ಶ್ರೀ ಮಹಾವೀರ ಕಾಲೇಜಿನಲ್ಲಿ ಉದ್ಯೋಗ ಮಾರ್ಗದರ್ಶನ ಅಭಿಯಾನ

KannadaprabhaNewsNetwork |  
Published : Feb 25, 2026, 03:00 AM IST
ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆ ಯಶಸ್ವೀ ವೃತ್ತಿ ಜೀವನಕ್ಕಾಗಿ ಉದ್ಯೋಗ ಮಾರ್ಗದರ್ಶನ ಅಭಿಯಾನ 2026 | Kannada Prabha

ಸಾರಾಂಶ

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ನೇಮಕಾತಿಗೆ ಅವಶ್ಯವಿರುವ ವೃತ್ತಿ ಕೌಶಲ್ಯ ವೃದ್ಧಿಸಲು ನೂತನ ಪರಿಕಲ್ಪನೆ- ಮಹಾವೀರ ಉದ್ಯೋಗ ಮಾರ್ಗದರ್ಶನ ಅಭಿಯಾನ-2026 ಕಾರ್‍ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ನೇಮಕಾತಿಗೆ ಅವಶ್ಯವಿರುವ ವೃತ್ತಿ ಕೌಶಲ್ಯ ವೃದ್ಧಿಸಲು ನೂತನ ಪರಿಕಲ್ಪನೆ- ಮಹಾವೀರ ಉದ್ಯೋಗ ಮಾರ್ಗದರ್ಶನ ಅಭಿಯಾನ-2026 ಕಾರ್‍ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್‍ಯಕ್ರಮದ ಮುಖ್ಯ ಅತಿಥಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಕಾನೂನು ವಿಭಾಗದ ಮುಖ್ಯಸ್ಥೆ ಮಿರುಲ್ ಭವಸಾರ್ ಈ ಕಾರ್‍ಯಾಗಾರದ ಉಪಕ್ರಮವನ್ನು ಮೆಚ್ಚಿಕೊಂಡು, ಶ್ರೀ ಮಹಾವೀರ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾಹೆಯ ಕಾನೂನು ವಿಭಾಗದಲ್ಲಿ ಇಂಟರ್ನ್‌ ಶಿಪ್‌ ಗೆ ಅವಕಾಶ ನೀಡುವುದಾಗಿ ಘೋಷಿಸಿದರು.ಈ ಅಭಿಯಾನದ ಮುಖ್ಯ ರೂವಾರಿ, ಕಾಲೇಜಿನ ಹಳೆ ವಿದ್ಯಾರ್ಥಿ ಮತ್ತು ಮೈಂಡ್ ಫುಲ್ ಕನ್ಸಲ್ಟಿಂಗ್‌ ಸ್ಥಾಪಕ ಸಂಜಯ್ ಭಟ್ ಮಾತನಾಡಿ, ವಿದ್ಯಾರ್ಥಿಗಳು ಬಯಸಿದ ಉದ್ಯೋಗ ಹೊಂದಲು ಸಹಾಯ ಆಗುವಂತೆ ಮಾಹೆ, ಶ್ರೀ ಮಹಾವೀರ ಕಾಲೇಜು, ಹಳೆ ವಿದ್ಯಾರ್ಥಿಗಳು ಮತ್ತು ಉದ್ಯೋಗದಾತರು ಜೊತೆಗೂಡಿ ಕೆಲಸ ಮಾಡುತ್ತಿದ್ದಾರೆ ಎಂದರು.

ಶ್ರೀ ಮಹಾವೀರ ಕಾಲೇಜು ಉದ್ಯೋಗ ಕೋಶದ ವಿದ್ಯಾರ್ಥಿ ಸದಸ್ಯರು ಕಾಲೇಜಿನ ಅಪ್ರತಿಮ ಸಾಧನೆಯನ್ನು ವಿವರಿಸಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.

ಹೊಲೋಜಿಕ್ ಸಂಸ್ಥೆಯ ದಕ್ಷಿಣ ಏಷ್ಯಾದ ವ್ಯವಹಾರ ನಿರ್ದೇಶಕ ವೆಂಕಟರಾಮನ್ ವಿ. ಮುಖ್ಯ ಭಾಷಣಕಾರರಾಗಿದ್ದರು. ಮಾಹೆ ಮಣಿಪಾಲ ಸಂವಹನ ಅಧ್ಯಯನ ಸಂಸ್ಥೆಯ (ಎಮ್ ಐಸಿ) ಸಂವಹನ ನಿರ್ವಹಣೆ ವಿಭಾಗದ ಮುಖ್ಯಸ್ಥ ಡಾ. ಪದ್ಮಕುಮಾರ್ ಕೆ. ಉಪಯುಕ್ತ ಮಾಹಿತಿ ನೀಡಿದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಅವರು ಸಂಪನ್ಮೂಲ ವ್ಯಕ್ತಿಗಳು ಮತ್ತು ಈ ಕಾರ್‍ಯಕ್ರಮ ಆಯೋಜನೆಗೆ ಸಹಕರಿಸಿದವರನ್ನು ಅಭಿನಂದಿಸಿದರು. ವಿದ್ಯಾರ್ಥಿನಿಯರಾದ ಶ್ರೇಷ್ಠ ಶೆಣೈ ಸ್ವಾಗತಿಸಿ, ಪ್ರತಿಷ್ಠ ನಿರೂಪಿಸಿದರು. ರಕ್ಷಿತಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2 ವರ್ಷದೊಳಗೆ ಪುತ್ತೂರು ದೇವಳ ಬ್ರಹ್ಮಕಲಶ ಗುರಿ: ಅಶೋಕ್‌ ರೈ
ದೇಶಕ್ಕಾಗಿ ರಕ್ತ ಬಲಿದಾನ ನೀಡಿದವರು ಬಿಗ್‌ ಬಾಸ್‌: ದೋ. ಕೇಶವಮೂರ್ತಿ