ಮೂರ್ನಾಡು: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

KannadaprabhaNewsNetwork |  
Published : Aug 19, 2025, 01:00 AM IST
ಮೂರ್ನಾಡಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. | Kannada Prabha

ಸಾರಾಂಶ

ಮೂರ್ನಾಡಿನ ಪ್ರಕೃತಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ ಶ್ರೀಕೃಷ್ಣ ಛದ್ಮವೇಷ ಸ್ಪರ್ಧೆಯಲ್ಲಿ 3 ತಿಂಗಳಿನಿಂದ 9 ವರ್ಷದವರೆಗಿನ ೯೩ ಮಕ್ಕಳು ಶ್ರೀಕೃಷ್ಣ ವೇಷಧಾರಿಗಳಾಗಿ ಗಮನ ಸೆಳೆದರು. ಕುಶಾಲನಗರ, ಪೊನ್ನಂಪೇಟೆ, ನಾಪೋಕ್ಲು ಮತ್ತಿತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಪುಟಾಣಿ ಸ್ಪರ್ಧಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ಮತ್ತು ದುರ್ಗಾವಾಹಿನಿ ವತಿಯಿಂದ ಮೂರ್ನಾಡಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಮೂರ್ನಾಡಿನ ಪ್ರಕೃತಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ ಶ್ರೀಕೃಷ್ಣ ಛದ್ಮವೇಷ ಸ್ಪರ್ಧೆಯಲ್ಲಿ 3 ತಿಂಗಳಿನಿಂದ 9 ವರ್ಷದವರೆಗಿನ ೯೩ ಮಕ್ಕಳು ಶ್ರೀಕೃಷ್ಣ ವೇಷಧಾರಿಗಳಾಗಿ ಗಮನ ಸೆಳೆದರು. ಕುಶಾಲನಗರ, ಪೊನ್ನಂಪೇಟೆ, ನಾಪೋಕ್ಲು ಮತ್ತಿತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಪುಟಾಣಿ ಸ್ಪರ್ಧಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.

ವಿಶ್ವ ಹಿಂದೂ ಪರಿಷತ್ ಮೂರ್ನಾಡು ಘಟಕ ಅಧ್ಯಕ್ಷ ಚಾರಿಮಂಡ ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲವಾಗ್ಮಿ ಸುಂಟಿಕೊಪ್ಪದ ಶ್ರೀಷಾ ದಿಕ್ಸೂಚಿ ಭಾಷಣ ಮಾಡಿದರು. ಮಡಿಕೇರಿ ಸಂತ ಜೋಸೆಫರ ಶಾಲೆಯ ಉಪನ್ಯಾಸಕರಾದ ಜಯಲಕ್ಷ್ಮೀ ಮುಖ್ಯ ಭಾಷಣ ಮಾಡಿದರು.

ಮೂರ್ನಾಡು ಪದವಿ ಕಾಲೇಜಿನ ಕಲ್ಪನಾ ಸಾಮ್ರಾಟ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಉಪಾಧ್ಯಕ್ಷ ಪರಮೇಶ್ ಕೂತಿ, ಮಠಮಂದಿರ ಪ್ರಮುಖ್ ಮಹಾಬಲೇಶ್ವರ ಭಟ್, ಧರ್ಮ ಪ್ರಸಾರ ಪ್ರಮುಖ್ ರಮೇಶ್ ಬೊಟ್ಟುಮನೆ, ಪ್ರಸಾರ ಪ್ರಚಾರ ಪ್ರಮುಖ್ ಸೋಮಣ್ಣ, ಸೋಮವಾರಪೇಟೆ ಅಧ್ಯಕ್ಷ ಮಲ್ಲೇಶ್, ಬಜರಂಗದಳದ ಮಡಿಕೇರಿ ತಾಲೂಕು ಪ್ರಮುಖ್ ಪ್ರವೀಣ್ ಮೂರ್ನಾಡು, ಮಾತೃಶಕ್ತಿ ಸೇವಾ ಪ್ರಮುಖ್ ಮಮತಾ ಶ್ರೀಹರಿ ಪೋಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಶ್ವ ಹಿಂದೂ ಪರಿಷತ್ ತಾಲೂಕು ಪ್ರಮುಖ್ ಸಜೀವ ಸ್ವಾಗತಿಸಿದರು. ಮಾತೃಶಕ್ತಿ ಜಿಲ್ಲಾ ಪ್ರಮುಖ್ ಪೂರ್ಣಿಮಾ ಸುರೇಶ್ ನಿರೂಪಿಸಿದರು. ಬಜರಂಗದಳದ ಮಂಜು ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ