ಮೂಡುಬಿದಿರೆ: ಸೆಪ್ಟೆಂಬರ್ 8ರಂದು ಪ್ರಿಯದರ್ಶಿನಿ ಸೊಸೈಟಿ ಶಾಖೆ ಉದ್ಘಾಟನೆ

KannadaprabhaNewsNetwork |  
Published : Sep 06, 2025, 01:01 AM IST
32 | Kannada Prabha

ಸಾರಾಂಶ

ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ೪ನೇ ಶಾಖೆ ಮೂಡುಬಿದಿರೆಯಲ್ಲಿ 8ರಂದು ಶುಭಾರಂಭಗೊಳ್ಳಲಿದೆ ಎಂದು ಸೊಸೈಟಿ ಅಧ್ಯಕ್ಷ ಎಚ್. ವಸಂತ್ ಬರ್ನಾರ್ಡ್‌ ತಿಳಿಸಿದ್ದಾರೆ.

ಮೂಡುಬಿದಿರೆ: ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ, ಹಳೆಯಂಗಡಿ, ಪಡುಬಿದ್ರೆ, ಕಿನ್ನಿಗೋಳಿಯಲ್ಲಿ ಶಾಖೆಗಳನ್ನು ಹೊಂದಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ೪ನೇ ಶಾಖೆ ಮೂಡುಬಿದಿರೆಯಲ್ಲಿ 8ರಂದು ಶುಭಾರಂಭಗೊಳ್ಳಲಿದೆ ಎಂದು ಸೊಸೈಟಿ ಅಧ್ಯಕ್ಷ ಎಚ್. ವಸಂತ್ ಬರ್ನಾರ್ಡ್‌ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೧ರಲ್ಲಿ ಆರಂಭಗೊಂಡ ಸೊಸೈಟಿ ೩೨ ಕೋಟಿ ನಿರಖು ಠೇವಣಿ, ಕಳೆದ ಸಾಲಿನಲ್ಲಿ ೩೫೧ ಕೋಟಿ ವ್ಯವಹಾರ, ರು. ೪೧.೮೮ ಲಕ್ಷ ಲಾಭ ದಾಖಲಿಸಿ ಎ ದರ್ಜೆಯಲ್ಲಿ ವ್ಯವಹರಿಸುತ್ತಿದೆ ಎಂದರು.ಮೂಡುಬಿದಿರೆ ಶಾಖೆಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ ಎಂದರು.ಉದ್ಘಾಟನಾ ಸಂಭ್ರಮ: ಮೂಡುಬಿದಿರೆ ಜ್ಯೋತಿನಗರದ ಮೆಸ್ಕಾಂ ಕಚೇರಿ ಎದುರು ಮಹಾಲಸ ಕಟ್ಟಡದಲ್ಲಿ ಪ್ರಿಯದರ್ಶಿನಿ ಸೊಸೈಟಿ ಉದ್ಘಾಟನಾ ಸಮಾರಂಭ ಬೆಳಗ್ಗೆ ೧೦.೩೦ ರಿಂದ ಮುಲ್ಕಿ ಸೀಮೆ ಅರಸ ಎಂ. ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ಜರಗಲಿದೆ. ಮಾಜಿ ಸಚಿವ ಕೆ. ಅಭಯಚಂದ್ರ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಕಂಪ್ಯೂಟರ್ ವ್ಯವಸ್ಥೆಗೆ ಚಾಲನೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಭದ್ರತಾ ಕೊಠಡಿ ಉದ್ಘಾಟನೆ, ಕೆಎಂಎಫ್‌ ನಿರ್ದೇಶಕ ಡಾ. ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಅಮೃತ ನಗದು ಪತ್ರ ಠೇವಣಿ ಬಿಡುಗಡೆ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ. ನಿರಖು ಠೇವಣಿ ಪತ್ರ ನಿರಖು ಠೇವಣಿ ಪತ್ರ ಬಿಡುಗಡೆ, ವಲಯ ಪ್ರಧಾನ ಧರ್ಮ ಗುರು ವಂ.ಓನಿಲ್ ಡಿಸೋಜಾ ಉಳಿತಾಯ ಖಾತೆಯ ಪಾಸ್‌ಬುಕ್ ವಿತರಣೆ , ಸಿಎಸ್‌ಐ ಕ್ರಿಸ್ತ ಕಾಂತಿ ಚರ್ಚ್‌ ಮೂಡುಬಿದಿರೆ ಇದರ ಸಭಾಪಾಲಕ ರೆ. ಸಂತೋಷ್ ಕುಮಾರ್ ಮಾಸಿಕ ಠೇವಣಿ ಪತ್ರ ಬಿಡುಗಡೆ , ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪಾವಂಜೆಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಸೂರ ಕುಮಾರ್ ಪ್ರಥಮ ವಾಹನ ಸಾಲ ವಿತರಣೆ, ಮಂಗಳೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಿ. ಪಡೀಲ್ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ನಿತ್ಯನಿಧಿ ಪಾಸ್‌ಬುಕ್ ವಿತರಣೆ, ಮೂಡುಬಿದಿರೆಯ ನ್ಯಾಯವಾದಿ ಶರತ್ ಡಿ. ಶೆಟ್ಟಿ ಪ್ರಿಯದರ್ಶಿನಿನಿ ಸ್ವ-ಸಹಾಯ ಗುಂಪಿಗೆ ಚಾಲನೆ ನೀಡಲಿದ್ದಾರೆ.ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಚ್. ಎನ್. ರಮೇಶ್‌, ಮೂಡುಬಿದಿರೆ ಮೂಡಾ ಅಧ್ಯಕ್ಷ ಹರ್ಷವರ್ಧನ್‌ ಪಡಿವಾಳ್, ಶರ‍್ತಾಡಿ ಸಹಕಾರಿ ವ್ಯವಸಾಯಿಕ ಸಂಘ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್‌, ದೇವಾಡಿಗ ಸುಧಾರಕ ಸೇವಾ ಸಂಘ ಅಧ್ಯಕ್ಷ ಪುರಂದರ ದೇವಾಡಿಗ , ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಪುಚ್ಚಮೊಗರು ಇರುವೈಲು ಇದರ ಅಧ್ಯಕ್ಷ ಕುಮಾರ್ ಪೂಜಾರಿ, ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಜೊಸ್ಸಿ ಮಿನೇಜಸ್, ಪುರಸಭಾ ಸದಸ್ಯ ಇಕ್ಬಾಲ್ ಕರೀಂ ಕಟ್ಟಡ ಮಾಲೀಕ ದೇವದಾಸ್ ಭಟ್ ಪಾಲ್ಗೊಳ್ಳಲಿದ್ದಾರೆ ಎಂದರು.ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ನಿರ್ದೇಶಕರಾದ ಗಣೇಶ್ ಪ್ರಸಾದ್ ದೇವಾಡಿಗ, ಗೌತಮ್ ಜೈನ್, ತನುಜಾ ಶೆಟ್ಟಿ, ನವೀನ್ ಸಾಲ್ಯಾನ್ ಪಂಜ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುದರ್ಶನ್‌, ಮೂಡುಬಿದಿರೆ ಶಾಖಾ ಪ್ರಬಂಧಕಿ ಅಭಿಷ್ಠಾ ಜೈನ್, ಅಕೌಂಟೆಂಟ್ ಲೋಲಾಕ್ಷಿ ಉಪಸ್ಥಿತರಿದ್ದರು.ಪ್ರಿಯದರ್ಶಿನಿ ಶಾಖೆ ಉದ್ಘಾಟನಾ ಆಫರ್‌ಕಳೆದ ಎರಡು ವರ್ಷಗಳಿಂದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಿಶಿಷ್ಟ ಸಾಧನ ಪ್ರಶಸ್ತಿ ಪಡೆದಿರುವ ಸೊಸೈಟಿಯ ೩ ಶಾಖೆಗಳಲ್ಲೂ ಇ-ಮುದ್ರಾಂಕ , ಡಿಜಿಟಲ್ ಬ್ಯಾಂಕಿಂಗ್ , ಹವಾನಿಯಂತ್ರಿತ ಸೌಲಭ್ಯ ಒದಗಿಸಲಾಗಿದೆ. ನೂತನ ಶಾಖೆಯಲ್ಲಿ ೧ ಕೋಟಿ ರು. ವ್ಯವಹಾರದ ಗುರಿ ಹೊಂದಿದ್ದು ಉದ್ಘಾಟನಾ ಆಫರ್ ಎಂಬಂತೆ ಸೆ. ೩೧ರ ವರೆಗೆ ನಿರಖು ಠೇವಣಿಗಳಿಗೆ ಶೇ. ೧೦ ಬಡ್ಡಿ ಹಿರಿಯ ನಾಗರಿಕರಿಗೆ ೧/೨ ಶೇ ಹೆಚ್ಚುವರಿ ಬಡ್ಡಿಯ ಕೊಡುಗೆ ಲಭ್ಯವಿದೆ.

PREV

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ
ಮೋದಿ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಐತಿಹಾಸಿಕ ಕೊಡುಗೆ: ಶಾಸಕ ವೇದವ್ಯಾಸ್‌ ಕಾಮತ್