ಭಾರತದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ ಮೋದಿಜಿ

KannadaprabhaNewsNetwork | Published : Jul 2, 2025 12:19 AMUpdated   : Jul 02 2025, 12:20 AM IST
ಘಟಪ್ರಭಾ | Kannada Prabha

ಸಾರಾಂಶ

ಭಾರತದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ ಯಾರಾದರೂ ಪ್ರಧಾನಿ ಇದ್ದರೇ ಅವರು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಎಂದು ಹೆಮ್ಮೆಯಿಂದ ಹೆಳಬೇಕು ಎಂದು ಬೆಳಗಾವಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಘಟಪ್ರಭಾ

ಭಾರತದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ ಯಾರಾದರೂ ಪ್ರಧಾನಿ ಇದ್ದರೇ ಅವರು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಎಂದು ಹೆಮ್ಮೆಯಿಂದ ಹೆಳಬೇಕು ಎಂದು ಬೆಳಗಾವಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ ಹೇಳಿದರು.

ಘಟಪ್ರಭಾ ಶ್ರೀವಿಠ್ಠಲ ರುಕ್ಮಿಣಿ ದೇವಸ್ಥಾನದ ಆವರಣದಲ್ಲಿ ಶನಿವಾರ ಆಯೋಜಿಸಲಾದ ಪ್ರಧಾನಿ ನರೇಂದ್ರ ಮೋದಿಜಿಯವರ 11 ವರ್ಷದಲ್ಲಿ ಮಾಡಿದ ಸಾಧನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣಗಳ ನವೀಕರಣ, 16 ದೊಡ್ಡ ರೈಲು ನಿಲ್ದಾಣಗಳ ನವೀಕರಣ, ತ್ರೀವಳಿ ತಲಾಕ, 370 ಆರ್ಟಿಕಲ್, ರಾಮ ಮಂದಿರ ನಿರ್ಮಾಣ, ಮಹಿಳೆಯರ ಸಬಲೀಕರಣ, ಪೆಹಲ್‌ಗಾಮ ದಾಳಿ, ಸೈನಿಕರ ಶ್ರೇಯೋಬಿವೃದ್ಧಿ ಇಂತಹ ನೂರಾರು ಕೆಲಸಗಳನ್ನು ಅವಿರತ ಶ್ರಮದಿಂದ ಮಾಡಿ ದೇಶದ ನೆಚ್ಚಿನ ಪ್ರಧಾನಿಯಾಗಿದ್ದಾರೆ. ಪ್ರಧಾನಿ ಮೋದಿಜಿಯವರ ಕಾರ್ಯದ ಕುರಿತು ತಿಳಿಸಲು ಗಂಟೆಗಳು ಸಾಕಾಗುವುದಿಲ್ಲ ಹಾಗೂ ನಮ್ಮ ಶಾಸಕರಾದ ರಮೇಶ ಜಾರಕಿಹೋಳಿಯವರು ತಮ್ಮ ಕ್ಷೇತ್ರದಲ್ಲಿ ಅನೇಕ ಪ್ರಗತಿಪರ ಕಾರ್ಯಗಳನ್ನು ಮಾಡಿ ಜನಾನುರಾಗಿಯಾಗಿದ್ದಾರೆ ಎಂದು ತಿಳಿಸಿದರು.ಕೆ.ಆರ್.ಎಚ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಮಣ್ಣ ಹುಕ್ಕೇರಿ ಮಾತನಾಡಿ, ಆರ್ಟಿಕಲ್ 370 ತೆಗೆದರೆ ರಕ್ತಪಾತವಾಗುತ್ತದೆ ಎಂದು ಬೋಗಳೆ ಬಿಡುತ್ತಿರುವವರ ಬಾಯಿಗೆ ಬೀಗ ಹಾಕಿ ಯಾವುದೇ ಅನಾಹುತವಾಗದಂತೆ 370 ಆರ್ಟಿಕಲ್ ತೆಗೆದು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಿದ ಕಿರ್ತಿ ನರೆಂದ್ರ ನಮೋದಿಯವರಿಗೆ ಸಲ್ಲುತ್ತದೆ. ಶಾಸಕರಾದ ರಮೇಶ ಜಾಕಿಹೋಳಿಯವರು ಜನರ ಕಷ್ಟಗಳಿಗೆ ಸ್ಪಂದಿಸುತ್ತ ದೀನ ದಲಿತರ ಬಂಧುವಾಗಿದ್ದಾರೆ ಎಂದರು.ಗೋಕಾಕ ಮತಕ್ಷೇತ್ರದ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತದ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯ ಹಾಗೂ ನರೇಂದ್ರ ಮೋದಿಜಿಯವರ ಸಾಧನೆಗಳನ್ನು ತಿಳಿಸಿ, ಕಾರ್ಯಕರ್ತರು ಮೋದಿಜಿಯವರ ಸಾಧನೆಗಳನ್ನು ಮನೆ, ಮನೆಗೆ ಮುಟ್ಟಿಸಿ ಮೋದಿಜಿ ಹಾಗೂ ರಮೇಶ ಜಾರಕಿಹೋಳಿಯವರ ಕೈ ಪಡಿಸಬೇಕು ಎಂದು ಮನವಿ ಮಾಡಿದರು.

ಸುರೇಶ ಪಾಟೀಲ ಕಾರ್ಯಕ್ರಮ ಕುರಿತು ಮಾತನಾಡಿದರು. ಶ್ರೀಕಾಂತ ಮಹಾಜನ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ವೇದಿಕೆಯ ಮೇಲೆ ದೇವಪ್ದ ದಳವಾಯಿ, ಹಿರಿಯ ಮುಖಂಡರಾದ ಜಿ.ಎಸ್.ರಜಪೂತ, ಸುರೇಶ ಪಾಟೀಲ, ನಾಗಲಿಂಗ ಪೊತದಾರ, ಸುರೇಶ ಕಾಡದವರ, ರಮೇಶ ತುಕ್ಕಾನಟ್ಟಿ, ಸುನೀಲ ಜಮಖಂಡಿ ಇದ್ದರು.ಕಾರ್ಯಕ್ರಮದಲ್ಲಿ ಕಿರಣ ವಾಲಿ, ಅರವಿಂದ ಬಡಕುಂದ್ರಿ, ಅರುಣ ದೇಶಪಾಂಡೆ, ಕಲ್ಲಪ್ಪ ಕೊಂಕಣಿ, ಮಹಾಂತೇಶ ಹಳ್ಳಿ, ಸಂತೋಷ ಖೇಮಲಾಪುರೆ, ಚಿರಾಕಲಿ ಮಕಾಂದಾರ, ಮಲ್ಲಪ್ಪ ಹುಕ್ಕೇರಿ, ಗುರುಪಾದ ಚಚಡಿ, ಸಲೀಮ ಕಬ್ಬೂರ, ಮಲ್ಲು ಕೋಳಿ, ಪ್ರವೀಣ ಮಟಗಾರ, ಸುರೇಶ ಪೂಜಾರಿ, ಕೃಷ್ಣಾ ಗಂಡವ್ವಗೋಳ ಸೇರಿದಂತೆ ಅನೇಕರು ಇದ್ದರು.

PREV