ಮಾತೆ ಶ್ಯಾಮೀದಬಿ ಅಮ್ಮನವರ ಕಾರ್ಯ ಶ್ಲಾಘನೀಯ: ಶಾಸಕ

KannadaprabhaNewsNetwork |  
Published : Feb 06, 2025, 11:46 PM IST
ಪೋಟೊಗಳುಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದಲ್ಲಿ ದೇವಿ ರೇಣುಕಾ ಯಲ್ಲಮ್ಮನ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಟಾಪನೆಯ ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಮಾತೆ ಶ್ಯಾಮೀದಬಿ ಅಮ್ಮನವರು ಇಸ್ಲಾಂ ಧರ್ಮದವರಾಗಿದ್ದರೂ ಸಹಿತ ದೇವಿ ರೇಣುಕಾ ಯಲ್ಲಮ್ಮನವರನ್ನು ಆರಾಧಿಸುತ್ತಾ ಭಕ್ತರ ಇಷ್ಠಾರ್ಥಗಳನ್ನು ಈಡೇರಿಸುತ್ತಿರುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಮಾತೆ ಶ್ಯಾಮೀದಬಿ ಅಮ್ಮನವರು ಇಸ್ಲಾಂ ಧರ್ಮದವರಾಗಿದ್ದರೂ ಸಹಿತ ದೇವಿ ರೇಣುಕಾ ಯಲ್ಲಮ್ಮನವರನ್ನು ಆರಾಧಿಸುತ್ತಾ ಭಕ್ತರ ಇಷ್ಠಾರ್ಥಗಳನ್ನು ಈಡೇರಿಸುತ್ತಿರುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ತಾಲೂಕಿನ ಮುದೇನೂರು ಗ್ರಾಮದಲ್ಲಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಉದ್ಘಾಟನೆ ಹಾಗೂ ದೇವಿಯ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾತೆ ಶ್ಯಾಮೀದಬಿ ಅಮ್ಮನವರು ದೇವಸ್ಥಾನದ ನಿರ್ಮಾಣ ಹಾಗೂ ಮೂರ್ತಿ ಪ್ರತಿಷ್ಠಾಪನ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಉತ್ತಮ ಕಾರ್ಯವಾಗಿದೆ. ನಾನು ಸಹಿತ ಮುಂದಿನ ದಿನಗಳಲ್ಲಿ ದೇವಸ್ಥಾನದ ಜಿರ್ಣೋದ್ಧಾರಕ್ಕೆ ಅನುದಾನ ನೀಡಲು ಪ್ರಯತ್ನಿಸುತ್ತೇನೆ ಎಂದರು.

ಈ ಸಂದರ್ಭ ಆರೂಢ ಅಯ್ಯಪ್ಪಸ್ವಾಮಿಗಳು, ಗುರುಸಿದ್ದೇಶ ಶಿವಾಚಾರ್ಯಸ್ವಾಮಿಗಳು, ಮಾತೆ ಶ್ಯಾಮೀದಬಿ ಅಮ್ಮನವರು, ಮಾಜಿ ಸಚಿವ ಅಮರೇಗೌಡ ಭಯ್ಯಾಪೂರ, ಜಿಪಂ ಮಾಜಿ ಸದಸ್ಯ ಕೆ. ಮಹೇಶ್, ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬಾದಾಮಿ, ಅಶೋಕ್ ಬಳೂಟಗಿ, ಗ್ರಾಪಂ ಸದಸ್ಯರಾದ ಹುಸೇನಪ್ಪ ಹಿರೇಮನಿ, ಶಶಿಧರ ಉಳ್ಳಾಗಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ ಚೇತನ ಕುಮಾರ್ ಹಿರೇಮಠ, ಆದಪ್ಪ ಉಳ್ಳಾಗಡ್ಡಿ, ಹನುಮಗೌಡ ಬನ್ನಟ್ಟಿ, ಶೇಖರಪ್ಪ ಬನ್ನಟ್ಟಿ, ಚಂದ್ರಶೇಖರಯ್ಯ ಹಿರೇಮಠ, ರುದ್ರಯ್ಯ ಹಿರೇಮಠ, ನಬಿಸಾಬ ಲಾಠಿ, ಸುರೇಶ್ ಪಾಟೀಲ್ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು

ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಬೆಳಗಿನ ಜಾವ ಬ್ರಾಹ್ಮೀ ಮೂಹೂರ್ತದಲ್ಲಿ ಅಮ್ಮನವರ ಮೂರ್ತಿಗೆ ಮಹಾ ರುದ್ರಾಭಿಷೇಕ, ಪ್ರತಿಷ್ಠಾಪನೆಯ ನವಗ್ರಹ ಪೂಜೆ, ಚಂಡಿಕಾ ಹೋಮ ಹಾಗೂ ಮಹಾಪೂಜೆ ಧಾರ್ಮಿಕ ಕಾರ್ಯಗಳು ರಬಕವಿ ಬ್ರಹ್ಮನಂದ ಮಠದ ಗುರುಸಿದ್ದೇಶ ಶಿವಾಚಾರ್ಯರು ನಡೆಸಿಕೊಟ್ಟರು. ಮಧ್ಯಾಹ್ನ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ನಂತರ ಮಹಾಪ್ರಸಾದ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ