ಸಸ್ಯಾಹಾರ ಆರೋಗ್ಯದಾಯಕ: ಚಾರುಕೀರ್ತಿ ಶ್ರೀ

KannadaprabhaNewsNetwork |  
Published : Nov 22, 2026, 02:45 AM IST
ಮೂಡುಬಿದಿರೆ ಯಲ್ಲಿ  ಸಸ್ಯಾಹಾರ ಜನ ಜಾಗೃತಿ ಜಾಥಾ  | Kannada Prabha

ಸಾರಾಂಶ

ಸಸ್ಯಾಹಾರ ಮಾನವರಿಗೆ ಉತ್ತಮ ಸಾತ್ವಿಕ ಅರೋಗ್ಯದಾಯಕ ಆಹಾರವಾಗಿದೆ. ಅಹಿಂಸೆ, ಕರುಣೆ, ದಯೆ , ಧ್ಯಾನ ಕ್ಕಾಗಿ ಉತ್ತಮ ಆಹಾರ ಆಯ್ಕೆ ಮಾಡುವ, ಅರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸರ್ವರ ಸಹಕಾರ ಅಗತ್ಯ ಎಂದು ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾ ಚಾರ್ಯವರ್ಯ ಸ್ವಾಮೀಜಿ ಹೇಳಿದ್ದಾರೆ.

ಮೂಡುಬಿದಿರೆ: ಸಸ್ಯಾಹಾರ ಮಾನವರಿಗೆ ಉತ್ತಮ ಸಾತ್ವಿಕ ಅರೋಗ್ಯದಾಯಕ ಆಹಾರವಾಗಿದೆ. ಅಹಿಂಸೆ, ಕರುಣೆ, ದಯೆ , ಧ್ಯಾನ ಕ್ಕಾಗಿ ಉತ್ತಮ ಆಹಾರ ಆಯ್ಕೆ ಮಾಡುವ, ಅರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸರ್ವರ ಸಹಕಾರ ಅಗತ್ಯ ಎಂದು ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾ ಚಾರ್ಯವರ್ಯ ಸ್ವಾಮೀಜಿ ಹೇಳಿದ್ದಾರೆ.ಮೂಡುಬಿದಿರೆಯಲ್ಲಿ ಏಳನೇ ವರ್ಷದ ಮಹಾ ಕರುಣಾ ಸಸ್ಯಾಹಾರ ಜನ ಜಾಗೃತಿ ಜಾಥಾ , ಪಿರ ಮಿಡ್ ಧ್ಯಾನ ಹಾಗೂ ಸಸಿ ನೆಡುವ ಕಾರ್ಯಕ್ರಮ, ಸಾವಿರ ಕಂಬ ಬಸದಿ ಮುಂಭಾಗ ಸಸಿ ನೆಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.ಡಾ ಸುಭಾಷ್ ಪತ್ರಿಜೀ ಅವರ ಪ್ರೇರಣೆ ಯಂತೆ ಪಿರಮಿಡ್ ಸ್ಪಿರಿಚು ವಲ್ ಮೂವ್ ಮೆoಟ್ ಭಾರತ ಅಂಗಸಂಸ್ಥೆ ಪತ್ರೀಜಿ ವೆಜಿಟೇರಿಯನ್ ಮೂವೆಂಟ್ ಕರ್ನಾಟಕ ಶಾಖೆ ಮತ್ತು ಮಂಗಳೂರು ಮೂಡುಬಿದಿರೆ ಪಿರಮಿಡ್ ಸೊಸೈಟಿ ವತಿಯಿಂದ ನಡೆದ ಮೂರು ದಿನಗಳ ಸಸ್ಯಾಹಾರ ಜನಜಾಗೃತಿ ಜಾಥಾ ಜ್ಞಾನ ಪ್ರಚಾರ ಮತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೂರನೇ ದಿನದ ಕಾರ್ಯಕ್ರಮ ಜೈನ ಕಾಶಿ ಮೂಡುಬಿದಿರೆ ಯಲ್ಲಿ ಜರುಗಿತು ಚೌಟರ ಅರಮನೆ ಕುಲದೀಪ ಅರಮನೆ, ಕೃಷ್ಣಪ್ಪ ರಾಮ ನಗರ, ವ್ರಷಭ ಮುತ್ತಿನ ಹುಬ್ಬಳ್ಳಿ, ಸುದರ್ಶನ್ ಎಂ. ವಿಜಯಕ್ಕ ಓಂಶಾಂತಿ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು ಮೂಡು ಬಿದಿರೆ ಘಟಕದ ಭಾರತಿ ಶೆಟ್ಟಿ ಸ್ವಾಗತಿಸಿದರು.ಪತ್ರೀಜಿ ವೇಜಿ ಟೇರಿಯನ್ ಮೋವ್ ಮೆಂಟ್ ಕರ್ನಾಟಕ ಇದರ ಸಂಸ್ಥಾಪಕಿ ಡಾ ಸುಮಂಗಳ ಸಾಲಿ ಮಠ ಪ್ರಾಸ್ತಾವಿಕ ಮಾತನಾಡಿದರು. ಮೂವ್ ಮೆಂಟ್ ಅಧ್ಯಕ್ಷ ಅಧ್ಯಕ್ಷ ಕೆ.ಎಂ. ಸಿದ್ಧಯ್ಯ ಸ್ವಾಮಿ ಉಪಸ್ಥಿತಿಯಲ್ಲಿ ಕರ್ನಾಟಕದ ವಿವಿಧ ಭಾಗ ಗಳಿಂದ ಬಂದ ಪ್ರತಿನಿಧಿಗಳಿಂದ ಪೇಟೆಯಲ್ಲಿ ಜಾಗೃತಿ ಜಾಥಾ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನದಲ್ಲಿ ವಸತಿ, ಊಟೋಪಹಾರ ಸಮರ್ಪಕವಾಗಿರಲಿ
ಅಧಿವೇಶನದಲ್ಲಿ ಉಕ ಸಮಸ್ಯೆಗಳ ಚರ್ಚೆಗೆ ಆದ್ಯತೆ