ಮಠಗಳು ಮಾನಸಿಕ ನೆಮ್ಮದಿ ಕೇಂದ್ರಗಳು: ಜಡೆ ಮಠದ ಶ್ರೀ

KannadaprabhaNewsNetwork |  
Published : Jan 05, 2026, 01:45 AM IST
ಫೋಟೊ:೦೪ಕೆಪಿಸೊರಬ-೦೨ : ಸೊರಬ ಪಟ್ಟಣದ ಮುರುಘಾ ಮಠದ ಆವರಣದಲ್ಲಿ ೨೪೦ನೇ ಮಾಸಿಕ ಶಿವಾನುಭವ ನಿಮಿತ್ತ ಹಮ್ಮಿಕೊಂಡಿದ್ದ ಬನದ ಹುಣ್ಣಿಮೆ ಕಾರ್ಯಕ್ರಮದಲ್ಲಿ ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮಿಗಳು ಮಾತನಾಡಿದರು. | Kannada Prabha

ಸಾರಾಂಶ

ಮಠಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತವೆ. ಆದ್ದರಿಂದ ಮನುಷ್ಯ ಯಾವ ರೀತಿಯಲ್ಲಾದರೂ ಸರಿ ಆಧ್ಯಾತ್ಮಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾನೆ. ಮಾನಸಿಕ ನೆಮ್ಮದಿ ತಂದುಕೊಳ್ಳುತ್ತಾನೆ ಎಂದು ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಸೊರಬ

ಮಠಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತವೆ. ಆದ್ದರಿಂದ ಮನುಷ್ಯ ಯಾವ ರೀತಿಯಲ್ಲಾದರೂ ಸರಿ ಆಧ್ಯಾತ್ಮಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾನೆ. ಮಾನಸಿಕ ನೆಮ್ಮದಿ ತಂದುಕೊಳ್ಳುತ್ತಾನೆ ಎಂದು ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ ನುಡಿದರು.

ಪಟ್ಟಣದ ಮುರುಘಾ ಮಠದ ಆವರಣದಲ್ಲಿ ೨೪೦ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡಿದ್ದ ಬನದ ಹುಣ್ಣಿಮೆ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಪದಾಧಿಕಾರಿಗಳಿಗೆ ಸನ್ಮಾನಿಸಿ ಮಾತನಾಡಿದರು.

ಜಡೆ ಮಠದ ಕರ್ತೃ ಗದ್ದುಗೆಗೆ ವಿಶೇಷವಾದ ಶಕ್ತಿ ಇದ್ದು, ಭಕ್ತರು ಶ್ರದ್ಧಾ ಭಕ್ತಿಯಿಂದ ನಡೆದುಕೊಂಡರೆ ಭಕ್ತರ ಕಷ್ಟಗಳು ಪರಿಹಾರವಾಗುವುದರ ಜತೆಗೆ ಭಕ್ತರ ಸಹಕಾರದಿಂದ ಹಿಂದಿನ ಕಾಲದಿಂದಲೂ ಮಠವು ಅಭಿವೃದ್ಧಿಯತ್ತ ಸಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಠದ ಅಭಿವೃದ್ದಿಗಾಗಿ ೨೫ ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿರುವುದು ಮಠಕ್ಕೆ ಇನ್ನಷ್ಟು ಮೆರಗು ತಂದಿದೆ ಎಂದರು.

ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಜಡೆ ಮಠದಲ್ಲಿ ೪೮ ದಿನ ನಂದಾದೀಪ ಹಚ್ಚಿ ನಂತರ ಆರೋಗ್ಯ ಸುಧಾರಿಸಿ ರಾಜ್ಯ ಪ್ರವಾಸ ಕೈಗೊಂಡರು. ಅಷ್ಟೇ ಅಲ್ಲದೇ ಬಿ.ಎಸ್. ಯಡಿಯೂರಪ್ಪ ಕೂಡ ಮಠದ ಭಕ್ತರಾಗಿ ಮುಖ್ಯಮಂತ್ರಿಗಳಾಗಿ ಅಧಿಕಾರ ಮಾಡಿದ್ದರು ಎಂದರು.

ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ನಾಗೇಂದ್ರಪ್ಪ ಮಾತನಾಡಿ, ವಿಜ್ಞಾನ ಎಷ್ಟೋ ಮುಂದುರೆದರೂ ಸನಾತನ ಧರ್ಮ ಮತ್ತು ಗುರು ಪಂರಪರೆಯನ್ನು ಮರೆಯುವಂತಿಲ್ಲ. ಯಾತ್ರಿಂಕ ಜೀವನದಲ್ಲಿರುವ ಮನುಷ್ಯನಿಗೆ ಇಂದು ಆಧ್ಯಾತ್ಮಿಕ ವಿಚಾರಗಳು ಸ್ವಾಸ್ಥö್ಯತೆಯನ್ನು ನೀಡುತ್ತವೆ. ಮಾನವನ ಸಂಸ್ಕೃತಿ ಮಾತ್ರ ಬೆಳೆದಿಲ್ಲ ಎಂದರು.

ವೀರಶೈವ ಸಹ್ಯಾದ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ವಿ. ಗೌಡ, ವ್ಯವಸಾಯ ಉತ್ಪನ್ನ ಸಹಕಾರ ಸಂಘದ ಉಪಾಧ್ಯಕ್ಷ ಆರ್.ಬಿ. ರವಿಕುಮಾರ, ಪತ್ರಕರ್ತರ ಸಂಘದ ನಿಯೋಜಿತ ಅಧ್ಯಕ್ಷ ಜಿ.ಎಂ. ತೋಟಪ್ಪ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಬಾಪಟ್, ಜಿಲ್ಲಾ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ನಾಗೇಂದ್ರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾಜ ಸೇವಕ ಶಂಕರ್ ಶೇಟ್, ಜಿ.ಪಂ. ಮಾಜಿ ಸದಸ್ಯೆ ಕೆ.ಜೆ. ಲೋಲಾಕ್ಷಮ್ಮ, ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ, ಪೂರ್ಣಿಮಾ ಶಿವಯೋಗಿ, ಸುಧಾ ಶಿವಪ್ರಸಾದ್, ಮಾಲಾ ಶ್ರೀಧರ, ರೇಖಾ ಪಾಟೀಲ್, ಪ್ರದೀಪ್‌ಕುಮಾರ್, ಗಂಗಾಧರ ಮಾಸ್ತರ್, ಸಂದೀಪ್ ಯಲವಳ್ಳಿ, ರೇಣುಕಮ್ಮ ಗೌಳಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರೋಪಾದಿಯಲ್ಲಿ ವಿಜಯೇಂದ್ರ ಪಕ್ಷ ಸಂಘಟನೆ
ಜಿ ರಾಮ್ ಜಿ ಪರ 15ರಿಂದ ಅಭಿಯಾನ: ವಿಜಯೇಂದ್ರ