ಬಸ್‌ ನಿಲ್ದಾಣ ಉದ್ಘಾಟಿಸಿದ ಸಂಸದ ಡಾ.ಸುಧಾಕರ್‌

KannadaprabhaNewsNetwork |  
Published : Apr 09, 2026, 01:30 AM IST
08 | Kannada Prabha

ಸಾರಾಂಶ

ದೇವನಹಳ್ಳಿ: ಪಟ್ಟಣದ ಡಾ.ಶಿವಕುಮಾರ ಸ್ವಾಮೀಜಿ ವೃತ್ತದ ವಿಜಯಪುರ ರಸ್ತೆಯಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣವನ್ನು ಸಂಸದ ಡಾ. ಕೆ.ಸುಧಾಕರ್ ಉದ್ಘಾಟಿಸಿದರು

ದೇವನಹಳ್ಳಿ: ಪಟ್ಟಣದ ಡಾ.ಶಿವಕುಮಾರ ಸ್ವಾಮೀಜಿ ವೃತ್ತದ ವಿಜಯಪುರ ರಸ್ತೆಯಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣವನ್ನು ಸಂಸದ ಡಾ. ಕೆ.ಸುಧಾಕರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಂಸದ ಡಾ. ಸುಧಾಕರ್‌, ಸಂಸದರ ಕ್ಷೇತ್ರಾಭಿವೃದ್ದಿ ನಿಧಿ ಎಂದು ವಾರ್ಷಿಕ ೫ ಕೋಟಿ ನೀಡುತ್ತಾರೆ ಇದನ್ನು ಶಾಲಾ ಕೊಠಡಿ, ಬಸ್‌ ನಿಲ್ದಾಣ ಸೇರಿದಂತೆ ಅಗತ್ಯ ಕಾಮಗಾರಿಗಳಿಗೆ ಬಳಸಲಾಗಿದೆ. ಅದರಂತೆ ಇಂದಿಲ್ಲಿ ೧೦ ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಪ್ರಯಾಣಿಕರ ತಂಗುದಾಣ ಉದ್ಘಾಟಿಸಲಾಗಿದೆ ಎಂದರು. ಅದೆ ರೀತಿ ಈ ಭಾಗದಲ್ಲಿ ಸರ್ಬಬನ್ ರೈಲು, ಮೆಟ್ರೋ ಬೆಂಗಳೂರು, ಹೈದರಬಾದ್ ದಶಪಥ ರಸ್ತೆ, ಎಕ್ಸ್‌ಪ್ರೆಸ್ ಹೈವೇ ಇವೆಲ್ಲವನ್ನು ಮೊದಲ ವರ್ಷದಲ್ಲಿಯೇ ಮಂಜೂರಾತಿ ಮಾಡಿಸಿದ್ದೇನೆ. ಈಗಾಗಲೇ ಡಿಪಿಆರ್ ಸಿದ್ದವಾಗಿದೆ. ಕೆಲವೇ ತಿಂಗಳುಗಳಲ್ಲಿ ಕಾಮಗಾರಿಗಳು ಆರಂಭವಾಗಲಿವೆ ಎಂದು ಹೇಳಿದರು.

ಈ ವೇಳೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗವೇಣಿ, ತಾಲೂಕು ಅಧ್ಯಕ್ಷ ಎನ್.ಎಲ್.ಅಂಬರೀಶಗೌಡ, ಉಪಾಧ್ಯಕ್ಷ ವಿ.ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣಿ.ಕೆ, ಕಾರ್ಯದರ್ಶಿ ಎಂ.ತ್ಯಾಗರಾಜು, ಎಚ್.ಎಂ.ರವಿಕುಮಾರ್ ಕಾರ್ಯದರ್ಶಿ ಸುಬ್ರಹ್ಮಣಿ, ದೇ.ಸೂ ನಾಗರಾಜ್, ಬಿ. ಚೇತನಗೌಡ, ಸುಬ್ಬೇಗೌಡ, ಬೂದಿಗೆರೆ ಪ್ರಭು, ಆರ್.ಕೆ.ನಂಜೇಗೌಡ, ಸುಬ್ಬೇಗೌಡ, ಬಿ.ಆರ್.ನವೀನ್, ಯುವ ಘಟಕದ ತಾಲೂಕು ಉಪಾಧ್ಯಕ್ಷ ಡಿ.ಎನ್.ರೂಪೇಶ, ಮಧು, ರವಿ ಮತ್ತಿತರರಿದ್ದರು.

೦೮ ದೇವನಹಳ್ಳಿ ಚಿತ್ರಸುದ್ದಿ: ೦೨

ದೇವನಹಳ್ಳಿಯ ಡಾ. ಶಿವಕುಮಾರ ಸ್ವಾಮೀಜಿ ವೃತ್ತದ ವಿಜಯಪುರ ರಸ್ತೆಯಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣವನ್ನು ಸಂಸದ ಡಾ.ಕೆ.ಸುಧಾಕರ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಭಾಗದ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವುದು ಅವಶ್ಯ
ಕನ್ನಡ ತಾಯಿ ಭುವನೇಶ್ವರಿ ರಥಕ್ಕೆ ಚಾಲನೆ: ಭಂಡಾರಿ ಶ್ರೀನಿವಾಸ್