ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ

KannadaprabhaNewsNetwork |  
Published : May 17, 2025, 01:23 AM IST
ಗೌರಿಬಿದನೂರಿನ ಶಾಸಕರ ಗೃಹಕಛೇರಿಯಲ್ಲಿ ನಗರದ ಆರ್ಯ ವೈಶ್ಯ ಸಮುದಾಯ ಕಾಂಗ್ರೆಡ್ ತೊರೆದು ಶಾಸಕರ ಸಮ್ಮುಖದಲ್ಲಿ ಕೆ.ಹೆಚ್.ಪಿ.ಬಣಕ್ಕೆ ಸೇರ್ಪಡೆಯಾದರು | Kannada Prabha

ಸಾರಾಂಶ

ಗೌರಿಬಿದನೂರು ತಾಲೂಕಿನ ಕೆರೆಗಳಿಗೆ 2 ವರ್ಷದಲ್ಲಿ ಎತ್ತಿನಹೊಳೆ ನೀರನ್ನು ತುಂಬಿಸುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದ್ದಾರೆ. ಜನಪ್ರತಿನಿಧಿಗಳು ಜನಾದೇಶ ಮೀರಿ ಹಿಂದಿನ ಬಾಗಿಲಿನಿಂದ ಬೇರೆ ರಾಜಕೀಯ ಪಕ್ಷಕ್ಕೆ ಸೇರಿದರೆ ಅದು ತಾಲೂಕಿನ ಜನತೆಗೆ ಅವಮಾನ ಮಾಡಿದಂತಾಗುತ್ತದೆ

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಮ್ಮ ವಿರೋ ಧಿಗಳು ಮೊದಲಿನಿಂದಲೂ ಅಡತಡೆ ಮಾಡುತ್ತಲೇ ಇದ್ದಾರೆ. ಆದರೂ ತಾವು ಎದೆಗುಂದದೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ಸಮಗ್ರಅಭಿವೃದ್ಧಿಗೆ ಶ್ರಮಿಸುತ್ತಿರುವುದಾಗಿ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಹೇಳಿದರು.ನಗರದ ಶಾಸಕರ ಗೃಹ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ವಿವಿಧ ಪಕ್ಷಗಳ ಮುಖಂಡರ ಕೆಎಚ್‌ಪಿ ಬಣಕ್ಕೆ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಾಲೂಕಿನ ಜನತೆ ನನಗೆ 40ಸಾವಿರಕ್ಕಿಂತಲೂ ಹೆಚ್ಚಿನ ಮತಗಳ ಅಂತರದಲ್ಲಿ ನನ್ನನ್ನು ಗೆಲ್ಲಿಸಿದ್ದಾರೆ, ಆದರೂ ಜನಾದೇಶ ಮೀರಿ ಹಿಂದಿನ ಬಾಗಿಲಿನಿಂದ ಬೇರೆ ರಾಜಕೀಯ ಪಕ್ಷಕ್ಕೆ ತಾವು ಸೇರಿದರೆ ಅದು ತಾಲೂಕಿನ ಜನತೆಗೆ ಅವಮಾನ ಮಾಡಿದ ಹಾಗೆ ಎಂದರು. ಕೆರೆಗಳಿಗೆ ಎತ್ತಿನಹೊಳೆ ನೀರು

ನಿಮ್ಮ ಬೆಂಬಲ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತೇನೆ ನನಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಮಾತು ಕೊಟ್ಟಿದ್ದಾರೆ ನಿಮ್ಮ ತಾಲ್ಲೂಕಿನ ಕೆರೆಗಳಿಗೆ 2ವರ್ಷದಲ್ಲಿ ಎತ್ತಿನಹೊಳೆ ನೀರನ್ನು ತುಂಬಿಸುತ್ತೇನೆ ಎಂದು ಹೇಳಿದ್ದಾರೆ. ನಗರಕ್ಕೆ ನೀರುತರುವ ಯೋಜನೆಗೆ ವಾಟದಹೊಸಹಳ್ಳಿ ಕೆರೆಗೆ ಪೈಪ್ ಲೈನ್ ಮಾಡಿದ್ದಾರೆ ಎಂದರು.ನಗರದ ಆರ್ಯ್ಯವೈಶ್ಯ ಸಮುದಾಯದ ಮುಖಂಡರ ಸೇರ್ಪಡೆಗೆ ನಾನಾ ರೀತಿ ಅಡ್ಡಿ ಎದುರಾದರೂ ಅದನ್ನೆಲ್ಲಾ ಬದಿಗೊತ್ತಿ ತಮ್ಮಮೇಲಿನಪ್ರೀತಿ ವಿಶ್ವಾಸ ಹಾಗೂ ನಮ್ಮ ಸೇವಾ ಕಾರ್ಯಕ್ರಮಗಳನ್ನು ಮೆಚ್ಚಿ ಸ್ವಯಂಪ್ರೇರಿತರಾಗಿ ನಮ್ಮಬಣಕ್ಕೆ ಬಂದಿರುವುದು ಆನೆಬಲ ಬಂದಂತಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೋಚಿಮುಲ್ ನಿರ್ದೇಶಕ ಜೆ. ಕಾಂತರಾಜು, ಪುರಸಭೆ ಮಾಜಿ ಅಧ್ಯಕ್ಷ ಜಿ.ಎನ್. ನಾಗರಾಜ್, ಆರ್ಯವೈಶ್ಯ ಸಮುದಾಯದ ಮುಖಂಡ ರಾದ ಎಸ್.ಎಚ್. ಲಕ್ಷ್ಮಿನಾರಾಯಣ್, ನಗರಸಭೆ ಅಧ್ಯಕ್ಷ ಲಕ್ಷ್ಮೀ ನಾರಾಯಣಪ್ಪ ಉಪಾಧ್ಯಕ್ಷ ಫರೀದ್ ಮತ್ತು ಸದಸ್ಯರು, ಮಾಜಿ ಶಾಸಕಿ ಜ್ಯೋತಿ ರೆಡ್ಡಿ ಮುಖಂಡರಾದ ಆರ್.ಅಶೋಕ್ ಕುಮಾರ್, ಜೆ.ಕಾಂತ ರಾಜ್‌ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ