ಕನ್ನಡಪ್ರಭ ವಾರ್ತೆ ಬೀಳಗಿ
ಪಟ್ಟಣದ ವಿವೇಕಾನಂದ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆ ಆವರಣದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಸಂಘ ಹಾಗೂ ಅನ್ನದಾತ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತಿ ಆಚರಣೆ ಪ್ರಯುಕ್ತ ವಿವೇಕ ಉತ್ಸವ-10, ವಿವೇಕ ರತ್ನ ಪ್ರಶಸ್ತಿ ಪ್ರದಾನ ಮತ್ತು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಕಲಿಕೆಯಲ್ಲಿ ನೀವು ಪೇಲಾಗಬಹುದು, ಆದರೆ ಜೀವನದಲ್ಲಿ ಪಾಸಾಗುವ ಹೆಚ್ಚು ಅವಕಾಶಗಳಿವೆ. ಪಾಸಾದರೆ ನಾವು ಯಾರು ಎಂದು ಸಮಾಜಕ್ಕೆ ಗೊತ್ತಾಗುತ್ತದೆ. ಫೇಲಾದರೆ ನಿಮ್ಮವರು ಯಾರು ಎಂದು ನಿಮಗೆ ತಿಳಿಯುತ್ತದೆ. ಜೀವನದಲ್ಲಿ ಶಿಕ್ಷಣಕ್ಕೆ ಕೊನೆಯಿಲ್ಲ. ಶಿಕ್ಷಣವನ್ನು ತಾಯಿಯ ಮಡಿಲಿನಿಂದ ಗೋರಿಯ ಮಡಿಲಿನ ತನಕ ಪಡೆಯಬಹುದು. ಶಿಕ್ಷಣಕ್ಕೆ ಅಂತ್ಯವಿಲ್ಲ, ಪ್ರಾಯವಿಲ್ಲ, ಅದನ್ನು ವೃದ್ಧರಾಗಿಯೂ ಪಡೆಯಬಹುದು. ನಮ್ಮಲ್ಲಿ ಆತ್ಮಶಕ್ತಿ ಇರದಿದ್ದರೆ ಶಿಕ್ಷಣದಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.ಬ.ಬಾಗೇವಾಡಿ ತಹಸೀಲ್ದಾರ ವೈ.ಎಸ್. ಸೋಮನಕಟ್ಟಿ ವಿವೇಕ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳು ಬದುಕಿನಲ್ಲಿ ಯಶಸ್ವಿಯಾಗಬೇಕಾದರೆ ಗುರಿ ಇರಬೇಕು. ಗುರಿ ಮುಟ್ಟಲು ಹಿಂದೆ ಗುರು ಇರಬೇಕು. ಗುರುವನ್ನು ಗೌರವಿಸಿದಾಗ ವಿದ್ಯೆ ನಮಗೆ ಒಲಿಯುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಯತ್ನ ದೊಡ್ಡದು. ಮರಳಿ ಮರಳಿ ಪ್ರಯತ್ನ ಮಾಡಿದಾಗ ಯಶಸ್ಸು ಸಿಗುತ್ತದೆ ಎಂದು ಹೇಳಿದರು.ಮರೆಗುದ್ದಿ ಡಾ.ನಿರುಪಾಧೀಶ ಮಹಾಸ್ವಾಮಿಜೀ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಪ್ರಾಸ್ತಾವಿಕ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷರು ಎಂ.ಎನ್.ಪಾಟೀಲ್, ಎಚ್.ಆರ್.ಮಲ್ಲಾಪೂರ, ಸಿಪಿಐ ಹಣಮಂತ ಸಣಮನಿ, ಆಡಳಿತಾಧಿಕಾರಿ ವ್ಹಿ.ಎಸ್.ಮೇಟಿ, ರಾಜು ಬೋರ್ಜಿ, ಜಿ.ಜಿ.ದಿಕ್ಷೀತ, ಬಿ.ಪಿ.ಪಾಟೀಲ್ ಇತರರು ಇದ್ದರು.
ಬಾಕ್ಸ್ ಐಟಂ-ಅಲ್ಪ ಸಮಯದಲ್ಲಿ ದೊಡ್ಡ ಸಾಧನೆ ಮಾಡಿ ಬೃಹತ್ ಸಂಸ್ಥೆಯಾಗಿ ಹೊರಹೊಮ್ಮಿದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಸಾಧನೆ ಬೀಳಗಿ ತಾಲೂಕಿಗೆ ಗೌರವ ತರುವಂತಿದೆ. ಆಡಳಿತ ಸೂತ್ರ ಹಿಡಿದವರ ಪಾತ್ರ ಬಹಳ ಸಣ್ಣದು. ಶಿಕ್ಷಣ ಸಂಸ್ಥೆಗಳು ಒಂದು ರಾಷ್ಟ್ರದ ಭವಿಷ್ಯ ನಿರ್ಮಿಸುತ್ತವೆ. ಒಂದು ಶಿಕ್ಷಣ ಸಂಸ್ಥೆ ಸಾವಿರಾರು ಮಕ್ಕಳಲ್ಲಿ ವಿದ್ಯೆ, ಸಂಸ್ಕಾರ ನೀಡಿ ನೀತಿಯುತವಾದ ಬದುಕು ರೂಪಿಸುವುದರ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ವಿದ್ಯಾ ಸಂಸ್ಥೆಗಳು ಕೊಡುಗೆ ಅಪಾರವಾಗಿವೆ.-ಎಸ್.ಆರ್. ಪಾಟೀಲ್ ಮಾಜಿ ಸಚಿವರು.