ಮೂಡ್ಲಕಟ್ಟೆಯ ವಿದ್ಯಾ ಅಕಾಡೆಮಿ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರಶಸ್ತಿಗಳ ವಿತರಣೆ ಮತ್ತು ವಿಶಿಷ್ಟವಾದ ಘಟಿಕೋತ್ಸವವೂ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಮೂಡ್ಲಕಟ್ಟೆಯ ವಿದ್ಯಾ ಅಕಾಡೆಮಿ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರಶಸ್ತಿಗಳ ವಿತರಣೆ ಮತ್ತು ವಿಶಿಷ್ಟವಾದ ಘಟಿಕೋತ್ಸವವೂ ನಡೆಯಿತು.ಕಾರ್ಯಕ್ರಮದಲ್ಲಿ ಪ್ರೀ ಸ್ಕೂಲ್ ಮುಗಿಸಿದ ಚಿಣ್ಣರು ಸ್ನಾತಕೋತ್ಸವ ಪ್ರಮಾಣಪತ್ರಗಳನ್ನು ಹೆಮ್ಮೆಯಿಂದ ಸ್ವೀಕರಿಸಿದರು. ಈ ಸಂಯುಕ್ತ ಆಚರಣೆ ಕಾರ್ಯಕ್ರಮಕ್ಕೆ ಭಾವನಾತ್ಮಕ ಮತ್ತು ಸಂತೋಷದ ಆಯಾಮವನ್ನು ಸೇರಿಸಿ, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಆ ದಿನವನ್ನು ಸ್ಮರಣೀಯವನ್ನಾಗಿ ಮಾಡಲಾಗಿತ್ತು.ಮುಖ್ಯ ಅತಿಥಿ ರೋಟೇರಿಯನ್ ರಾಘವೇಂದ್ರ ಚಾರಣ ನಾವಡ ಮಾತನಾಡಿ, ಮಕ್ಕಳೊಂದಿಗೆ ಪಾಲಕರು ಸಮಯ ಕಳೆಯುವುದು ಬಹಳ ಮುಖ್ಯ ಮತ್ತು ಮಕ್ಕಳ ಮೊಬೈಲ್ ವ್ಯಸನವನ್ನು ತೊರೆಯುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ಐ.ಎಂ.ಜೆ. ಸಂಸ್ಥೆಗಳ ಬ್ರ್ಯಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗಡೆ ಅವರು ವಿದ್ಯಾ ಅಕಾಡೆಮಿಯ ಗುಣಾತ್ಮಕ ಶಿಕ್ಷಣಕ್ಕೆ ಮೆಚ್ಚಿಗೆ ಸೂಚಿಸಿದರಲ್ಲದೇ ಮಕ್ಕಳಲ್ಲಿ ಉತ್ತಮ ಹವ್ಯಾಸ ಬೆಳೆಸಲು ಎಲ್ಲರೂ ಸಹಕರಿಸಬೇಕು ಎಂದರು. ಎಮ್‌ಎನ್‌ಬಿಎಸ್ ಟ್ರಸ್ಟ್‌ನ ಪರವಾಗಿ ಮಾತನಾಡಿದ ಪ್ರೊ. ಕಾರ್ತಿಕೇಯನ್, ಸಂಸ್ಥೆಯ ದೃಷ್ಟಿಕೋನ ಮತ್ತು ಧ್ಯೇಯವನ್ನು ಹಂಚಿಕೊಂಡು, ಸಮಗ್ರ ಅಭಿವೃದ್ಧಿ ಮತ್ತು ಶೈಕ್ಷಣಿಕ ಮೇಲುಸ್ತುವರಿಯ ಬಗ್ಗೆ ಬೆಳಕುಚೆಲ್ಲಿದರು.ಸೋಫಿಯಾ ಕಾರ್ವಾಲೊ ಸ್ವಾಗತಿಸಿದರು. ಸುನಿತಾ ರೆಬೆಲ್ಲೋ ಅತಿಥಿಗಳ ಪರಿಚಯಿಸಿದರು. ಶಾಲೆಯ ಆಡಳಿತಾಧಿಕಾರಿ ಪಾವನ ಮಹೇಶ್ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು. ಸ್ವಾತಿ ಅವರು ಬಹುಮಾನ ಪಡೆದ ವಿದ್ಯಾರ್ಥಿಗಳ ಹೆಸರು ಓದಿದರು. ರಶ್ಮಾ ಶೆಟ್ಟಿ ಕಾರ್ಯಕ್ರಮದ ನಿರೂಪಣೆ ಮಾಡಿದರು. ವಿದ್ಯಾಶ್ರೀ ಶೆಟ್ಟಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.