ಭಾರತ ವಿಶ್ವಗುರುವಾಗಲು ಮೋದಿಯವರ ನಾಯಕತ್ವ ಅಗತ್ಯ: ಮಾಜಿ ಸಂಸದ ಮುನಿಸ್ವಾಮಿ

KannadaprabhaNewsNetwork |  
Published : Sep 18, 2025, 01:10 AM IST
೧೭ಕೆಎಲ್‌ಆರ್-೧೨-೧ಕೋಲಾರದಲ್ಲಿ ಮೋದಿಯವರ ೭೫ನೇ ಹುಟ್ಟುಹಬ್ಬದ ಅಂಗವಾಗಿ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನೂರಾರು ರೋಗಿಗಳಿಗೆ ಸಂಸದ ಮಲ್ಲೇಶಬಾಬು, ಮಾಜಿ ಸಂಸದ ಮುನಿಸ್ವಾಮಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. | Kannada Prabha

ಸಾರಾಂಶ

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರೊಂದಿಗೆ ಸೈನಿಕ್ ಪಬ್ಲಿಕ್ ಶಾಲೆ, ಚನ್ನೇಗೌಡ ನರ್ಸಿಂಗ್ ಕಾಲೇಜು ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಮಾತನಾಡಿ, ಮೋದಿ ಕನಸಿನ ಸ್ವಚ್ಛಭಾರತ ಅಭಿಯಾನ ಅವರ ಹುಟ್ಟುಹಬ್ಬವಾದ ಸೆ.೧೭ ರಿಂದ ಅ.೨ರ ಗಾಂಧೀಜಿ, ಶಾಸ್ತ್ರೀಜಿ ಜಯಂತಿಯವರೆಗೂ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಭಾರತ ವಿಶ್ವಗುರುವಾಗಲು ಹಗಲಿರುಳು ನಿಸ್ವಾರ್ಥತೆಯಿಂದ ದೇಶಕ್ಕಾಗಿ ದುಡಿಯುತ್ತಿರುವ ನರೇಂದ್ರಮೋದಿಯವರ ಜನಪರ ಕಾಳಜಿ, ದೇಶದ ಸಮಗ್ರ ಅಭಿವೃದ್ಧಿ, ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯುವ ದಿಟ್ಟತನದ ನಿರ್ಧಾರಗಳಿಂದಾಗಿ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಾಗಿದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ನಗರದಲ್ಲಿ ಮೋದಿ ೭೫ನೇ ಹುಟ್ಟುಹಬ್ಬದ ಅಂಗವಾಗಿ ಸ್ವಚ್ಛತಾ ಅಭಿಯಾನ, ರಕ್ತದಾನ, ಗಿಡನೆಡುವ ಕಾರ್ಯಕ್ರಮಗಳು, ರೋಗಿಗಳಿಗೆ ಹಣ್ಣುಹಂಪಲು ವಿತರಣೆ, ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಮತ್ತಿತರ ಹತ್ತಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರೊಂದಿಗೆ ಸೈನಿಕ್ ಪಬ್ಲಿಕ್ ಶಾಲೆ, ಚನ್ನೇಗೌಡ ನರ್ಸಿಂಗ್ ಕಾಲೇಜು ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಮಾತನಾಡಿ, ಮೋದಿ ಕನಸಿನ ಸ್ವಚ್ಛಭಾರತ ಅಭಿಯಾನ ಅವರ ಹುಟ್ಟುಹಬ್ಬವಾದ ಸೆ.೧೭ ರಿಂದ ಅ.೨ರ ಗಾಂಧೀಜಿ, ಶಾಸ್ತ್ರೀಜಿ ಜಯಂತಿಯವರೆಗೂ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.

ದೇಶದ ಮೇಲೆ ಭಯೋತ್ಪಾದಕ ದಾಳಿಗಳಾದ ಸಂದರ್ಭದಲ್ಲಿ ಹಿಂದಿನ ಸರ್ಕಾರಗಳು ಎಚ್ಚರಿಕೆಯ ಹೇಳಿಕೆಗಳಿಗೆ ಸೀಮಿತವಾಗಿದ್ದವು, ಆದರೆ ಮೋದಿ ದಿಟ್ಟತನದ ನಿರ್ಧಾರಗಳಿಂದಾಗಿ ನಮ್ಮ ವೀರಯೋಧರು ಪಾಕಿಸ್ತಾನದಲ್ಲಿನ ದುಷ್ಟರ ಶಿಬಿರಗಳ ಮೇಲೆ ಏರ್‌ಸ್ಟ್ರೈಕ್ ಮಾಡಿ ಧ್ವಂಸ ಮಾಡಿತು, ಹಾಗೆಯೇ ಆಪರೇಷನ್ ಸಿಂದೂರ ಮೂಲಕ ಇಡೀ ವಿಶ್ವಕ್ಕೆ ಭಾರತವನ್ನು ಕೆಣಕಿದರೆ ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಮೋದಿ ನೀಡಿದರು ಎಂದು ತಿಳಿಸಿದರು.

ಇತ್ತೀಚೆಗೆ ಜಿಎಸ್‌ಟಿ ಕಡಿಮೆ ಮಾಡುವ ಮೂಲಕ ಇಡೀ ದೇಶದ ಬಡವರು, ಮಧ್ಯಮ ವರ್ಗದ ಜನತೆಯ ಹಿತ ರಕ್ಷಣೆ ಮಾಡುವ ಅಭೂತಪೂರ್ವವಾದ ನಿರ್ಧಾರ ಕೈಗೊಂಡ ಮೋದಿ ಸರ್ಕಾರವು ಇಡೀ ವಿಶ್ವವೇ ಭಾರತದ ಆರ್ಥಿಕಾಭಿವೃದ್ಧಿಗೆ ತಲೆದೂಗುವಂತೆ ಮಾಡಿದ್ದಾರೆ ಎಂದರು.

ಮತಗಳ್ಳತನವೇ ಕಾಂಗ್ರೆಸ್‌ನ ನೀತಿ:

ದೇಶವನ್ನು ೬೦ ವರ್ಷವಾಳಿದ ಕಾಂಗ್ರೆಸ್ ಮತಗಳ್ಳತನವನ್ನೇ ತನ್ನ ಅಸ್ತ್ರವಾಗಿಸಿಕೊಂಡಿತ್ತು ಎಂಬ ಅನುಮಾನ ದೃಢಗೊಳ್ಳುತ್ತಿದೆ, ಅತ್ತ ರಾಹುಲ್ ಗಾಂಧಿಯವರು ಮೋದಿ ವಿರುದ್ಧ ಮತಗಳ್ಳತನದ ಆರೋಪ ಮಾಡುತ್ತಿರುವಾಗಲೇ ಜಿಲ್ಲೆಯ ಮಾಲೂರಿನ ಶಾಸಕರು ಅಸಿಂಧೂವಾಗಿದ್ದು, ಯಾರು ಮತಗಳ್ಳರು ಎಂಬ ಸತ್ಯವನ್ನು ಜನರಿಗೆ ತಲುಪಿಸಿದ್ದಾರೆ ಎಂದು ಲೇವಡಿ ಮಾಡಿದರು.

ರಾಮಮಂದಿರ ನಿರ್ಮಿಸಿ ಬಹುಸಂಖ್ಯಾತ ಹಿಂದೂಗಳ ಆಶಯ ಈಡೇರಿಸಿದ ಮೋದಿಯವರ ರಾಮರಾಜ್ಯದ ಕನಸು ನನಸಾಗಲು ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು, ಅವರಿಗೆ ಮುಕ್ಕೋಟಿ ದೇವರುಗಳ ಆಶೀರ್ವಾದ ಸಿಗಲಿ ಎಂಬುದೇ ನಮ್ಮ ಆಶಯ ಎಂದು ತಿಳಿಸಿ, ಈ ಕಾರಣದಿಂದಲೇ ನಗರದ ಕೋಲಾರಮ್ಮ, ಸೋಮೇಶ್ವರಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ ಎಂದರು.

ಸಂಸದ ಮಲ್ಲೇಶ ಬಾಬು ಮಾತನಾಡಿ, ಮೋದಿ ನಾಯಕತ್ವದಡಿ ಎನ್‌ಡಿಎ ಸಂಸದನಾಗಿ ಕೆಲಸ ಮಾಡಲು ಖುಷಿ ಇದೆ, ಸದಾ ದೇಶದ ಕುರಿತು ಚಿಂತನೆ ಮಾಡುವ ಮೋದಿಯಂತಹ ನಾಯಕರು ಮತ್ತೆ ಪ್ರಧಾನಿಯಾಗಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಮೋದಿಯವರ ನಿಸ್ವಾರ್ಥ ದೇಶಸೇವೆ, ಭ್ರಷ್ಟಾಚಾರ ನಿರ್ಮೂಲನೆಯ ಸಂಕಲ್ಪದಿಂದಾಗಿ ಇಂದು ಭಾರತ ವಿಶ್ವಮಾನ್ಯವಾಗಿದೆ ಎಂದರು.

ಮೋದಿ ಹುಟ್ಟುಹಬ್ಬದ ಅಂಗವಾಗಿ ನಗರದೇವತೆ ಕೋಲಾರಮ್ಮ, ಸೋಮೇಶ್ವರ ಸ್ವಾಮಿದೇವಾಲಯಗಳಲ್ಲಿ ಅಭಿಷೇಕ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ರಕ್ತದಾನ ಶಿಬಿರ ಅನಾಥಾಶ್ರಮಗಳಿಗೆ ನೆರವು ಮತ್ತಿತರ ಹಲವಾರು ಕಾರ್ಯಕ್ರಮಗಳನ್ನು ಮಾಜಿ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ನಗರಸಭಾ ಸದಸ್ಯ ಪ್ರವೀಣ್‌ಗೌಡ, ಬಿಜೆಪಿ ಮುಖಂಡರಾದ ಅರುಣಮ್ಮ, ಅಪ್ಪಿ ನಾರಾಯಣಸ್ವಾಮಿ, ಕಾಡುಗುರು ನಾಗಭೂಷಣ್, ಮುನೇಗೌಡ, ಬಜರಂಗದಳ ಬಾಲಾಜಿ, ಸವಿತಮ್ಮ, ತಿಮ್ಮರಾಯಪ್ಪ, ನಾಮಾಲ ಮಂಜು, ಶ್ರೀನಿವಾಸ್, ಗಾಂಧಿನಗರ ಮಹೇಶ್, ಕೆಂಬೋಡಿ ನಾರಾಯಣಸ್ವಾಮಿ, ಪ್ರಭುಗೌಡ, ಗಾಂಧಿನಗರ ವೆಂಕಟೇಶ್, ಸತೀಶ್, ರೂಪೇಶ್, ಸಂಪತ್, ವಂದೇ ಮಾತರಂ ರತ್ನಮ್ಮ, ಮೋಹನ್, ಜೆಡಿಎಸ್ ಮುಖಂಡರದ ಬಣಕನಹಳ್ಳಿ ನಟರಾಜ್ ಇದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ