ಸುಭದ್ರ ಆಡಳಿತಕ್ಕೆ ಮತ್ತೊಮ್ಮೆ ಮೋದಿಗೇ ಅವಕಾಶ: ಸದ್ಗುರು ಪ್ರದೀಪ್ ಪ್ರತಿಪಾದನೆ

KannadaprabhaNewsNetwork | Published : Jun 5, 2024 12:31 AM

ಸಾರಾಂಶ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಹೊಸದುರ್ಗದ ಟಿವಿ ವೃತ್ತದಿಂದ ಮದಕರಿ ವೃತ್ತದ ವರೆಗೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ನಡೆಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ರಾಷ್ಟ್ರೀಯತೆ, ಹಿಂದುತ್ವ, ರಾಷ್ಟ್ರೀಯ ಭದ್ರತೆಯ ನರೇಂದ್ರ ಮೋದಿಜಿ ಅವರ ಸುಭದ್ರ ಆಡಳಿತಕ್ಕೆ ಮತ್ತೊಮ್ಮೆ ಮತದಾರ ಮತ ಹಾಕಿದ್ದಾರೆ ಎಂದು ಬಿಜೆಪಿ ಮುಖಂಡ ಉದ್ಯಮಿ ಸದ್ಗುರು ಪ್ರದೀಪ್ ತಿಳಿಸಿದರು.

ಹೊಸದುರ್ಗದ ಟಿವಿ ವೃತ್ತದಿಂದ ಮದಕರಿ ವೃತ್ತದವರೆಗೆ ಸಾಗಿದ ಬಿಜೆಪಿ ಕಾರ್ಯಕರ್ತರ ಮೆರವಣಿಗೆಯಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿಯವರ ಎರಡು ಬಾರಿ ಆಡಳಿತ ನೋಡಿದ ಮತದಾರ ಮೂರನೇ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮತ ಹಾಕಿದ್ದು ಈ ಬಾರಿ ನರೇಂದ್ರ ಮೋದಿಯವರು ರಾಷ್ಟ್ರೀಯ ವಿಚಾರದಲ್ಲಿ ಆಮೂಲಾಗ್ರ ಬದಲಾವಣೆ ತರಲಿದ್ದಾರೆ ಎಂದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ 8 ಜನ ಶಾಸಕರಲ್ಲಿ 7 ಜನ ಕಾಂಗ್ರೆಸ್ ಶಾಸಕರಿದ್ದರೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರಕ್ಕೆ ಬಿಜೆಪಿಗೆ ಈ ನಿಟ್ಟಿನ ಬೆಂಬಲವನ್ನು ನೀಡಿರುವುದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರರ ಪ್ರಬುದ್ಧತೆಯನ್ನು ಮೆರೆದಿದೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಒಗ್ಗಟ್ಟಿನ ಕೆಲಸವೇ ಈ ಗೆಲುವಿಗೆ ಕಾರಣ.ನರೇಂದ್ರ ಮೋದಿ ಹಾಗೂ ಸಜ್ಜನ ವ್ಯಕ್ತಿತ್ವದ ಗೋವಿಂದ ಕಾರಜೋಳರವರ ವ್ಯಕ್ತಿತ್ವವನ್ನು ಮೆಚ್ಚಿ ಈ ಬಾರಿ ಹೊಸದುರ್ಗದ ಮತದಾರ ಅತ್ಯಂತ ಹೆಚ್ಚು ಮತ ಹಾಕುವುದರ ಮೂಲಕ ಸಹಕರಿಸಿದ್ದಾರೆ ಎಂದರು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಜಗದೀಶ್ ಮಾತನಾಡಿ, ಬಸವಣ್ಣನ ನಾಡಿನಿಂದ ಬಂದು ಚಿತ್ರದುರ್ಗದ ಮದಕರಿ ನಾಡಿನಲ್ಲಿ ಕೆಲವೇ ದಿನಗಳಲ್ಲಿ ಚಿತ್ರದುರ್ಗದ ಮತದಾರರ ಪ್ರೀತಿ ವಿಶ್ವಾಸದಿಂದ ಮನಸ್ಸುಗಳನ್ನ ಗೆದ್ದು ಸಂಸದರಾಗಿದ್ದು ಕ್ಷೇತ್ರದ ಅಭಿವೃದ್ಧಿ ಮಾಡಲೆಂಬುದು ನಮ್ಮ ಆಶಯ ಎಂದರು.

ತಾಲೂಕಿನಲ್ಲಿ ಬಿಜೆಪಿ ಶಕ್ತಿಯನ್ನು ಮತದಾರ ಮತ್ತೊಮ್ಮೆ ಮತ ಹಾಕುವುದರ ಮೂಲಕ ಬಿಜೆಪಿಯ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದ್ದಾರೆ. ದೇಶ ಅಭಿವೃದ್ಧಿ ಯಾಗಬೇಕೆಂದರೆ ಅದು ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ. ನಮ್ಮ ಕಾರ್ಯಕರ್ತರ ಶ್ರಮದಿಂದ ಈ ಬಾರಿ ಹೊಸದುರ್ಗದಿಂದ ಅತಿ ಹೆಚ್ಚು ಮತ ಹಾಕಿ ಬಿಜೆಪಿ ಗೆಲ್ಲಲು ನಮ್ಮ ಕಾರ್ಯಕರ್ತರು ಕಾರಣರಾಗಿದ್ದಾರೆ ಎಂದರು.

ಈ ಸಮಯದಲ್ಲಿ ಬಿಜೆಪಿ ಎಸ್ ಸಿ ಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಗೂಳಿಹಟ್ಟಿ ಕೃಷ್ಣಮೂರ್ತಿ,. ಜೆ ಡಿ ಎಸ್ ಅಧ್ಯಕ್ಷ ಗಣೇಶ್, ಪುರಸಭಾ ಮಾಜಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ದಾಳಿಂಬೆ ಗಿರೀಶ್, ಕೆ, ಎಲ್ ನಾಗರಾಜ್, ಸರೋಜಮ್ಮ, ಮೀನಾಕ್ಷಿ ನಂದೀಶ್, ಪಾರ್ವತಮ್ಮ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಂಪ. ಮಾಜಿ ಜೀಪಂ ಸದಸ್ಯ ಆರ್ ಹನುಮಂತಪ್ಪ, ಬಿಜೆಪಿ ಉಪಾಧ್ಯಕ್ಷರಾದ ಲಿಂಗದೇವರು ಸಾ,ಚ ಮಂಜಯ್ಯ, ಜಿ ಎನ್ ಕೆರೆ ಪಚ್ಚಿ, ನರೇಂದ್ರ, ಮದುರೆ ಪ್ರವೀಣ್, ರವಿಕಿರಣ್ ಪಾಟೀಲ್, ಸಿದ್ದೇಶ್. ವಿರುಪಾಕ್ಷಪ್ಪ. ಮಾವಿನಕಟ್ಟೆ ಮಲ್ಲಿಕಾರ್ಜುನ್. ಸೇರಿದಂತೆ ನೂರಾರು ಕಾರ್ಯಕರ್ತರು ಜಯಘೋಷ ಕೋಗಿದರು.

Share this article