ಸರ್ವರ ಹಿತ ಪಾಲನೆ ರಾಜಧರ್ಮ: ಕಮಲಾದೇವಿ ಆಸ್ರಣ್ಣ

KannadaprabhaNewsNetwork |  
Published : Nov 20, 2026, 02:30 AM IST
ಮೂಡುಬಿದಿರೆ ಕೋ  ಓಪರೇಟಿವ್‌ ಸೊಸೈಟಿ ಸಹಕಾರ ಸಪ್ತಾಹ ಕರ್ತವ್ಯಪಾಲನೆಯಲ್ಲಿ ಸರ್ವರ ಹಿತ ಕಾಯ್ದುಕೊಂಡಾಗ ಅದು ರಾಜಧರ್ಮ   : ಕಮಲಾದೇವಿಪ್ರಸಾದ ಆಸ್ರಣ್ಣ | Kannada Prabha

ಸಾರಾಂಶ

ಮೂಡುಬಿದಿರೆ ಕೋ-ಆಪರೇಟಿವ್ ಸರ್ವಿಸ್ ಸೊಸೈಟಿಯಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ದ ಆರನೇ ದಿನದ ರಾಜಧರ್ಮ ಮತ್ತು ಸಹಕಾರ ಕುರಿಂತಂತೆ ನಡೆದ ಸಮಾರಂಭ

ಮೂಡುಬಿದಿರೆ ರಾಜ ಸ್ಥಾನ, ದೇವಸ್ಥಾನ ಅಥವಾ ಗೃಹಸ್ಥಾನವೇ ಆಗಲಿ ಇಲ್ಲಿ ಜವಾಬ್ದಾರಿಯ ಸ್ಥಾನಕ್ಕೇರುವವರು ಕರ್ತವ್ಯಪಾಲನೆಯಲ್ಲಿ ಸರ್ವರ ಹಿತ ಕಾಯ್ದುಕೊಂಡಾಗ ಅದು ರಾಜಧರ್ಮ ವಾಗುತ್ತದೆ. ಆಗ ಎಲ್ಲರ ಸಹಕಾರ ದೊರೆತು ಯಶಸ್ಸು ಸಾಧ್ಯವಾಗುತ್ತದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಟೀಲಿನ ಅನುವಂಶಿಕ ಅರ್ಚಕ ಶ್ರೀ ಕಮಲಾದೇವಿಪ್ರಸಾದ ಆಸ್ರಣ್ಣ ಹೇಳಿದರು.

ಮೂಡುಬಿದಿರೆ ಕೋ-ಆಪರೇಟಿವ್ ಸರ್ವಿಸ್ ಸೊಸೈಟಿಯಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ದ ಆರನೇ ದಿನದ ರಾಜಧರ್ಮ ಮತ್ತು ಸಹಕಾರ ಕುರಿಂತಂತೆ ನಡೆದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತುಗಳನ್ನಾಡಿದರು.

ವ್ಯಾಸ ಮಹರ್ಷಿ ಶ್ರೇಷ್ಠ ಜ್ಞಾನಿಯಾದ ಕಾರಣ ಆಂಗ್ಲರೂ ಅವರ ಹೆಸರಲ್ಲೇ ವೈಸ್ ಶಬ್ದ ರೂಪಿಸಿರಬೇಕು. ವ್ಯಾಸಂಗ ಅಂದರೆ ಶಿಕ್ಷಣ ಎಂಬ ಅರ್ಥ ಬರುವ ಶಬ್ದದಲ್ಲೂ ವ್ಯಾಸರಿದ್ದಾರೆ ಎಂದವರು ವಿಶ್ಲೇಷಿಸಿದರು.

ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ ಪೈ, ಹೊಸಂಗಡಿ, ಅರಮನೆಯ ಸುಕುಮಾರ್ ಶೆಟ್ಟಿ ಉಪನ್ಯಾಸಕ ನಿರಂಜನ ಎ., ಸಿ.ಎ. ಬಾಲಕೃಷ್ಣ ಭಟ್, ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಇದ್ದರು.

ವಿವಿಧ ರಂಗದ ಸಾಧಕರನ್ನು ಗೌರವಿಸಲಾಯಿತು. ಸೊಸೈಟಿ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಸ್ವಾಗತಿಸಿದರು. ನಿರ್ದೇಶಕ ಸಿ.ಹೆಚ್. ಅಬ್ದುಲ್ ಗಫೂರ್ ವಂದಿಸಿದರು. ಚೇತನಾ ರಾಜೇಂದ್ರ ಹೆಗ್ಡೆ ನಿರೂಪಿಸಿದರು. ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಪ್ರಸ್ತುತಪಡಿಸುವ ಕನ್ನಡ ಗಾನ ಗುಚ್ಚ ಕಾರ್ಯಕ್ರಮ ನಡೆಯಿತು.ಸಪ್ತಾಹದ ಮೂರನೇ ದಿನ ಆಳ್ವಾಸ್ ಲಾ ಕಾಲೇಜಿನ ಪ್ರಾಂಶುಪಾಲೆ ಡಾ. ರಶ್ಮಿ ಶೆಟ್ಟಿ ಅಧ್ಯಕ್ಷತೆಯಲ್ಲಿ ಕಾನೂನು ಮತ್ತು ಸಹಕಾರ ವಿಷಯದ ಕುರಿತು ನ್ಯಾಯವಾದಿ ಪೃಥ್ವಿರಾಜ ರೈ ಕೆ.ಮಾತನಾಡಿದರು. ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಶರತ್ ಡಿ. ಶೆಟ್ಟಿ,, ಪುರಸಭಾ ಮುಖ್ಯಾಧಿಕಾರಿ ಶ್ರೀಮತಿ ಇಂದು ಎಂ. ಇದ್ದರು. ವಿದುಷಿ ಸುಮನಾ ಪ್ರಸಾದ್, ಸಂಸ್ಥಾಪಕಿ, ಆದಿ ಸಾಂಸ್ಕೃತಿಕ ಅಕಾಡೆಮಿ ಇವರ ತಂಡದಿಂದ ಭರತನಾಟ್ಯ ವೈಭವ ನಡೆದಿತ್ತು.

ಸಪ್ತಾಹದ ಆರನೇ ದಿನ ಆಳ್ವಾಸ್ ಮೆಡಿಕಲ್ ಕಾಲೇಜಿನ ಡೀನ್ ಡಾ. ಕೆ. ಮಹಾಬಲೇಶ್ ಶೆಟ್ಟಿಅಧ್ಯಕ್ಷತೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರ ವಿಷಯದ ಕುರಿತು ಡಾ. ಪ್ರಸನ್ನ ಕಾಕುಂಜೆ ಮಾತನಾಡಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶ್ರೀಮತಿ ತ್ರಿವೇಣಿ,ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಂಗಳೂರು , ಡಾ.ಹರೀಶ್ ನಾಯಕ್ ಮೂಡುಬಿದಿರೆ ಇರಿದ್ದರು. ವಿದ್ವಾನ್ ಸುಧೀರ ರಾವ್, ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ನಿರ್ದೇಶನದಲ್ಲಿ ನೃತ್ಯ ನಿಕೇತನ ಕೊಡವೂರು ಪ್ರಸ್ತುತಪಡಿಸುವ ನೃತ್ಯ ರೂಪಕ ಕಾರ್ಯಕ್ರಮ ನಡೆದಿತ್ತು.ಇಂದು ಸಮಾರೋಪ, ಸಮಗ್ರ ಸಾಧಕ ಪ್ರಶಸ್ತಿ ಸುಮಾರು 48 ವರ್ಷಗಳಿಂದ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯಲ್ಲಿ ಗ್ರಾಮೀಣ ಆರೋಗ್ಯ ಸೇವೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೂಡುಬಿದಿರೆಯ ವೈದ್ಯ ಡಾ.ಎನ್.ಪ್ರಭಾಚಂದ್ರ ಅವರಿಗೆ ಮೂಡುಬಿದಿರೆ ಮೂಡುಬಿದಿರೆ ಸೊಸೈಟಿ (ಎಂಸಿಎಸ್) ವತಿಯಿಂದ ಸಮಗ್ರ ಸಾಧಕ ಪ್ರಶಸ್ತಿ ಪ್ರದಾನ ನ 19 ರಂದು ಸಂಜೆ ಸಪ್ತಾಹದ ಸಮರೋಪದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಡಾ.ಎಂ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಮತಿ. ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳ ರಶ್ಮಿತಾ ಯುವರಾಜ್ ಜೈನ್ ಅಭಿನಂದನಾ ನುಡಿಗಳನ್ನಾಡುವರು. ರೆ. ಸಂಪಿಗೆ ಚರ್ಚ್‌ನ ಎಫ್.ವಿನ್ಸೆಂಟ್ ಡಿಸೋಜ, ಎಂ.ಸಿ ಸೊಸೈಟಿಯ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಮಾಜಿ ಸಚಿವ ಹಾಗೂ ಸೊಸೈಟಿ ನಿರ್ದೇಶಕ ಕೆ.ಅಭಯಚಂದ್ರ ಜೈನ್, ಉಪನ್ಯಾಸಕ ಗಣೇಶ್ ಕಾಮತ್ ಎಂ, ಗೋಪಿನಾಥ್ ಭಟ್ ಎಸ್‌ಸಿಡಿಸಿಸಿ ಬ್ಯಾಂಕ್ ಸಿಇಒ ಕೆ.ಶ್ರೀಪತಿ ಭಟ್ ಅತಿಥಿಗಳಾಗಿ ಭಾಗವಹಿಸಲಿದ್ಧಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಂಕ್ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಿ: ಸದಾಶಿವ ಮೇತ್ರಿ
ಕಲಾ ಜಗತ್ತಿನಲ್ಲಿ ಪ್ರತಿಭೆ ಗುರುತಿಸಿಕೊಳ್ಳಿ