ಹೈನೋದ್ಯಮಕ್ಕೆ ಮತ್ತಷ್ಟು ಸರ್ಕಾರದ ಪ್ರೋತ್ಸಾಹ ಅಗತ್ಯ

KannadaprabhaNewsNetwork |  
Published : Sep 09, 2025, 01:00 AM IST
ಫೋಟೋ: 8 ಹೆಚ್‌ಎಸ್‌ಕೆ 2ಹೊಸಕೋಟೆಯ ಮೇಲಿನಪೇಟೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಡೈರಿ ಅಧ್ಯಕ್ಷ ಡಾ. ಸಿ.ಜಯರಾಜ್ ಗೋವುಗಳಿಗೆ ಉಚಿತವಾಗಿ ಪಶು ಆಹಾರ ವಿತರಣೆ ಮಾಡಿದರು. | Kannada Prabha

ಸಾರಾಂಶ

ಹೊಸಕೋಟೆ: ಗ್ರಾಮೀಣರ ಬದುಕಿಗೆ ಹೈನೋದ್ಯಮ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆಸರೆ. ಆದ್ದರಿಂದ ಹೈನೋದ್ಯಮಕ್ಕೆ ಸರ್ಕಾರದಿಂದ ಮತ್ತಷ್ಟು ಪ್ರೋತ್ಸಾಹ ಅಗತ್ಯ ಎಂದು ಮೇಲಿನಪೇಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡಾ.ಸಿ.ಜಯರಾಜ್ ತಿಳಿಸಿದರು.

ಹೊಸಕೋಟೆ: ಗ್ರಾಮೀಣರ ಬದುಕಿಗೆ ಹೈನೋದ್ಯಮ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆಸರೆ. ಆದ್ದರಿಂದ ಹೈನೋದ್ಯಮಕ್ಕೆ ಸರ್ಕಾರದಿಂದ ಮತ್ತಷ್ಟು ಪ್ರೋತ್ಸಾಹ ಅಗತ್ಯ ಎಂದು ಮೇಲಿನಪೇಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡಾ.ಸಿ.ಜಯರಾಜ್ ತಿಳಿಸಿದರು. ನಗರದ ಮೇಲಿನ ಪೇಟೆಯ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ನಡೆದ 2024-25ನೇ ಸಾಲಿನ ಸಂಘದ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಹೈನುಗಾರಿಕೆಯಿಂದ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿವೆ. ಅದರಿಂದ ಸಿಗುವ ಹಾಲು ಸಗಣಿ ಗೋವಿನ ಮೂತ್ರ ಎಲ್ಲವೂ ವೈಜ್ಞಾನಿಕವಾಗಿ ವಿಶಿಷ್ಟತೆ ಹೊಂದಿವೆ, ಇಂತಹ ಗೋವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಇದರ ಮಹತ್ವ ತಿಳಿಸಬೇಕು ಎಂದರು. ಸಭೆಯಲ್ಲಿ ಮೇಲಿನ ಪೇಟೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಬಿ.ರವಿಚಂದ್ರ, ಎಸ್.ರವಿ, ಎದ್‌ಎಂ.ವೆಂಕಟೇಶ್, ಎಂ.ಮಂಜುನಾಥ್, ಎಚ್‌ವಿ ಲಕ್ಷ್ಮಣ್, ವೀಣಾ, ಶಾಂತಾ, ಸಿಇಒ ಉಮಾಶಂಕರ್, ಹಾಲು ಪರೀಕ್ಷಕ ಅರುಣ್, ಸಹಾಯಕ ಸಂದೀಪ್, ಹಾಗೂ ಸದಸ್ಯರು ಹಾಜರಿದ್ದರು.ಫೋಟೋ: 8 ಹೆಚ್‌ಎಸ್‌ಕೆ 2

ಹೊಸಕೋಟೆಯ ಮೇಲಿನಪೇಟೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಡೈರಿ ಅಧ್ಯಕ್ಷ ಡಾ.ಸಿ.ಜಯರಾಜ್ ಗೋವುಗಳಿಗೆ ಉಚಿತ ಪಶು ಆಹಾರ ವಿತರಿಸಿದರು. ಸಂಘದ ನಿರ್ದೇಶಕರಾದ ಬಿ.ರವಿಚಂದ್ರ, ಎಸ್.ರವಿ, ಎದ್‌ಎಂ.ವೆಂಕಟೇಶ್, ಎಂ.ಮಂಜುನಾಥ್, ವೀಣಾ, ಶಾಂತಾ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ