ಮೂಡುಬಿದಿರೆಯಲ್ಲಿ ಮೊಸರುಕುಡಿಕೆ ಉತ್ಸವ, ಅಭಯಚಂದ್ರಗೆ ‘ಶ್ರೀಕೃಷ್ಣ ಪ್ರಶಸ್ತಿ’

KannadaprabhaNewsNetwork |  
Published : Aug 29, 2024, 12:51 AM IST
ಚಿತ್ರ ೨೭೦೮ಎಂಡಿ೧  ಮಾಜಿ ಸಚಿವ ಕೆ. ಅಭಯಚಂದ್ರ ಅವರಿಗೆ `ಶ್ರೀಕೃಷ್ಣ ಪ್ರಶಸ್ತಿ-೨೦೨೪' ಪ್ರದಾನಗೈದು ಸಮ್ಮಾನಿಸಲಾಯಿತು. | Kannada Prabha

ಸಾರಾಂಶ

ಸಂಸ್ಥೆಯ ಗೌರವ ಅಧ್ಯಕ್ಷ ಬೊಕ್ಕಸ ಗಣೇಶ ರಾವ್, ಉದ್ಯಮಿ ಸುಗಂಧಿ ಹರೀಶ್ ಅಮೀನ್ ಮುಂಬೈ, ಡಾ. ಸಾತ್ವಿಕಾ ಕೃಷ್ಣ ಮಂಜೇಶ್ವರ ಇವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಅಭಯಚಂದ್ರ ಅವರದ್ದು ಭ್ರಷ್ಟಾಚಾರ, ಕುಟುಂಬ ರಾಜಕಾರಣವಿಲ್ಲದ ಸಮಾಜಮುಖಿ ಚಿಂತನೆ , ಅಚಲ ಪಕ್ಷ ನಿಷ್ಠೆಯ ಅಪರೂಪದ ಕಾರ್ಯಶೈಲಿಯ ಅಚ್ಯುತ ವ್ಯಕ್ತಿತ್ವ ''''''''ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ಅವರು ‘ಯಕ್ಷಗಾನೀಯ ಮೊಸರು ಕುಡಿಕೆ ಉತ್ಸವ’ ಖ್ಯಾತಿಯ ಮೂಡುಬಿದಿರೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ೧೦೮ನೇ ವರ್ಷದ ಮೊಸರು ಕುಡಿಕೆ ಸಂಭ್ರಮಕ್ಕೆ ಪೂರಕವಾಗಿ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಮಂಗಳವಾರ ಆಯೋಜಿಸಿದ ೩೮ನೇ ವರ್ಷದ ಸಾಂಸ್ಕೃತಿಕ ಕಲಾಪ, ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಅವರಿಗೆ ‘ಶ್ರೀಕೃಷ್ಣ ಪ್ರಶಸ್ತಿ-೨೦೨೪’ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ಮಾತುಗಳನ್ನಾಡಿದರು. ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ ಎಂ., ಉದ್ಯಮಿ ಕೆ. ಶ್ರೀಪತಿ ಭಟ್, ಸುಗಂಧಿ ಹರೀಶ್ ಅಮೀನ್, ಡಾ. ಎಂ. ವಿನಯ ಕುಮಾರ ಹೆಗ್ಡೆ, ಐ. ರಾಘವೇಂದ್ರ ಪ್ರಭು, ಪ್ರಭಾಚಂದ್ರ ಜೈನ್ ಮೊದಲಾದವರು ಉಪಸ್ಥಿತರಿದ್ದರು.

ರಾಜಕಾರಣದಲ್ಲಿ ಏಳು ಬೀಳುಗಳು ಸಹಜವೇ. ಅಧಿಕಾರದಲ್ಲಿದ್ದಾಗ ಜನರ ಸೇವೆ, ಅಭಿವೃದ್ಧಿ ಕಾರ್ಯಗಳ ಅವಕಾಶವನ್ನು ಬಳಸಿಕೊಂಡಿದ್ದೇನೆ. ಈಗ ಹಾಲಿ ಶಾಸಕರ ಸರದಿ. ಅಭಿವೃದ್ಧಿ ಕಾರ್ಯಗಳಿಗೆ ನನ್ನ ಸಹಕಾರ ಸದಾ ಇದೆ ಎಂದು ಅಭಯಚಂದ್ರ ಜೈನ್‌ ಹೇಳಿದರು. ಮುಖ್ಯ ಅತಿಥಿ, ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿದರು. ಸನ್ಮಾನ: ಸಂಸ್ಥೆಯ ಗೌರವ ಅಧ್ಯಕ್ಷ ಬೊಕ್ಕಸ ಗಣೇಶ ರಾವ್, ಉದ್ಯಮಿ ಸುಗಂಧಿ ಹರೀಶ್ ಅಮೀನ್ ಮುಂಬೈ, ಡಾ. ಸಾತ್ವಿಕಾ ಕೃಷ್ಣ ಮಂಜೇಶ್ವರ ಇವರನ್ನು ಸನ್ಮಾನಿಸಲಾಯಿತು. ಪುರಸಭೆ ನೂತನ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮೂಡಾ'''''''' ನೂತನ ಅಧ್ಯಕ್ಷ ಹರ್ಷವರ್ಧನ ಪಡಿವಾಳ ಮತ್ತು ಮುಖ್ಯಮಂತ್ರಿಪದಕ ಪುರಸ್ಕೃತ ಮೂಡುಬಿದಿರೆ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ., ಶ್ರೀ ಕೃಷ್ಣ ವೇಷಧಾರಿ ಶ್ರೀ ಚಂದ್ರಶೇಖರ ಮಳಲಿ ಇವರನ್ನು, ಸಂಘಟನೆಗಳ ಪೈಕಿ ನೇತಾಜಿ ಬ್ರಿಗೇಡ್, ಸರ್ವೋದಯ ಫ್ರೆಂಡ್ಸ್ , ಪವರ್ ಫ್ರೆಂಡ್ಸ್ ಇವುಗಳನ್ನು ಗೌರವಿಸಲಾಯಿತು. ಸಂಸ್ಥೆಯ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಜರಗಿತು.

ಅಧ್ಯಕ್ಷ ಸಂತೋಷ್ ಕುಮಾರ್ ಸ್ವಾಗತಿಸಿದರು. , ಸಂಚಾಲಕ ಬಿ. ಸುರೇಶ್ ರಾವ್, ಪ್ರಧಾನ ಕಾರ್ಯದರ್ಶಿ ಸುಶಾಂತ ಕರ್ಕೇರ , ಕೋಶಾಧಿಕಾರಿ ಶಿವಾನಂದ ಶಾಂತಿ ಅತಿಥಿಗಳನ್ನು ಗೌರವಿಸಿದರು. ಗೌ.ಸಲಹೆಗಾರ ಕೆ.ವಿ.ರಮಣ್ ನಿರೂಪಿಸಿದರು. ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ಶಿಷ್ಯವೃಂದದವರಿಂದ ನೃತ್ಯೋತ್ಸವಂ-೨೦೨೪ ಜರಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!