುತಿ ತೋಟದ, ಕಾರ್ತಿಕ ಗುದ್ದಲಿ, ಪದ್ಮಾವತಿ ಶಿರೋಳ, ದಾನೇಶ ತೇಲಿ, ಸರಿತಾ ಶಿರೋಳ, ವಂಜನಾ ಹಟ್ಟಿ, ಪ್ರಭು ತೇಲಿ, ಆರ್.ಎ. ಅತ್ತಾರ, ಉಮರ್ ಮುಲ್ಲಾ, ಕವಿತಾ ಚವಾನ್, ಎಸ್.ಎಂ. ಹಿರೇಮಠ ಇತರರು ಇದ್ದರು.

ಯಾವುದೇ ಟವರ್ ಕೂಡಿಸಲು ಸುಪ್ರೀಂಕೋರ್ಟ್ ಆದೇಶದಂತೆ ಟೆಲಿಕಾಂ ಇಲಾಖೆಯ ಎನ್ ಓಸಿ ಅಗತ್ಯವಿದೆ. ಅದನ್ನು ತರದೇ ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸುವಂತಿಲ್ಲ ಎಂದು ಈಗಾಗಲೇ ಕಾಮಗಾರಿ ಸ್ಥಗಿತಗೊಳಿಸಲು ನಿರ್ದೇಶನ ನೀಡಿದ್ದೇನೆ.

- ನಾಮದೇವ ಲಮಾಣಿ, ಮುಖ್ಯಾಧಿಕಾರಿ ಪುರಸಭೆ ಮಹಾಲಿಂಗಪುರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೆಲಕ್ಕೆ ಬೇಕಾಗುವ ಚಿಂತನೆ ಮಾಡೋದು ಸಾಹಿತ್ಯದ ಕೆಲಸ; ವೈ.ಎಂ.ಯಾಕೊಳ್ಳಿ
ನಿಡಗುಂದಿಯಲ್ಲಿ ಬೃಹತ್‌ ಶೋಭಾಯಾತ್ರೆ, ಕೇಸರಿಮಯ