ಮೋಟಾರ್‌ ಅಳವಡಿಸಿದರು; ಆದರೆ ಫಿಲ್ಟರ್‌ ಇಲ್ಲ!

KannadaprabhaNewsNetwork |  
Published : May 12, 2026, 02:15 AM IST
ನವಲಗುಂದ ತಾಲೂಕಿನ ನಾಗನೂರು ಕೆರೆಗೆ ಹೊಸದಾಗಿ ಅಳವಡಿಸಿದ ಮೋಟಾರ್‌ನಿಂದ ಗ್ರಾಮಕ್ಕೆ ನೀರು ಪೂರೈಸುತ್ತಿರುವುದು. | Kannada Prabha

ಸಾರಾಂಶ

15 ದಿನಗಳಿಂದ ಮೋಟಾರ್ ಕೆಟ್ಟಿದ್ದರಿಂದ ನಲ್ಲಿಯ ನೀರು ಬಂದ್ ಆಗಿತ್ತು. ಹೀಗಾಗಿ ಗ್ರಾಮಸ್ಥರು ತಳ್ಳುವ, ಎತ್ತಿನಗಾಡಿ ಹಾಗೂ ಹೆಗಲ ಮೇಲೆ ಕೊಡ ಹೊತ್ತು ಮನೆಗೆ ನೀರು ತರುತ್ತಿರುತ್ತಿದ್ದರು. ಈ ಕುರಿತು ಮೇ 9ರಂದು "ಗುಡಿಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಲುಷಿತ ನೀರು ಪೂರೈಕೆ " ಎಂಬ ಶೀರ್ಷಿಕೆಯಡಿ "ಕನ್ನಡಪ್ರಭ " ವಿಶೇಷ ವರದಿ ಪ್ರಕಟಿಸಿತ್ತು.

ನವಲಗುಂದ:

ತಾಲೂಕಿನ ಗುಡಿಸಾಗರ ಗ್ರಾಪಂ ವ್ಯಾಪ್ತಿಯ ನಾಗನೂರಲ್ಲಿ ಕೆರೆ ನೀರು ಎತ್ತಲು ಮೋಟಾರ್‌ ಅಳವಡಿಸಲಾಗಿದೆ. ಆದರೆ, ಫಿಲ್ಟರ್‌ ಅಳವಡಿಸುವ ಕೆಲಸ ಮಾತ್ರ ಗ್ರಾಪಂ ಅಧಿಕಾರಿಗಳು ಮಾಡಿಲ್ಲ. ಹೀಗಾಗಿ ಈಗಲೂ ರಾಡಿ ನೀರೇ ಸರಬರಾಜು ಆಗುತ್ತಿದೆ.

15 ದಿನಗಳಿಂದ ಮೋಟಾರ್ ಕೆಟ್ಟಿದ್ದರಿಂದ ನಲ್ಲಿಯ ನೀರು ಬಂದ್ ಆಗಿತ್ತು. ಹೀಗಾಗಿ ಗ್ರಾಮಸ್ಥರು ತಳ್ಳುವ, ಎತ್ತಿನಗಾಡಿ ಹಾಗೂ ಹೆಗಲ ಮೇಲೆ ಕೊಡ ಹೊತ್ತು ಮನೆಗೆ ನೀರು ತರುತ್ತಿರುತ್ತಿದ್ದರು. ಈ ಕುರಿತು ಮೇ 9ರಂದು "ಗುಡಿಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಲುಷಿತ ನೀರು ಪೂರೈಕೆ " ಎಂಬ ಶೀರ್ಷಿಕೆಯಡಿ "ಕನ್ನಡಪ್ರಭ " ವಿಶೇಷ ವರದಿ ಪ್ರಕಟಿಸಿತ್ತು.

ವರದಿ ಹಿನ್ನೆಲೆ ಎಚ್ಚೆತ್ತುಕೊಂಡ ಗ್ರಾಪಂ ಅಧಿಕಾರಿಗಳು ಭಾನುವಾರ ಹೊಸ ಮೋಟಾರ್ ಅಳವಡಿಸಿದ್ದಾರೆ. ಈ ಮೂಲಕ ಕೆರೆ ನೀರು ಪೂರೈಸಲು ಮುಂದಾಗಿದ್ದಾರೆ. ಇದೇ ಮೋಟರ್‌ಗೆ ಗ್ರಾಮಕ್ಕೆ ತೆರಳುವ ನಲ್ಲಿಯ ಪೈಪ್‌ಲೈನ್‌ಗೆ ಅಳವಡಿಸಿದ್ದು, ನೀರು ಯಾವುದೇ ರೀತಿಯ ಶುದ್ಧೀಕರಣವಾಗದೇ ನೇರವಾಗಿ ನಲ್ಲಿ ಮೂಲಕ ಮನೆ-ಮನೆಗೆ ಸೇರುತ್ತಿದೆ. ಈ ನೀರು ಸಂಪೂರ್ಣವಾಗಿ ಗಡಸಿನಿಂದ ಕೂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಇನ್ನು ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವೂ ಹಲವು ವರ್ಷಗಳಿಂದ ಬಂದ್ ಆಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ದುರಸ್ತಿ ಮಾಡಿಸುವ ಗೋಜಿಗೆ ಹೋಗದಿರುವುದು ವಿಪರ್ಯಾಸ!. ಇತ್ತ ಕೆರೆಯ ನೀರು ಗಡಸು(ರಾಡಿ) ಬರುತ್ತಿದ್ದರೆ, ಅತ್ತ ಇರುವ ಏಕೈಕ ಶುದ್ಧ ಕುಡಿಯುವ ನೀರಿನ ಘಟಕವೂ ಸ್ಥಗಿತಗೊಂಡಿದೆ. ಗ್ರಾಮಸ್ಥರು ಅನಿವಾರ್ಯವಾಗಿ ಗಡಸು ನೀರನ್ನೇ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದಕಾರಣ ಕೂಡಲೇ ಕೆರೆ ನೀರು ಶುದ್ಧೀಕರಣಗೊಳಿಸಿ ಸರಬರಾಜು ಮಾಡಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಗ್ರಾಮದಲ್ಲಿನ ಕೆರೆಯ ನೀರನ್ನು ಮನೆ, ಮನೆಗೆ ಪೂರೈಸಲು ಕ್ರಮ ಜರುಗಿಸಲಾಗಿದೆ. ಕೆರೆಯ ನೀರಿಗೆ ಫಿಲ್ಟರ್‌ ಅಳವಡಿಸುವ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಶುದ್ಧ ಕುಡಿಯುವ ನೀರು ಅನಿವಾರ್ಯವಿದ್ದಲ್ಲಿ ಕಡದಳ್ಳಿ, ಗುಡಿಸಾಗರ ಗ್ರಾಮಕ್ಕೆ ಹೋಗಿ ನೀರು ತರಬಹುದು.

- ಎಚ್.ಎಸ್. ಹೂಗಾರ. ಗುಡಿಸಾಗರ ಪಿಡಿಒ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರ್ಪಕವಾಗಿ ಬಸ್ ಸಂಚಾರಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಹಾವೇರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕುಡಿವ ನೀರಿನ ಸಮಸ್ಯೆ