ಕನ್ನಡಪ್ರಭ ವಾರ್ತೆ ಹಾಸನ
ಅರ್ಥಶಾಸ್ತ್ರ ವಿಷಯವನ್ನು ಯಾರು ಆಯ್ಕೆ ಮಾಡಿಕೊಂಡಿದ್ದಾರೆ ಅಂತಹ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಗಿದ ಮೇಲೆ ಉತ್ತಮವಾದ ನೌಕರಿಯನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಜಿ ಕವಿತಾ ತಿಳಿಸಿದರು.ನಗರದ ಎಂ.ಜಿ. ರಸ್ತೆಯಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ವತಿಯಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ದಿನನಿತ್ಯ ಜೀವನದಲ್ಲಿ ಅರ್ಥಶಾಸ್ತ್ರ ಹೇಗೆ ಬಳಕೆಯಾಗುತ್ತಿದೆ, ಅರ್ಥಶಾಸ್ತ್ರ ವಿಷಯವನ್ನೂ ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿನಿಯರಿಗೆ ನೌಕರಿಯನ್ನು ಪಡೆಯಲು ಸಹಾಯವಾಗುತ್ತದೆ ಮುಂದೆ ಒಳ್ಳೆ ಭವಿಷ್ಯವಿದೆ ಎಂದು ಮನವರಿಕೆ ಮಾಡಿಕೊಟ್ಟರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ವೈ.ಡಿ. ರತ್ನ ಅವರು ಮಾತನಾಡಿ, ಭಾರತದ ಸಾರ್ವಜನಿಕ ಹಣಕಾಸಿನ ಇತ್ತೀಚಿನ ಪ್ರವೃತ್ತಿಗಳು ಈ ಎಂಬ ವಿಷಯವನ್ನು ವಿಸ್ತರಿಸಿ ಜಗತ್ತಿನಲ್ಲಿ ೪ನೇ ಬೃಹತ್ ರಾಷ್ಟ್ರವಾಗಿ ಹೊರಹೊಮ್ಮಿದ್ದೇವೆ. ಸಾರ್ವಜನಿಕ ಹಣಕಾಸು ಮುಖ್ಯ ಪಾತ್ರ ವಹಿಸುತ್ತದೆ ಎಂದು ಪ್ರಾಸ್ತಾವಿಕ ನುಡಿಯನ್ನಾಡಿದರು.ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಬಿ.ಎಸ್. ಪೂರ್ಣಿಮಾ ಮಾತನಾಡಿ, ಸಾರ್ವಜನಿಕ ಹಣಕಾಸಿನ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು. ಸಾರ್ವಜನಿಕ ವೆಚ್ಚ ಹೇಗೆ ನಿರ್ವಹಣೆ ಮಾಡುತ್ತದೆ. ಸಾರ್ವಜನಿಕರ ಹಣಕಾಸಿನ ಅಂಶಗಳು ಹೀಗಿವೆ ೧೧೨ನೇ ವಿಧಿಯ ಪ್ರಕಾರ ಬಜೆಟ್‌ನ ಮಂಡನೆಯಾದ ನಂತರ ಹೇಗೆ ಎಲ್ಲಾ ಕ್ಷೇತ್ರಗಳಿಗೂ ಹಣದ ಹೂಡಿಕೆ ಆಗಬೇಕೆಂದು ವಿದ್ಯಾರ್ಥಿಗಳಿಗೆ ಉದಾಹರಣೆಯ ಮೂಲಕ ಅರ್ಥ ಮಾಡಿಸಿದರು.
ಇದೇ ಸಂದರ್ಭದಲ್ಲಿ ಸಹ ಪ್ರಾಧ್ಯಾಪಕರಾದ ಡಾ. ಎಮ್.ಸಿ. ಗಿರೀಶ್, ಪದ್ಮಾವತಿ ಪಿ.ಆರ್. ಡಾ. ಎಚ್.ಎನ್. ಬಸವರಾಜು, ಅತಿಥಿ ಉಪನ್ಯಾಸಕರುಗಳಾದ ಬಿ. ಪ್ರೇಮ್ ಕುಮಾರ್, ಪೀರ್ ಸಾಬ್ ಮತ್ತು ಐಕ್ಯೂಎಸಿ ಸಂಚಾಲಕರಾದ ಎಸ್. ಯೋಗೇಶ್ ಉಪಸ್ಥಿತಿಯಲ್ಲಿದ್ದರು. ವಿದ್ಯಾರ್ಥಿನಿಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.