ರಾಯಚೂರಲ್ಲಿ ಮಾಕ್‌ ಡ್ರಿಲ್‌ ಯಶಸ್ವಿ, ಇಂದು ಮೈಸೂರಲ್ಲಿ ಅಣಕು ಪ್ರದರ್ಶನ

KannadaprabhaNewsNetwork |  
Published : May 10, 2025, 01:12 AM IST
10 | Kannada Prabha

ಸಾರಾಂಶ

ಭಾರತ-ಪಾಕ್‌ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದೇಶಾದ್ಯಂತ ಮಾಕ್ ಡ್ರಿಲ್‌ ನಡೆಸಲು ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ. ಅದರಂತೆ ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಶುಕ್ರವಾರ ‘ಮಾಕ್ ಡ್ರಿಲ್ ಅಪರೇಷನ್ ಅಭ್ಯಾಸ್’ ಪೂರ್ಣ ಪ್ರಮಾಣದ ನಾಗರಿಕ ರಕ್ಷಣಾ ಅಣಕು ಕವಾಯತು ಯಶಸ್ವಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ರಾಯಚೂರು/ಮೈಸೂರು/ಮಂಡ್ಯ

ಭಾರತ-ಪಾಕ್‌ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದೇಶಾದ್ಯಂತ ಮಾಕ್ ಡ್ರಿಲ್‌ ನಡೆಸಲು ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ. ಅದರಂತೆ ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಶುಕ್ರವಾರ ‘ಮಾಕ್ ಡ್ರಿಲ್ ಅಪರೇಷನ್ ಅಭ್ಯಾಸ್’ ಪೂರ್ಣ ಪ್ರಮಾಣದ ನಾಗರಿಕ ರಕ್ಷಣಾ ಅಣಕು ಕವಾಯತು ಯಶಸ್ವಿಯಾಗಿ ನಡೆಯಿತು.

ಶಕ್ತಿನಗರದ ಹೆಲಿಪ್ಯಾಡ್ ಕೇಂದ್ರದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಎನ್ ಡಿಆರ್ ಎಫ್, ಎಸ್ ಡಿ ಆರ್‌ಎಫ್, ಕೆಪಿಟಿಸಿಎಲ್, ಸಿಐಎಸ್ಎಫ್ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಾಗರಿಕ ರಕ್ಷಣಾ ಅಣಕು ಪ್ರದರ್ಶನವನ್ನು ಕೈಗೊಳ್ಳಲಾಯಿತು.

ಯುದ್ಧದ ವಾತಾವರಣದಲ್ಲಿ ಏಕಾಏಕಿ ಎರಗುವ ವಿವಿಧ ರೀತಿಯ ಬಾಂಬ್‌ ದಾಳಿಯನ್ನು ಯಾವ ರೀತಿಯಾಗಿ ಎದುರಿಸಬೇಕು ಎನ್ನುವುದನ್ನು ಅಣಕು ಪ್ರದರ್ಶನದ ಮುಖಾಂತರ ತೋರಿಸಲಾಯಿತು. ನೂರಾರು ಜನರು ಕುತೂಹಲದಿಂದ ‘ಆಪರೇಷನ್‌ ಅಭ್ಯಾಸ್‌’ ವೀಕ್ಷಿಸಿದರು.

ಈ ಮಧ್ಯೆ, ಸಾಂಸ್ಕೃತಿಕ ನಗರಿ ಮೈಸೂರು ಅರಮನೆಯ ಆವರಣದಲ್ಲಿ ಶನಿವಾರ ಸಂಜೆ 4ಕ್ಕೆ ಮಾಕ್ ಡ್ರಿಲ್ ನಡೆಯಲಿದೆ. ಇದಕ್ಕಾಗಿ ಶುಕ್ರವಾರ ಸಂಜೆ ಅರಮನೆಯಲ್ಲಿ ಪೂರ್ವಭಾವಿಯಾಗಿ ತಾಲೀಮು ಜರುಗಿತು. ಮಂಡ್ಯ ಜಿಲ್ಲೆಯ ವಿಶ್ವವಿಖ್ಯಾತ ಕೆಆರ್‌ಎಸ್‌ನಲ್ಲಿ ಭಾನುವಾರ ಸಂಜೆ 4 ರಿಂದ 7ರವರೆಗೆ ಮಾಕ್‌ ಡ್ರಿಲ್‌ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ। ಕುಮಾರ ತಿಳಿಸಿದ್ದಾರೆ.++

ಫೋಟೊ ಕ್ಯಾಪ್ಶನ್‌:

ಮೈಸೂರು ಅರಮನೆಯಲ್ಲಿ ಶುಕ್ರವಾರ ನಡೆದ ಮಾಕ್ ಡ್ರಿಲ್ ಪೂರ್ವಭಾವಿ ತಾಲೀಮು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ