ತಾಟು ಬಾರಿಸುವ ಮುಖಾಂತರ ಚಳವಳಿ

KannadaprabhaNewsNetwork |  
Published : Dec 22, 2023, 01:30 AM IST
ಅತಿಥಿ ಉಪನ್ಯಾಸಕರ ಮುಷ್ಕ ಇಂದು 2ನೇ ದಿನಕ್ಕೆ ಕಾಲಿಟ್ಟಿದೆ. | Kannada Prabha

ಸಾರಾಂಶ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಸೇವೆಯನ್ನು ಕಾಯಂಗೊಳಿಸಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟ ೨೯ನೇ ದಿನಕ್ಕೆ ಕಾಲಿರಿಸಿದೆ

ಕನ್ನಡಪ್ರಭ ವಾರ್ತೆ ವಿಜಯಪುರ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಸೇವೆಯನ್ನು ಕಾಯಂಗೊಳಿಸಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟ ೨೯ನೇ ದಿನಕ್ಕೆ ಕಾಲಿರಿಸಿದೆ.

ಅತಿಥಿ ಉಪನ್ಯಾಸಕರು ಕಳೆದ ೧೫ ರಿಂದ ೨೦ ವರ್ಷ ಸೇವೆ ಸಲ್ಲಿಸಿಸುತ್ತಿದ್ದು, ತಮ್ಮ ಸೇವೆಯನ್ನು ಕಾಯಂ ಮಾಡಬೇಕು ಎಂದು ಒತ್ತಾಯಿಸಿ ತಾಟು ಬಾರಿಸುವ ಮುಖಾಂತರ ಜಾಗಟೆ ಚಳವಳಿ ಮಾಡಿದರು. ಈ ಹೋರಾಟದಲ್ಲಿ ಡಾ.ಆನಂದ ಕುಲಕರ್ಣಿ, ಸುರೇಶ ಡಬ್ಬಿ, ಡಾ. ಆರ್.ಎಲ್.ಕಡೆಮನಿ, ಡಾ.ಸುರೇಶ ಬಿರಾದಾರ, ಡಾ.ಭಾರತಿ ಹಿರೇಮಠ, ಡಾ.ರೇಣುಕಾ ಹೆಬ್ಬಾಳ, ಡಾ.ಎಸ್.ಐ. ಎಂಭತ್ನಾಳ, ಡಾ. ಆರ್.ಬಿ. ನಾಗರಡ್ಡಿ, ಡಾ.ಡಿ.ಬಿ.ಕುಲಕರ್ಣಿ, ಡಾ.ಆರ್.ಕೆ. ತೇಲಿ, ಡಾ. ಖುದ್ದುಸ್ ಪಟೇಲ, ಡಾ. ವೀಣಾ ಕಡಕೋಳ, ಡಾ.ಶ್ರೀದೇವಿ ಜತ್ತಿ, ಡಾ. ವಿಜಯಲಕ್ಷ್ಮಿ, ಶ್ರೀಶೈಲ ಹೆಬ್ಬಿ, ಗೋಪಾಲ ಚಕ್ರಸಾಲಿ, ವಿ.ಸಿ. ಮಾಳಜಿ, ಬಿ.ಎಂ. ಪಾಟೀಲ, ಮಹೇಶ ಕಲ್ಲೂರ, ವಿ.ವಿ. ಕಲ್ಮೇಶ್ವರ, ಭೀಮಾಶಮಕರ ಹಡಪದ, ಶಿವಾನಂದ ಸಿಂಹಾಸನಮಠ, ವಿಜಯಕುಮಾರ ಜಾಧವ, ಎಸ್.ಎಂ. ಹಡಪದ, ರೂಪಾ ಹೂಗಾರ, ಲೀಲಾ ವಿ.ಟಿ. ಎಸ್.ಎ. ಪಾಟೀಲ, ರೂಪಾ ಕಮದಾಳ, ಐಶ್ವರ್ಯ ಪಾನಶೆಟ್ಟಿ, ಸುರೇಖಾ ಹದನೂರ, ಭಾರತಿ ಹೊನವಾಡ, ಭಾರತಿ ಇನಾಮದಾರ, ಶ್ರೀಧರ ಇರಸೂರ, ಗೀತಾ ಬೆಳ್ಳುಂಡಗಿ, ಮಂಜುಳಾ ಭಾವಿಕಟ್ಟಿ, ಸರಿತಾ ಹಿಪ್ಪರಗಿ, ಎಸ್.ಬಿ. ಬಿರಾದಾರ, ರಮೇಶ ಕಡೇಮನಿ, ಡಾ. ವಿಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಶಕರು ತಮ್ಮ ಸೇವೆಯನ್ನು ಕಾಯಂಗೊಳಿಸಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ಹೋರಾಟದಲ್ಲಿ ಒಕ್ಕಟ್ಟು ಇರಲಿ ಒಕ್ಕಟ್ಟಿನಿಂದ ಹೋರಾಡಿದರೆ ಯಶಸ್ಸು ಖಂಡಿತಾ ಸಿಗುತ್ತದೆ ಎಂದು ಹೇಳಿದರು.

ಡಿ.22ರಂದು ಅತಿಥಿ ಉಪನ್ಯಾಸಕರ ಹೋರಾಟ ಸ್ಥಳಕ್ಕೆ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ಭೇಟಿ ನೀಡಲಿದ್ದಾರೆ. ಎಲ್ಲ ಅತಿಥಿ ಉಪನ್ಯಾಸಕರು ಭಾಗವಹಿಸಬೇಕೆಂದು ಜಿಲ್ಲಾ ಅಧ್ಯಕ್ಷ ಸುರೇಶ ಡಬ್ಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ