ರಾಮನಗರ: ಆಹಾರ ಅರಸಿ ಕಾಡಂಚಿನ ಗ್ರಾಮಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳು ವಿದ್ಯುತ್ ಆಘಾತದಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಮುಂದುವರೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಕಾಡಿನ ಮಧ್ಯೆ ಹಾದು ಹೋಗಿರುವ ವಿದ್ಯುತ್ ತಂತಿಗಳೂ ಆನೆಗಳ ಪಾಲಿಗೆ ಯಮಪಾಶವಾಗಿ ರೂಪಗೊಂಡಿದೆ. ಕೆಲವೆಡೆ ಸರಿಯಾದ ನಿರ್ವಹಣೆ ಇಲ್ಲದೆ ಜೋತಾಡುವ ತಂತಿಗಲು ತಗುಲಿ ಮೃತಪಟ್ಟಿದ್ದರೆ, ಕಾಡಂಚಿನ ಗ್ರಾಮಗಳಲ್ಲಿ ಅಕ್ರಮ ವಿದ್ಯುತ್ ತಂತಿಗಳು ಕಾಡಾನೆಗಳಿಗೆ ಉರುಳಾಗಿವೆ. ಇಷ್ಟೇ ಅಲ್ಲದೆ, ಗಾಳಿ, ಮಳೆಗೆ ತೋಟದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ, ಕಾಡುಗಳ್ಳರ ಗುಂಡೇಟು, ಅನುಮಾನಸ್ಪದ , ವಯೋಸಹಜ ಮತ್ತಿತರರು ಕಾರಣದಿಂದ ಆನೆಗಳು ಮೃತಪಟ್ಟಿವೆ.
ರಾಮನಗರ ಜಿಲ್ಲೆಯು ರಾಮನಗರ ಪ್ರಾದೇಶಿಕ ವಿಭಾಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಹಾಗೂ ಕಾವೇರಿ ವನ್ಯಜೀವಿ ಧಾಮ ವಿಭಾಗದೊಂದಿಗೆ ಅರಣ್ಯ ಗಡಿ ಹಂಚಿಕೊಂಡಿದೆ. ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಂತೆ 299 ಕಿ.ಮೀ. ದೂರ ಅರಣ್ಯ ವಿಸ್ತರಿಸಿದೆ. ಈ ಭಾಗದಲ್ಲಿ ಆನೆ ದಾಳಿ ತಡೆಯಲು ಈಗಾಗಲೇ ಅಗತ್ಯವಿದ್ದ ಸೂಕ್ಷ್ಮ ಸ್ಥಳಗಳಲ್ಲಿ ಕಂದಕ, ಸಿಮೆಂಟ್ ತಡೆಗೋಡೆ ಹಾಗೂ ರೇಲ್ವೆ ಕಂಬಿ ಬ್ಯಾರಿಕೇಡ್ ಗಳನ್ನು ನಿರ್ಮಿಸಿದ್ದರು ಪ್ರಯೋಜನವಾಗುತ್ತಿಲ್ಲ.ಕಾಡಾನೆಗಳ ಹಾಟ್‌ಸ್ಪಾಟ್:
ಕಳೆದ ಎರಡು ದಶಕದಿಂದ ಬೀಡು ಬಿಟ್ಟಿರುವ ಕಾಡನೆಗಳು ನಿತ್ಯವೂ ಈ ಭಾಗದ ರೈತರ ತಾಕುಗಳಿಗೆ ದಾಂಗುಡಿ ಇಡುತ್ತಿವೆ. ಪ್ರತಿವರ್ಷ ಸಾವಿರಾರು ಎಕರೆ ಬೆಳೆ ನಾಶ ಒಂದೆಡೆಯಾದರೆ, ಕನಿಷ್ಠ ಇಬ್ಬರಿಂದ ಮೂರು ಜನ ಕಾಡಾನೆಗಳ ದಾಳಿಗೆ ಸಿಲುಕಿ ಸಾವಿಗೀಡಾಗುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ 18-20 ಮಂದಿ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನೂರಾರು ಆನೆಗಳು ಬೀಡು ಬಿಟ್ಟಿವೆ. ನಾಲ್ಕು ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಗ್ರಾಮಗಳು ಶಾಶ್ವತ ಕಾಡಾನೆ ಪೀಡಿತ ಪ್ರದೇಶವಾಗಿ ಪರಿಣಮಿಸಿವೆ. ಈ ಗ್ರಾಮಗಳಲ್ಲಿ ರೈತರ ಜಮೀನಿಗೆ ನುಗ್ಗಿ ಬೆಳೆ ಹಾನಿಮಾಡುತ್ತಿವೆ. ಇನ್ನು ಕಾಡಾನೆಗಳನ್ನು ಓಡಿಸಲು ಹೋದರೆ ಜೀವಕ್ಕೆ ಅಪಾಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಕಾಡಾನೆ ಪೀಡಿತ ಪ್ರದೇಶಗಳ ಜನತೆ ಕತ್ತಲಾಗುತ್ತಿದ್ದಂತೆ ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ.ಬಾಕ್ಸ್.................
-2016ರ ಡಿ.8ರಂದು ಕನಕಪುರ ತಾಲೂಕಿನ ನೇರಳಟ್ಟಿಕೆರೆಯತ್ತ ಆಗಮಿಸುತ್ತಿದ್ದ ಸುಮಾರು 20 ವರ್ಷ ವಯಸ್ಸಿನ ಆನೆ ಮೇಲೆ ಕಾಡುಗಳ್ಳರು ಗುಂಡು ಹಾರಿಸಿದ್ದರು. ಬ್ಯಾಲಮರದ ಬಳಿ ನಿತ್ರಾಣಗೊಂಡಿದ್ದ ಹೆಣ್ಣಾನೆ ಚಿಕಿತ್ಸೆ ನೀಡಲಾಗಿತ್ತಾದರೂ ಫಲಕಾರಿಯಾಗದೆ ಅಸುನೀಗಿತ್ತು.
-2021ರ ಫೆ.26ರಂದು ರಾಮನಗರ ತಾಲೂಕು ತುಂಬೇನಹಳ್ಳಿಯ ಜಮೀನಿನಲ್ಲಿ ಟ್ರಾನ್ಸ್ ಫಾರ್ಮರ್ ಪಕ್ಕದಲ್ಲಿ ತೆರಳುವಾಗ ಗಂಡಾನೆ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದೆ.
-2021ರ ಸೆ.10ರಂದು ಚನ್ನಪಟ್ಟಣ ತಾಲೂಕಿನ ಮಲ್ಲಂಗೆರೆ ಗ್ರಾಮದ ತೋಟದಲ್ಲಿ 35 - 40 ವರ್ಷ ಪ್ರಾಯದ ಕಾಡನೆ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿತು.
ಬಾಕ್ಸ್ ..........
ಪ್ರಯೋಜನಕ್ಕೆ ಬಾರದ ಕಾಡಾನೆ ಕಾರ್ಯಪಡೆಕಾಡಾನೆಗಳಿಂದ ಜನರಿಗೆ, ಜನರಿಂದ ಆನೆಗಳಿಗೆ ತೊಂದರೆಯಾಗುವುದನ್ನು ತಪ್ಪಿಸಲು ಕಳೆದ 2-3 ತಿಂಗಳ ಹಿಂದಷ್ಟೇ ಕಾಡಾನೆ ಕಾರ್ಯಪಡೆ ರಚಿಸಲಾಗಿದೆ. ಆದರೆ, ಈ ಟಾಸ್ಕ್ ಫೋರ್ಸ್ ಜನರ ಬಗ್ಗೆ ಗಮನ ಹರಿಸುತ್ತಿಲ್ಲ, ಕಾಡಾನೆಗಳ ಮೇಲೂ ನಿಗಾ ಇಡುತ್ತಿಲ್ಲ. ಟಾಸ್ಕ್ ಫೋರ್ಸ್ ನಲ್ಲಿ ಒಬ್ಬ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಉಪವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕರು ಹಾಗೂ 32 ಜನ ಹೊರಗುತ್ತಿಗೆ ನೌಕರರನ್ನು ಕಾರ್ಯಪಡೆಯಲ್ಲಿ ಇದ್ದಾರೆ. ಇಷ್ಟು ಜನರಿದ್ದರೂ ಕಾಡಾನೆಗಳ ರಕ್ಷಣೆಯೂ ಆಗುತ್ತಿಲ್ಲ. ಇತ್ತ ಜನರಿಗೂ ಯಾವುದೇ ರೀತಿಯಲ್ಲೂ ಪ್ರಯೋಜನವಾಗುತ್ತಿಲ್ಲ.(ಫೋಟೋಗಳನ್ನು ಚಿಕ್ಕಚಿಕ್ಕದಾಗಿ ಎಲ್ಲವನ್ನೂ ಬಳಸಿ)
7ಕೆಆರ್ ಎಂಎನ್ 1,2,3,4,5,6.ಜೆಪಿಜಿ1.ಬ್ಯಾಲಮರದ ಬಳಿ ನಿತ್ರಾಣಗೊಂಡು ಸಾವನ್ನಪ್ಪಿದ ಹೆಣ್ಣಾನೆ
2.ಅವ್ವೇರಹಳ್ಳಿಯಲ್ಲಿ ಕಾಡಾನೆ ಸಿದ್ದ ಮೃತಪಟ್ಟಿದ್ದು3.ತುಂಬೇನಹಳ್ಳಿಯ ಜಮೀನಿನಲ್ಲಿ ವಿದ್ಯುತ್ ಶಾಕ್ ನಿಂದ ಆನೆ ಸಾವು
4.ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಗಂಡಾನೆ ಸಾವನ್ನಪ್ಪಿರುವುದು5.ಮಲ್ಲಂಗೆರೆ ಗ್ರಾಮದ ತೋಟದಲ್ಲಿ ಕಾಡಾನೆ ಸಾವು
6.ಕೋಡಿಹಳ್ಳಿಯಲ್ಲಿ ಹೂತಿದ್ದ ಕಾಡಾನೆ ಕಳೆಬರ