ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು : ನಿಖರ ಕಾಣರಕ್ಕೆ ಪತ್ರ ಬರೆದ ಆರೋಗ್ಯ ಇಲಾಖೆ

KannadaprabhaNewsNetwork |  
Published : Dec 29, 2024, 01:19 AM ISTUpdated : Dec 29, 2024, 11:42 AM IST
death

ಸಾರಾಂಶ

ಸಂಡೂರಿನ ನಾಗಲಾಪುರದ ಬಾಣಂತಿ ಐಶ್ವರ್ಯ (20) ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಡಿ.26ರಂದು ಮೃತಪಟ್ಟಿದ್ದು, ಸಾವಿಗೆ ನಿಖರ ಕಾರಣ ತಿಳಿಯಲು ಕೊಪ್ಪಳ ಜಿಲ್ಲಾಸ್ಪತ್ರೆಗೆ ವಿಜಯನಗರ ಆರೋಗ್ಯ ಇಲಾಖೆ ಪತ್ರ ಬರೆದಿದೆ.

ಹೊಸಪೇಟೆ: ಸಂಡೂರಿನ ನಾಗಲಾಪುರದ ಬಾಣಂತಿ ಐಶ್ವರ್ಯ (20) ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಡಿ.26ರಂದು ಮೃತಪಟ್ಟಿದ್ದು, ಸಾವಿಗೆ ನಿಖರ ಕಾರಣ ತಿಳಿಯಲು ಕೊಪ್ಪಳ ಜಿಲ್ಲಾಸ್ಪತ್ರೆಗೆ ವಿಜಯನಗರ ಆರೋಗ್ಯ ಇಲಾಖೆ ಪತ್ರ ಬರೆದಿದೆ.ಈ ಸಾವು ಫುಡ್‌ ಪಾಯ್ಜನ್‌ ನಿಂದ ಆಗಿದೆಯೋ ಇಲ್ಲವೇ ಬಹು ಅಂಗಾಗ ವೈಫಲ್ಯದಿಂದ ಆಗಿದೆ ಎಂಬುದು ತಿಳಿಯಲಿದೆ. ಹಾಗಾಗಿ ಈಗ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ ಎಂದು ವಿಜಯನಗರ ಡಿಎಚ್‌ಒ ಡಾ. ಎಲ್‌.ಆರ್‌. ಶಂಕರ ನಾಯ್ಕ ಅವರು ಕೊಪ್ಪಳ ಜಿಲ್ಲಾಸ್ಪತ್ರೆಗೆ ಪತ್ರ ಬರೆದಿದ್ದಾರೆ.

ಈ ಬಾಣಂತಿ ಇಡ್ಲಿ ತಿಂದು ಫುಡ್‌ ಪಾಯ್ಜನ್‌ನಿಂದ ಮೃತಪಟ್ಟಿರಬಹುದು ಎಂಬ ಶಂಕೆ ಒಂದು ಕಡೆ ಆದರೆ, ಕಿಡ್ನಿ ವೈಫಲ್ಯ, ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಆದರೆ, ಈ ಬಗ್ಗೆ ನಿಖರ ಕಾರಣ ಏನಿರಬಹುದು ಎಂದು ತಿಳಿಯಲು ಸ್ವತಃ ವಿಜಯನಗರ ಆರೋಗ್ಯ ಇಲಾಖೆಯೇ ಈಗ ಕೊಪ್ಪಳ ಜಿಲ್ಲಾಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜ್‌ಗೆ ಪತ್ರ ಬರೆದಿದೆ.

ಹೊಸಪೇಟೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಐಶ್ವರ್ಯ ಡಿ.20ರಂದು ಮಗುವಿಗೆ ಜನ್ಮ ನೀಡಿದ್ದರು. ಸಿಜೇರಿಯನ್ ಮೂಲಕ ಹೆರಿಗೆಯಾಗಿದೆ. ಇಡ್ಲಿ ತಿಂದಿದ್ದರಿಂದ ಫುಡ್ ಪಾಯ್ಜನ್ ಆಗಿದೆ. ವಾಂತಿ-ಬೇಧಿಯಿಂದ ಬಳಲಿದ ಐಶ್ವರ್ಯ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಡಿಸೆಂಬರ್ 26ರಂದು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಐಶ್ವರ್ಯ ಸಾವಿಗೆ ಹೊರಗಿನಿಂದ ತಂದು ಸೇವಿಸಿದ ಇಡ್ಲಿಯೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಮೃತ ಬಾಣಂತಿ ಕುಟುಂಬದವರು ಸಾವಿನ ಕುರಿತು ತನಿಖೆ ಆಗಲಿ ಎಂದು ಒತ್ತಾಯಿಸಿದ್ದಾರೆ. ಆರೋಗ್ಯವಾಗಿದ್ದ ಮಗಳು ಏಕಾಏಕಿ ಮೃತಪಟ್ಟಿದ್ದಾಳೆ ಎಂದು ನಗರದ ಸರ್ಕಾರಿ ಆಸ್ಪತ್ರೆ ಎದುರು ಅಳಲು ತೋಡಿಕೊಂಡರು.

ಡಿಎಚ್‌ಓ ಸ್ಪಷ್ಟನೆ:

ಡಿ.20ರಂದು ಬಾಣಂತಿ ಹೊಸಪೇಟೆ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದರು. ಸಿಜೇರಿಯನ್ ಮೂಲಕ‌ ಹೆರಿಗೆ ಮಾಡಿಸಲಾಗಿದೆ. ನಾಲ್ಕು ದಿನ ಆರೋಗ್ಯವಾಗಿದ್ದರು. ಏಕಾಏಕಿ ಆರೋಗ್ಯದಲ್ಲಿ ಏರುಪೇರು ಕಂಡ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿತ್ತು. ಕೊಪ್ಪಳದಲ್ಲಿ ಬಾಣಂತಿ‌ ಮೃತಪಟ್ಟಿದ್ದಾರೆ. ಸಾವಿಗೆ ಫುಡ್ ಪಾಯ್ಜನ್ ಕಾರಣವಲ್ಲ. ಇಡ್ಲಿ ತಿಂದವರೆಲ್ಲರಿಗೂ ಸಮಸ್ಯೆ ಆಗಬೇಕಿತ್ತು. ಈ ಬಗ್ಗೆ ನಿಖರ ಕಾರಣ ತಿಳಿಯಲಾಗುವುದು. ಕಿಡ್ಕಿ ವೈಫಲ್ಯ, ಹೃದಯ ಸಮಸ್ಯೆ ಇಲ್ಲವೇ ಬಹು ಅಂಗಾಗ ವೈಫಲ್ಯನಾ? ಎಂಬುದು ಕೊಪ್ಪಳ ಜಿಲ್ಲಾಸ್ಪತ್ರೆಯಿಂದ ವರದಿ ಬಂದ ಬಳಿಕವೇ ತಿಳಿಯಲಿದೆ. ನಾವು ಕೂಡ ಪತ್ರ ಬರೆದಿದ್ದೇವೆ. ಈ ಬಗ್ಗೆ ತನಿಖೆ ಬಳಿಕವೇ ಬಾಣಂತಿ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ವಿಜಯನಗರ ಡಿಎಚ್ಒ ಡಾ.‌ ಎಲ್.ಆರ್‌. ಶಂಕರ ನಾಯ್ಕ ಸ್ಪಷ್ಟಪಡಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ