ಗಾಂಜಾ, ಡ್ರಗ್ಸ್ ಮಾಫಿಯ ನಿಯಂತ್ರಣಕ್ಕೆ ಪೊಲೀಸರಿಗೆ ನೈತಿಕ ಬೆಂಬಲ: ವಿನೂತನ ಅಭಿಯಾನ

KannadaprabhaNewsNetwork | Published : Aug 23, 2024 1:07 AM

ಸಾರಾಂಶ

ಗಾಂಜಾ, ಡ್ರಗ್ಸ್ ಮಾಫಿಯ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿರುವ ಪೊಲೀಸ್ ಇಲಾಖೆಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಇಲ್ಲಿನ ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಹಾಗೂ ಟೀಂ ಅಭಿಮತ ಸದಸ್ಯರು ಉಪವಿಭಾಗದ ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ ಅವರನ್ನು ಭೇಟಿ ಮಾಡಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಇತ್ತೀಚಿನ ದಿನಗಳಲ್ಲಿ ಹದಿಹರಯದ ಯುವ ಸಮುದಾಯವನ್ನು ಕಾಡುತ್ತಿರುವ ಗಾಂಜಾ, ಡ್ರಗ್ಸ್ ಮಾಫಿಯ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿರುವ ಪೊಲೀಸ್ ಇಲಾಖೆಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಇಲ್ಲಿನ ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಹಾಗೂ ಟೀಂ ಅಭಿಮತ ಸದಸ್ಯರು ಬುಧವಾರ ಉಪವಿಭಾಗದ ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ ಅವರನ್ನು ಭೇಟಿ ಮಾಡಿದ್ದಾರೆ.ಈ ಸಂದರ್ಭ ಮಾತನಾಡಿದ ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ ಗಿಳಿಯಾರ್, ಗಾಂಜಾ ಹಾಗೂ ಡ್ರಗ್ಸ್ ಮಾಫಿಯಾ ನಿಯಂತ್ರಣ ಮಾಡದೆ ಇದ್ದಲ್ಲಿ, ಭವಿಷ್ಯದ ಸಮಾಜದ ಸತ್ಪ್ರೆಜೆಗಳಾಗಬೇಕಾದ ಯುವ ಸಮುದಾಯವನ್ನು ಈ ದಂಧೆ ಅಪೋಶನ ತೆಗೆದುಕೊಳ್ಳುವುರಲ್ಲಿ ಸಂದೇಹವಿಲ್ಲ ಎಂದರು.

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಪ್ರತಿ ಸ್ಪಂದನ ನೀಡಿದ ಡಿವೈಎಸ್‌ಪಿ ಕೆ.ಯು.ಬೆಳ್ಳಿಯಪ್ಪ, ಗಾಂಜಾ ಹಾಗೂ ಡ್ರಗ್ಸ್ ಮಾಫಿಯ ನಿಯಂತ್ರಣ ಸೇರಿದಂತೆ, ಯಾವುದೇ ಸಮಾಜಘಾತಕ ಕೃತ್ಯಗಳು ಗಮನಕ್ಕೆ ಬಂದರೂ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ. ಗಾಂಜಾ ಹಾಗೂ ಡ್ರಗ್ಸ್ ಮಾಫಿಯದ ಬಗ್ಗೆ ಸಾರ್ವಜನಿಕರಲ್ಲಿ ಯಾವುದೇ ಮಾಹಿತಿಗಳಿದ್ದರೂ ನೇರವಾಗಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು. ಮಾಹಿತಿದಾರರ ಗುರುತುಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.

ಕಾಳಾವರ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ, ಕೋಟ-ಗಿಳಿಯಾರು ಲಯನ್ಸ್ ಕ್ಲಬ್ ಅಧ್ಯಕ್ಷ ವಿಜಯ್‌ ಕುಮಾರ ಶೆಟ್ಟಿ ಜಡ್ಡಾಡಿ, ಮಂದಾರ್ತಿಯ ನಮಸ್ತೆ ಭಾರತ್ ಸಂಘಟನೆ ಅಧ್ಯಕ್ಷ ಪ್ರಮೋದ್ ಶೆಟ್ಟಿ ಮುಂತಾದವರು ಮನವಿ ಪತ್ರ ನೀಡಿದರು. ವಿವಿಧ ಗ್ರಾಮ ಪಂಚಾಯಿತಿಗಳ ಸದಸ್ಯರು, ಲಯನ್ಸ್ ಕ್ಲಬ್ ಸದಸ್ಯರು, ಸಾರ್ವಜನಿಕ ಸೇವಾ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಕೋಶಾಧಿಕಾರಿ ಅರುಣ್‌ ಶೆಟ್ಟಿ ಪಡುಮನೆ, ಕಾರ್ಯದರ್ಶಿ ಅಶೋಕ್ ಶೆಟ್ಟಿ ಬನ್ನಾಡಿ, ಶಂಕರ ಅಂಕದಕಟ್ಟೆ, ಸುರೇಶ್ ಶೆಟ್ಟಿ ಮೂಡುಗೋಪಾಡಿ, ಶರತ್‌ಕುಮಾರ ಶೆಟ್ಟಿ ಕೊತ್ತಾಡಿ, ನಿಖಿಲ್ ನಾಯಕ್ ತೆಕ್ಕಟ್ಟೆ, ಲೋಕೇಶ್ ಅಂಕದಕಟ್ಟೆ, ಸುಜೀರ್ ಶೆಟ್ಟಿ ಹೇರಿಕುದ್ರು, ದಿಲೀಪ್‌ರಾಜ್ ಶೆಟ್ಟಿ ನಡೂರು, ಸುಧೀರ್ ಶೆಟ್ಟಿ ಹಾಲಾಡಿ, ಸಂದೀಪ್ ತಲ್ಲೂರು ಇದ್ದರು.

Share this article