ಹೊಸಕೋಟೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಇಡೀ ದೇಶದಲ್ಲಿಯೇ ಅಭಿವೃದ್ದಿ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.
ಮಾಜಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಸುಧಾಕರ್ ಅಭ್ಯರ್ಥಿ ಎಂದು ಘೋಷಣೆಯಾದ ತಕ್ಷಣ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಲೀಸು ಎಂದು ಸಂಭ್ರಮಪಟ್ಟವರಿಗೆ ಚುನಾವಣೆ ಫಲಿತಾಂಶದವರೆಗೂ ಕಾಯಿರಿ ಎಂದಿದ್ದೆ. ಆದರೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಿ ಚಿಕ್ಕಬಳ್ಳಾಪುರದ ಅಭಿವೃದ್ಧಿಗೆ ಶ್ರಮಿಸಲು ಸುಧಾಕರ್‌ಗೆ ಆಶೀರ್ವಾದ ಮಾಡಿದ್ದೀರಿ ಎಂದು ಕ್ಷೇತ್ರದ ಮತದಾರರಿಗೆ ಧನ್ಯವಾದ ಅರ್ಪಿಸಿದರು.
ಬಾಕ್ಸ್ .....ಎಂಟಿಬಿ ನನ್ನ ಹಿರಿಯ ಸಹೋದರ ಇದ್ದಂತೆ
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತದಾರರು ನನಗೆ ಆಶೀರ್ವಾದ ಮಾಡಿ ಸಂಸದನನ್ನಾಗಿ ಮಾಡಿ ರಾಜಕೀಯ ಪುನರ್ಜನ್ಮ ಕೊಟ್ಟಿದ್ದಾರೆ. ನನಗೆ ಚುನಾವಣಾ ಸ್ಪರ್ಧೆಗೆ ಟಿಕೆಟ್ ಧಕ್ಕಿ, ಗೆಲುವು ಸಾಧಿಸುವವರೆಗೆ ನನ್ನ ಬೆನ್ನಿಗೆ ಎಂಟಿಬಿ ನಾಗರಾಜ್ ಅವರು ಒಬ್ಬ ಹಿರಿಯ ಸಹೋದರನಂತೆ ಶ್ರಮಿಸಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್ ಎಂಟಿಬಿ ಕಾರ್ಯಕ್ಕೆ ಪ್ರಶಂಶಿಸಿದರು.ಫೋಟೋ: 19 ಹೆಚ್‌ಎಸ್‌ಕೆ 3
ಹೊಸಕೋಟೆಯಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್, ಸಂಸದ ಡಾ.ಕೆ.ಸುಧಾಕರ್ ಕ್ಷೇತ್ರದ ಅಭಿವೃದ್ಧಿ ಮಾಡುವ ಬಗ್ಗೆ ಕೈ ಮೇಲೆತ್ತಿ ಒಗ್ಗಟ್ಟು ಪ್ರದರ್ಶಿಸಿದರು.