ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕಂದಾಯ ಸಚಿವರ ವಿರೋಧ
ಈ ಜಾಗಕ್ಕೆ ಸಂಬಂಧಿಸಿದಂತೆ ಯಾವುದೇ ದುರಸ್ತಿ, ಟಿಪ್ಪಣಿ ಸರ್ವೆ ಭೂಪರಿವರ್ತನೆ ಆದೇಶ ಹಾಗೂ ಸರ್ಕಾರದ ಪೂರ್ವಾನುಮತಿ ಪಡೆಯದೆ ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ಈ ಬಗ್ಗೆ ತಾವು ಮಳೆ ಗಾಲದ ಅಧಿವೇಶದಲ್ಲಿ ಧ್ವನಿ ಎತ್ತಿ ಕೋಮುಲ್ ಕೈಗೊಂಡಿರುವ ಕಾನೂನು ಬಾಹಿರ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಕಂದಾಯ ಸಚಿವರ ಗಮನ ಸೆಳೆದಿದ್ದಾಗಿ ತಿಳಿಸಿದ್ದಾರೆ. ಕಂದಾಯ ಸಚಿವ ಕೃಷ್ಣಬೈರೇಗೌಡ ಸಹ ಕೋಮುಲ್ ಇತರೇ ಕಾರ್ಯಗಳಿಗೆ ಮೀಸಲಿಟ್ಟಿದ್ದ ಜಾಗದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿರುವುದು ಸರಿಯಿಲ್ಲ ಮತ್ತು ಇಲಾಖೆಯಿಂದ ಯಾವುದೇ ಅನುಮತಿ ಸಹ ಪಡೆದಿರುವುದಿಲ್ಲ ಎಂದು ಉತ್ತರ ನೀಡಿದ್ದರು.ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ವಿರುದ್ದ ಸದರಿ ವಿವಾದದ ಜಮೀನಿನ ಮೇಲೆ ಪ್ರಕರಣ ದಾಖಲಿಸಿ ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರದ ಸದುದ್ದೇಶವನ್ನು ಗೌರವಿಸುವರೆಂದು ಭಾವಿಸಿ ವಸತಿ ಶಾಲೆಯ ಜಮೀನನ್ನು ಉಳಿಸುವಂತೆ ೩ ತಿಂಗಳ ಹಿಂದೆ ಕ್ರಮಕ್ಕೆ ಕೋರಿದ್ದರೂ ಉಪವಿಭಾಗಾಧಿಕಾರಿ ಯಾವುದೇ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷ್ಯವಹಿಸಿರುವುದು ಬಡ ರೈತ ದಲಿತ ಮಕ್ಕಳ ವಿದ್ಯಾಭ್ಯಾಸಕ್ಕೆ ನಿರ್ಲಕ್ಷ್ಯವಹಿಸಿರುವುದು ಗೋಚರಿಸುತ್ತದೆ ಎಂದು ತಿಳಿಸಿದ್ದಾರೆ.
ಕೋರ್ಟ್‌ಗೆ ಹೋಗುವ ಎಚ್ಚರಿಕೆಶಾಲೆಯ ಜಾಗವನ್ನು ಕೋಮುಲ್ ಸಂಸ್ಥೆಗೆ ಬಳಸಿರುವುದು ನಿಮ್ಮ ಬೇಜವಾಬ್ದಾರಿ ಎಂದು ಏಕೆ ಪರಿಗಣಿಸಬಾರದು, ಈಗ ಅಂಬೇಡ್ಕರ್ ವಸತಿ ಶಾಲೆ ಮಂಜೂರಾಗಿದ್ದು ಕೂಡಲೇ ಕ್ರಮವಹಿಸಬೇಕು. ತಪ್ಪಿದ್ದಲ್ಲಿ ನ್ಯಾಯಾಂಗ ಉಲ್ಲಂಘನೆ ಮಾಡಿದವರನ್ನು ರಕ್ಷಿಸುತ್ತಿರುವ ಹಾಗೂ ಬಡ ದಲಿತ ಮಕ್ಕಳ ವಿದ್ಯಾರ್ಥಿಗಳಿಗೆ ಮಂಜೂರಾಗಿದ್ದ ಭೂಮಿಯನ್ನು ಕಬಳಿಸಿರುವವರ ಪರವಾಗಿರುವ ತಮ್ಮನ್ನು ದೋಷಾರೋಪಿಯನ್ನಾಗಿ ಮಾಡಿ ತಮ್ಮ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಎಸಿಗೆ ಬರೆದ ಪತ್ರದಲ್ಲಿ ಶಾಸಕ ನಾರಾಯಣಸ್ವಾಮಿ ಎಚ್ಚರಿಸಿದ್ದಾರೆ.