ಕನ್ನಡಪ್ರಭ ವಾರ್ತೆ ಬೀದರ್
ಡಿ. 25ರಂದು ಬೀದರ್ ನಗರದ ನೆಹರು ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗಳಿಗೆ ಮಾಜಿ ಶಾಸಕರಾದ ಸುಭಾಷ ಕಲ್ಲೂರ, ಅಟಲ್ ಫೌಂಡೇಶನ್ ಅಧ್ಯಕ್ಷರಾದ ಗುರುನಾಥ ಕೊಳ್ಳುರ ಅವರು ಪಂದ್ಯಾವಳಿಗೆ ಚಾಲನೆ ನೀಡಿದ್ದರು ಎಂದು ಅಟಲ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 86 ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಹನ್ನೊಂದು ತಂಡಗಳು ತಾಲೂಕು ಮಟ್ಟದಲ್ಲಿ ವಿಜೇತರಾಗಿದ್ದು ಆ ತಂಡಗಳ ನಡುವೆ 6, 7, 8 ರಂದು ಹೊನಲು ಬೆಳಕಿನ (ಡೇ ನೈಟ್) ಕ್ವಾಟರ್ ಫೈನಲ್, ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಾವಳಿ ನಡೆಯಲಿವೆ.ಅಂತಿಮವಾಗಿ ವಿಜೇತರಾದ ವಿನ್ನರ್ಸ್ ತಂಡಕ್ಕೆ 1 ಲಕ್ಷ ರುಪಾಯಿ ಹಾಗೂ ರನ್ನರ್ಸ್ ತಂಡಕ್ಕೆ50 ಸಾವಿರ ರುಪಾಯಿ ಬಹುಮಾನವನ್ನ ಅಟಲ್ ಫೌಂಡೇಶನ್ ವತಿಯಿಂದ ವಿತರಿಸಲಾಗುತ್ತಿದೆ.
ತಾಲೂಕು ಮಟ್ಟದಲ್ಲಿ ವಿಜೇತ ತಂಡಗಳು: ಬಸವಕಲ್ಯಾಣ ಸ್ಕೈವೀವ್, ಔರಾದ್ ಹಾಸ್ಟೆಲ್ ಬಾಯ್ಸ್, ಭಾಲ್ಕಿ ಕರ್ನಾಟಕ ಕ್ರಿಕೆಟ್ ಕ್ಲಬ್ ಧನ್ನೂರಾ, ಹುಮನಾಬಾದ ಎಲೆವೆನ್ ಕ್ರಿಕೆಟ್ ಕ್ಲಬ್, ಚಿಂಚೋಳಿ ಸ್ಟಾರ್ಸ್ ಕ್ರಿಕೆಟ್ ಕ್ಲಬ್, ಬೀದರ್ ದಕ್ಷಿಣ ಸಂಗುಳಗಿ ತಾಂಡಾ ಕ್ರಿಕೆಟ್ ಕ್ಲಬ್, ಆಳಂದ ಸಿದ್ರಾಮೇಶ್ವರ ಫೈನಾನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಬೀದರ್‌ನ ಮನು ವಾರಿಯರ್ಸ ಕ್ರಿಕೆಟ್ ಕ್ಲಬ್, ಶ್ರೇಯಶ್ರೀ ಕ್ರಿಕೆಟ್ ಕ್ಲಬ್, ಅಮನ್ ಕ್ರಿಕೆಟ್ ಕ್ಲಬ್, ಚಾಲೆಂಜರ್ ಬಾಯ್ಸ್ ಕ್ರಿಕೆಟ್ ಕ್ಲಬ್ ವಿಜೇತಗಳಾಗಿವೆ.
ಪಂದ್ಯಾವಳಿಯ ಅಂತಿಮ ಹಂತದ ಸಿದ್ಧತೆಯನ್ನು ಅಟಲ್ ಫೌಂಡೇಶನ್ ಅಧ್ಯಕ್ಷರಾದ ಗುರುನಾಥ ಕೊಳ್ಳುರ, ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಬೀದರ ಕ್ರಿಕೆಟ್ ಅಸೋಸಿಯೇಷನ್ ಪ್ರಮುಖರಾದ ಅನೀಲ ದೇಶಮುಖ, ಸಂಜಯ ಜಾಧವ ಸೇರಿದಂತೆ ಇತರರಿದ್ದರು.