ಪ್ರಾಕೃತಿಕ ಸಂಪನ್ಮೂಲ ಮಿತ ಬಳಕೆ ಮುಂದಿನ ಪೀಳಿಗೆಗೆ ಸಹಕಾರಿ

KannadaprabhaNewsNetwork |  
Published : Jun 08, 2026, 03:45 AM IST
ಫೋಟೋವಿವರ- (5ಎಚ್‌ಪಿಟಿ1) ಮರಿಯಮ್ಮನಹಳ್ಳಿ ಸಮೀಪದ ಬಿಎಂಎಂ ಕಾರ್ಖಾನೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ಪ್ರಾಕೃತಿಕ ಸಂಪನ್ಮೂಲಗಳ ಮಿತ ಬಳಕೆಯಿಂದ ಮಾತ್ರ ಮುಂದಿನ ಪೀಳಿಗೆಯ ಭವಿಷ್ಯ ಉಜ್ವಲವಾಗಲಿದೆ

ಮರಿಯಮ್ಮನಹಳ್ಳಿ: ಪ್ರಾಕೃತಿಕ ಸಂಪನ್ಮೂಲಗಳ ಮಿತ ಬಳಕೆಯಿಂದ ಮಾತ್ರ ಮುಂದಿನ ಪೀಳಿಗೆಯ ಭವಿಷ್ಯ ಉಜ್ವಲವಾಗಲಿದೆ ಎಂದು ಬಿಎಂಎಂ ಇಸ್ಪಾತ್‌ ಸಂಸ್ಥೆಯ ನಿರ್ದೇಶಕ ಮಂಜುನಾಥ ಪ್ರಭು ಅಭಿಪ್ರಾಯಪಟ್ಟರು.ಸಮೀಪದ ಬಿಎಂಎಂ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಸರ ರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮಹತ್ವ ನಾವೆಲ್ಲರೂ ಅರಿಯಬೇಕಿದೆ. ಮಾನವ ಸೇರಿದಂತೆ ಇತರೆ ಪ್ರಾಣಿ, ಪಕ್ಷಿಗಳು ಸೇರಿದಂತೆ ಪ್ರತಿ ಜೀವ ಸಂಕುಲವೂ ಆಹಾರ, ಗಾಳಿ, ನೀರು, ಇತರೆ ಅಗತ್ಯತೆಗಳು ಪರಿಸರವನ್ನು ಅವಲಂಭಿಸಿವೆ. ಆದರೆ ಮನುಷ್ಯ ಆಧುನಿಕತೆಯಿಂದ ಸುಂದರ ಪರಿಸರವನ್ನು ನಾಶ ಪಡಿಸಬಾರದು ಎಂದುು ಅವರು ಹೇಳಿದರು.

ಪರಿಸರ ರಕ್ಷಣೆಯನ್ನು ಸಕ್ರೀಯವಾಗಿ ಉತ್ತೇಜಿಸಲು ಹಾಗೂ ಆರೋಗ್ಯಕರ ಜೀವನ ನಮ್ಮದಾಗಲು ನಾವೆಲ್ಲರೂ ಪರಿಸರರ ಕ್ಷಣೆಗೆ ಕೈಜೋಡಿಸಬೇಕು. ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಸಂಸ್ಥೆಯಲ್ಲಿ ಎಂಬತ್ತು ಸಾವಿರದಿಂದ ಒಂದು ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಮನೀಶ್. ಡಿ. ವರ್ಣೇಕ ಮಾತನಾಡಿ, ಮನುಷ್ಯ ಜೀವ ಸಂಕುಲದ ಏಳ್ಗೆಗಾಗಿ ಗಾಳಿ, ನೀರು, ಮತ್ತು ಮಣ್ಣು ಕಲುಷಿತಗೊಳ್ಳದಂತೆ ನಾವು ನೋಡಿಕೊಳ್ಳಬೇಕು. ಜೀವ ಜೀವವೈವಿಧ್ಯತೆಯ ರಕ್ಷಣೆಗಾಗಿ ನಾವೆಲ್ಲರೂ ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳೆಸ ಬೇಕಾದ ಅನಿವಾರ್ಯತೆ ಇದೆ. ನೈಸರ್ಗಿಕ ಸ್ಥಳಗಳು ಮತ್ತು ವನ್ಯ ಜೀವಿಗಳ ರಕ್ಷಣೆ ಜೊತೆ ಹವಾಮಾನ ವೈಪರೀತ್ಯದ ಬಗ್ಗೆ ಪ್ರತಿಯೊಬ್ಬರು ಜಾಗೃತಿ ಹೊಂದಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ವಿಮಲ್ ಸಿಂಗ್, ಪ್ರಧಾನ ಹಣಕಾಸು ಅಧಿಕಾರಿ ವಿವಿವಿ ರಾಜು, ಹಣಕಾಸು ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ರಾಜೇಂದ್ರ ಮುಂದ್ರಾ, ಸಂಸ್ಥೆಯ ನಿರ್ದೇಶಕರಾದ ಗಣೇಶ್ ಹೆಗಡೆ ಸಭೆಯಲ್ಲಿ ಉಪಸ್ಥಿತರಿದ್ದರು.

ಬಿಎಂಎಂನ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್ ಕಾಕನೂರು ಸೇರಿದಂತೆ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಮನೀಶ್ ಡಿ. ವರ್ಣೇಕರ್ ಸ್ವಾಗತಿಸಿದರು. ಸುರಕ್ಷತಾ ವಿಭಾಗದ ದಿನೇಶ್ ಮಿಶ್ರಾ ವಂದಿಸಿದರು. ಪರಿಸರ ವಿಭಾಗದ ವ್ಯವಸ್ಥಾಪಕ ಸಂಜಯ್ ಬಂಡಾರೆ ನಿರೂಪಿಸಿದರು.

ಇದಕ್ಕೂ ಮುನ್ನ ಸಂಸ್ಥೆಯು ಆಯೋಜಿಸಿದ್ದ ಪರಿಸರ ದಿನಾಚರಣೆಯ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನುವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾಸ್ ಗೀಸರ್ ಸೋರಿಕೆ: ಪ್ರವಾಸಿ ಯುವತಿ ಸಾವು
ಜಿಲ್ಲೆಯ ಗೌರವ ಹೆಚ್ಚಿಸುವ ಕಾರ್ಯ ಮಾಡುವೆ: ಸಚಿವ ಖಾದರ್