ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಜನರ ಬಹುದಿನದ ಕನಸಾಗಿದ್ದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಗುರುವಾರದಿಂದ ಸಾರ್ವಜನಿಕರ ಸೇವೆಗೆ ಮುಕ್ತವಾಗಿದ್ದು, ಮಾರ್ಚ್ 4ರಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ನಂದಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಭೋದನಾ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ ಮನವಿ ಮಾಡಿದರು.
ಈ ಹಿಂದೆ ಜಿಲ್ಲಾಸ್ಪತ್ರೆಯಾಗಿದ್ದ ಕಟ್ಟಡವನ್ನು ನವ ವಿನ್ಯಾಸಗೊಳಿಸುವ ಜೊತೆಗೆ ಸುಸಜ್ಜಿತ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿ 150 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಇದಕ್ಕೆ ಸಹಕಾರ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್, ಶಾಸಕ ಪ್ರದೀಪ್ ಈಶ್ವರ್ , ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಧನ್ಯವಾದಗಳು ಎಂದರು.
ಉಚಿತ ಆರೋಗ್ಯ ಸೇವೆಈ ಆಸ್ಪತ್ರೆಯಲ್ಲಿ ಗರ್ಭಿಣಿ ಸ್ತ್ರಿಯರಿಗೆ, 0-5 ವರ್ಷದೊಳಗಿನ ಮಕ್ಕಳ ಆರೋಗ್ಯ ಚಿಕಿತ್ಸೆಗೆ, ಹೆರಿಗೆಯ ಆರೋಗ್ಯ ಸೇವೆಗಳು ಇಲ್ಲಿ ಸಂಪೂರ್ಣವಾಗಿ ಉಚಿತ. ಇದಕ್ಕಾಗಿ ಐವರು ಮಕ್ಕಳ ತಜ್ಞ ವೈದ್ಯರು, ಇಬ್ಬರು ಆರೋಗ್ಯಾಧಿಕಾರಿಗಳು, ಮೂವರು ಅನಸ್ತೇಶಿಯ ವೈದ್ಯರು, 26 ಆರೋಗ್ಯ ಶೂಶ್ರೂಷಕಿಯರು, 10 ಡಿ, ದರ್ಜೆ ನೌಕರರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕಿ ಮಂಜುಳ ದೇವಿ ಮಾತನಾಡಿ, ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ದೊರಕದ ಅತ್ಯಾಧುನಿಕ ಆರೋಗ್ಯ ಸೇವೆ ಮಹಿಳೆಯರು ಮತ್ತು ಮಕ್ಕಳಿಗೆ ದೊರೆಯುತ್ತದೆ. ಸಾರ್ಜವನಿಕರು ಈ ವಲತ್ತುಗಳನ್ನು ಸಮರ್ಪಕವಾಗಿ ಉಪಯೋಗಿಸುವಂತೆ ಮನವಿ ಮಾಡಿದರು.