ಮೋದಿ ಗ್ಯಾರಂಟಿ ಉದ್ಯಮಿಗಳ ಪರ: ಪಾಟೀಲ್

KannadaprabhaNewsNetwork | Published : Apr 30, 2024 2:02 AM

ಸಾರಾಂಶ

ಮೋದಿ ಅವರು ನೀಡುವ ಗ್ಯಾರಂಟಿಗಳು ಉದ್ಯಮಿಗಳ ಹಿತ ಕಾಯುವ ಗ್ಯಾರಂಟಿಗಳಾಗಿವೆ ಹೀಗಾಗಿ ಜನಸಾಮಾನ್ಯರು ಜೀವನಕ್ಕೆ ಬೇಕಿರುವ ಗ್ಯಾರಂಟಿ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಲಿದ್ದಾರೆ: ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್

ಕನ್ನಡಪ್ರಭ ವಾರ್ತೆ ಚವಡಾಪುರ

ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿಗಳು ಜನರ ಜೀವನಕ್ಕೆ ಆಧಾರವಾಗಿದ್ದರೆ ಮೋದಿ ಅವರು ನೀಡುವ ಗ್ಯಾರಂಟಿಗಳು ಉದ್ಯಮಿಗಳ ಹಿತ ಕಾಯುವ ಗ್ಯಾರಂಟಿಗಳಾಗಿವೆ ಹೀಗಾಗಿ ಜನಸಾಮಾನ್ಯರು ಜೀವನಕ್ಕೆ ಬೇಕಿರುವ ಗ್ಯಾರಂಟಿ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಲಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ಹೇಳಿದರು.

ಅಫಜಲ್ಪುರ ಮತಕ್ಷೇತ್ರದ ಫರಹತಾಬಾದ ವಲಯದ ಹಸನಾಪುರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ವಿಧಾನಸಭೆ ಚುನಾವಣೆ ವೇಳೆಯಲ್ಲಿ ನಾವು ನೀಡಿದ ವಾಗ್ದಾನಗಳನ್ನು ಪೂರ್ಣಗೊಳಿಸಿದ್ದೇವೆ. ನಮ್ಮ ಮೇಲೆ ನಂಬಿಕೆ ಇಟ್ಟು ಮತದಾರರು ಮತ ನೀಡಿದ್ದರು, ಹೀಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಈಗ ಲೋಕಸಭೆ ಚುನಾವಣೆಯಲ್ಲೂ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು ಜನಾಭಿಪ್ರಾಯ ಮತವಾಗಿ ಪರಿವರ್ತನೆಯಾಗುವುದರ ಮೂಲಕ ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಲಿದ್ದು ಕೇಂದ್ರದಲ್ಲೂ ಪಂಚ ಗ್ಯಾರಂಟಿಗಳು ಜಾರಿಗೆ ಬರಲಿವೆ ಎಂದ ಅವರು ಕಲಬುರಗಿ ಲೋಕಸಭೆಯಲ್ಲಿ ಈ ಬಾರಿ ರಾಧಾಕೃಷ್ಣ ದೊಡ್ಮನಿ ಅವರು ಭಾರಿ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ, ರಾಧಾಕೃಷ್ಣ ಗೆಲುವನ್ನು ಯಾರು ತಪ್ಪಿಸಲಾಗದು ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಫರಹತಾಬಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಶಾಕ್ ಪಟೇಲ್ ಮಾತನಾಡಿ ಜನ ಬಿಜೆಪಿಗರ ಸುಳ್ಳು ಭರವಸೆಗಳಿಂದ ರೋಷಿ ಹೋಗಿದ್ದಾರೆ. ಬಿಜೆಪಿ ಮೇಲಿನ ಸಿಟ್ಟನ್ನು ಅಸೆಂಬ್ಲಿ ಚುನಾವಣೆಯಲ್ಲಿ ತೋರಿಸಿದ್ದಾರೆ. ಈಗ ಲೋಕಸಭೆ ಚುನಾವಣೆಯಲ್ಲೂ ತೋರಿಸಲಿದ್ದಾರೆ. ನಮ್ಮ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಅವರು ಲೋಕಸಭೆಗೆ ಪ್ರವೇಶಿಸುವುದು ಖಚಿತವಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಅದ ಸೋಮಶೇಖರ ಕಲಬುರಗಿ, ಜ್ಯೋತಿ ಮರಗೋಳ, ಸಿದ್ದಣ್ಣ ವಾರದ, ಮಹೇಶ ಕೌಲಗಿ, ಶ್ರೀನಾಥ ದೊಡ್ಮನಿ, ಸುರೇಶ ತಿಬಶೆಟ್ಟಿ, ಬಸವರಾಜ ಜೋಗೂರ, ಚಂದ್ರಕಾಂತ, ರಾಜಾ ಪಟೇಲ, ಮ್ಲಿನಾಥ ಪಾಟೀಲ್, ಸೈಯದ ಹೇರೂರ, ಬುಕಾಂತ ಪಾಟೀಲ, ಶರಣು ಮಂದರವಾಡ, ಸೈಬಣ್ಣ ನೀಲಪ್ಪಗೋಳ, ಸಂಗಮನಾಥ ರಭಶೆಟ್ಟಿ, ಶರಣು ಶಿರೂರ, ಯೂನೂಸ ಪಟೇಲ, ರಮೇಶ ನಾಟಿಕಾರ ಸೇರಿದಂತೆ ಅನೇಕರು ಇದ್ದರು.

Share this article