ಮೊಬೈಲ್‌ ಬಳಕೆ ಮಕ್ಕಳಲ್ಲಿ ಕಡಿಮೆ ಇರಬೇಕು: ಶಶಿಶೇಖರ ಸಿದ್ದಬಸವ ಸ್ವಾಮೀಜಿ

KannadaprabhaNewsNetwork | Published : Jan 31, 2024 2:16 AM

ಸಾರಾಂಶ

ಇತ್ತೀಚೆಗೆ ಜನರ ಅತೀ ಹೆಚ್ಚು ಮಟ್ಟದ ಅನ್ವೇಷಣೆಯೆಂದರೆ ಅದು ಮೊಬೈಲ್ ಚಳುವಳಿಯೇ ಆಗಿದೆ. ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವುದರಿಂದ ಅನುಕೂಲ, ಅನಾನುಕೂಲ ಎರಡೂ ಇದೆ. ಯೂಟ್ಯೂಬ್, ಪೇಸ್‌ಬುಕ್, ಟ್ವಿಟರ್, ವ್ಯಾಟ್ಸಪ್‌ ಮುಂತಾದ ಸಾಮಾಜಿಕ ಜಾಲತಾಣಗಳು ಜನರ ಪ್ರತಿಭೆಯನ್ನು ಭಾವನೆಗಳನ್ನು ಹೊರಹಾಕಲು ಸುಂದರವಾದ ವೇದಿಕೆಯೂ ಆಗಿದೆ. ವಿಕೃತ ಮನಸ್ಸುಗಳ ವಿಕೃತ ಅಭಿಪ್ರಾಯಗಳಿಗೂ ವೇದಿಕೆ ಒದಗಿಸುತ್ತದೆ ಎಂದು ಬೂದಿಹಾಳ್ ವಿರಕ್ತ ಮಠದ ಪೀಠಾಧಿಪತಿ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಹೇಳಿದರು. ಅರವಿಂದ ವೈಭವ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳ ವೈಭವ । ಬೂದಿಹಾಳ್ ವಿರಕ್ತ ಮಠದ ಪೀಠಾಧಿಪತಿ । ಸಾಂಸ್ಕೃತಿಕ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಅರಸೀಕೆರೆ

ಇತ್ತೀಚೆಗೆ ಜನರ ಅತೀ ಹೆಚ್ಚು ಮಟ್ಟದ ಅನ್ವೇಷಣೆಯೆಂದರೆ ಅದು ಮೊಬೈಲ್ ಚಳುವಳಿಯೇ ಆಗಿದೆ. ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವುದರಿಂದ ಅನುಕೂಲ, ಅನಾನುಕೂಲ ಎರಡೂ ಇದೆ. ಯೂಟ್ಯೂಬ್, ಪೇಸ್‌ಬುಕ್, ಟ್ವಿಟರ್, ವ್ಯಾಟ್ಸಪ್‌ ಮುಂತಾದ ಸಾಮಾಜಿಕ ಜಾಲತಾಣಗಳು ಜನರ ಪ್ರತಿಭೆಯನ್ನು ಭಾವನೆಗಳನ್ನು ಹೊರಹಾಕಲು ಸುಂದರವಾದ ವೇದಿಕೆಯೂ ಆಗಿದೆ. ವಿಕೃತ ಮನಸ್ಸುಗಳ ವಿಕೃತ ಅಭಿಪ್ರಾಯಗಳಿಗೂ ವೇದಿಕೆ ಒದಗಿಸುತ್ತದೆ. ಆದುದರಿಂದ ಮಕ್ಕಳ ಪೋಷಕರು ಮೊಬೈಲ್ ಪೋನ್‌ಗೆ ಸಂಬಂಧಪಟ್ಟಂತೆ ಮಕ್ಕಳ ಚಲನ ವಲನಗಳನ್ನು ಗಮನಿಸಬೇಕು. ಮೊಬೈಲ್ ಬಳಕೆ ಮಕ್ಕಳಲ್ಲಿ ಕಡಿಮೆ ಮಾಡಬೇಕು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಮಾಹಿತಿಗಳ ಬಗ್ಗೆ ಜಾಗೃತಿ ಇರಲಿ ಎಂದು ಬೂದಿಹಾಳ್ ವಿರಕ್ತ ಮಠದ ಪೀಠಾಧಿಪತಿ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಪೋಷಕರಿಗೆ ಕಿವಿಮಾತು ಹೇಳಿದರು.

ತಾಲೂಕಿನ ದೊಡ್ಡಮೇಟಿಕುರ್ಕೆ ಗ್ರಾಮದ ಶ್ರೀ ಶಾಂತವೀರ ಸ್ವಾಮಿ ವಿದ್ಯಾಸಂಸ್ಥೆಯ ಅರವಿಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅರವಿಂದ ವೈಭವ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಮಕ್ಕಳು ಓದುವುದರ ಜತೆ ತಮ್ಮದೇ ಆದ ವೈಯಕ್ತಿಕ ಕಲೆಗಳನ್ನು ಇಟ್ಟುಕೊಂಡಿರುತ್ತಾರೆ. ಇಂತಹ ಪ್ರತಿಭೆಗಳನ್ನು ಹೊರಸೂಸಬೇಕಾದರೆ ಇಂತಹ ಕಾರ್ಯಕ್ರಮ ಅತ್ಯಗತ್ಯ ಮಕ್ಕಳಿಗೆ ವಿದ್ಯೆಯ ಜತೆ ಸಂಸ್ಕಾರ, ಆಚಾರ ವಿಚಾರಗಳನ್ನು ಕಲಿಸುವುದರ ಮುಖಾಂತರ ಸಮಾಜಮುಖಿಯಾಗಿ ಮಕ್ಕಳನ್ನು ಬೆಳೆಸಬಹುದು. ಪೋಷಕರು ಕೂಡ ಶಾಲೆಯಿಂದ ಮನೆಗೆ ಬಂದ ಮಕ್ಕಳನ್ನು ಅವರ ಚಲನ ವಲನ ಆವಾವ ದಿನದ ದಿನಚರಿಯನ್ನು ಗಮನಿಸಬೇಕು ಎಂದರು.

ಶಿಕ್ಷಣ ಸಂಯೋಜಕ ಬಿ.ಎಸ್ ಗಿರೀಶ್ ಮಾತನಾಡಿ, ಮೊದಲು ನಗರ ಪ್ರದೇಶದಲ್ಲಿ ವಿದ್ಯಾಭ್ಯಾಸಕ್ಕೆ ಎಲ್ಲಾ ತರಹದ ಸೌಕರ್ಯ ಇದೆ ಎಂದು ಜನರು ಭಾವಿಸುತ್ತಿದ್ದರು. ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿ ಮಠದ ಪೀಠಾಧಿಪತಿಗಳು ಶಿಕ್ಷಣ ಕ್ಷೇತ್ರಕ್ಕೆ ಒತ್ತು ಕೊಟ್ಟು ಸೌಕರ್ಯ ಕಲ್ಪಿಸಿ ನಗರ ಪ್ರದೇಶದ ವಿದ್ಯಾಭ್ಯಾಸಕ್ಕಿಂತಲೂ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ಕಲ್ಪಿಸುವುದರ ಮೂಲಕ ಮಠಾಧಿಪತಿಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಕೊಡುಗೆ ಇದೆ ಎಂದರು

೨೦೨೨-೨೦೨೩ ನೇ ಸಾಲಿನಲ್ಲಿ ತಾಲೂಕಿಗೆ ಎಸ್‌ಎಸ್‌ಎಲ್‌ಸಿ ಯಲ್ಲಿ ೬೨೫ಕ್ಕೆ ೬೧೭ ಅಂಕ ಪಡೆದು ಮೂರನೇ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದ ಸ್ನೇಹಾ ಅವರಿಗೆ ಶಾಲಾ ಸಂಸ್ಥೆಯ ವತಿಯಿಂದ ಲ್ಯಾಪ್‌ಟಾಪ್ ಕೊಡುವುದರ ಮುಖಾಂತರ ವಿದ್ಯಾರ್ಥಿನಿಯನ್ನು ಪ್ರೋತ್ಸಾಹಿಸಲಾಯಿತು ಎಂದರು.

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಸಿ.ಈ ಶಂಕರ್, ಶಿಕ್ಷಣ ಸಂಯೋಜಕ ಬಿ.ಯೋಗೀಶ್, ಕಣಕಟ್ಟೆ ವೃತ್ತ ಬಿಆರ್‌ಪಿ ಬಿ.ಎಲ್ ಮಲ್ಲಿಕಾರ್ಜುನ್, ಡಿ.ಎಂ ಕುರ್ಕೆ ಕ್ಲಸ್ಟರ್ ಮಟ್ಟದ ಸಿ.ಆರ್.ಪಿ ಜಯಣ್ಣ, ಸಂಸ್ಥೆಯ ಕಾರ್ಯದರ್ಶಿ ಪರಮೇಶ್ವರಪ್ಪ, ನಿರ್ದೇಶಕ ಮಲ್ಲಿಕಾರ್ಜುನಪ್ಪ ಎಚ್.ಜಿ, ಹಾಗೂ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಪೋಷಕರು ಗ್ರಾಮಸ್ಥರು ಭಾಗವಹಿಸಿದ್ದರು.ತಾಲೂಕಿನ ದೊಡ್ಡಮೇಟಿ ಕುರ್ಕೆ ಗ್ರಾಮದ ಶ್ರೀ ಶಾಂತವೀರ ಸ್ವಾಮಿ ವಿದ್ಯಾಸಂಸ್ಥೆಯ ಅರವಿಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅರವಿಂದ ವೈಭವ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೂದಿಹಾಳ್ ವಿರಕ್ತ ಮಠದ ಪೀಠಾಧಿಪತಿ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಆಶೀರ್ವಚನ ನೀಡಿದರು.

Share this article