ಮೋದಿ ಗ್ಯಾರಂಟಿ ಕರಪತ್ರ ಹಂಚಿದ ಸಂಸದ ಖೂಬಾ

KannadaprabhaNewsNetwork |  
Published : Mar 02, 2024, 01:48 AM IST
ಕೇಂದ್ರ ಸಚಿವ ಭಗವಂತ ಖುಬಾ ಕೇಂದ್ರ ಸರಕಾರದ ಕರಪತ್ರವನ್ನು ಹಂಚಿದರು. | Kannada Prabha

ಸಾರಾಂಶ

ದೇಶದಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದಿಂದ ದೇಶದ ೮೧ಕೋಟಿ ಜನರು ವಿವಿಧ ಯೊಜನೆಗಳಡಿ ಫಲಾನುಭವಿಗಳಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಫಲಾನುಭವಿಗಳ ಸಂಪರ್ಕ ಅಭಿಯಾನದಡಿ, ಕೇಂದ್ರ ಸಚಿವರು ಹಾಗೂ ಸಂಸದರಾದ ಭಗವಂತ ಖೂಬಾರವರು ಹಾಗೂ ಪಕ್ಷದ ಪ್ರಮುಖರು ಸೇರಿ, ಬೀದರ ಲೋಕಸಭೆ ಮತಕ್ಷೇತ್ರದ ಶಿವನಗರ ದಕ್ಷೀಣದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಸಹಾಯ ಪಡೆದ ಫಲಾನುಭವಿಗಳ ಮನೆ ಮನೆಗೆ ತೆರಳಿ, ಫಲಾನುಭವಿಗಳಿಗೆ ಕರಪತ್ರಗಳು ನೀಡಿ, ಮೋದಿ ಗ್ಯಾರಂಟಿಯ ಸ್ಟೀಕರ್ ಅಂಟಿಸಿದರು.

ದೇಶದಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದಿಂದ ದೇಶದ ೮೧ಕೋಟಿ ಜನರು ವಿವಿಧ ಯೊಜನೆಗಳಡಿ ಫಲಾನುಭವಿಗಳಾಗಿದ್ದಾರೆ, ಅದರಂತೆ ಬೀದರ ಲೋಕಸಭಾ ಕ್ಷೇತ್ರದಲ್ಲಿ ಸುಮಾರು ೧೫ ಲಕ್ಷ ಫಲಾನುಭವಿಗಳಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ಫಲಾನುಭವಿಗಳಿಗೆ ಭೇಟಿ ಮಾಡಿ, ಕೇಂದ್ರದ ಯೋಜನೆಯಡಿ ಲಾಭ ಪಡೆದಿರುವ ಬಗ್ಗೆ ಖಾತರಿ ಪಡಿಸಿಕೊಂಡು, ಪಕ್ಷದ ಸರಳ್ ಅಪ್ಲಿಕೇಶನ್ ಅಲ್ಲಿ ಅಪ್ಲೋಡ್ ಮಾಡಿದರು.

ನಂತರ ಮಾತನಾಡಿದ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಸಮರ್ಥ ನಾಯಕತ್ವದಡಿ, ದೇಶವು ಉನ್ನತ್ತಿಯತ್ತ ಸಾಗುತ್ತಿದೆ, ಅದರಂತೆ ಬೀದರ ಲೋಕಸಭಾ ಕ್ಷೇತ್ರದಲ್ಲಿಯೂ ಯಶಸ್ವಿಯಾಗಿ ಎಲ್ಲಾ ಯೋಜನೆಗಳು ಅನುಷ್ಠಾನಗೊಂಡಿವೆ ಎಂದರು.

ಏಪ್ರೀಲ/ಮೇ-೨೦೨೪ರಲ್ಲಿ ಲೋಕಸಭಾ ಚುನಾವಣೆಯಲ್ಲಿ ನನಗೆ ಮೂರನೆ ಬಾರಿಗೆ ಆಶೀರ್ವಾದಿಸಿ, ದೇಶಕ್ಕೆ ಮತ್ತೊಮ್ಮೆ ಪ್ರಧಾನಿಯನ್ನಾಗಿ ಸನ್ಮಾನ್ಯ ನರೇಂದ್ರ ಮೋದಿಜಿಯವರಿಗೆ ಆಶಿರ್ವಾದ ಮಾಡಬೇಕೆಂದು ಜನರಲ್ಲಿ ವಿನಂತಿಸಿಕೊಂಡರು.

ರಾಜ್ಯ ಸಾಮಾಜಿಕ ಜಾಲತಾಣದ ಸಹ ಸಂಚಾಲಕರಾದ ಪ್ರದೀಪ ಕಾಡಾದಿ, ಜಿಲ್ಲಾ ಸಂಚಾಲಕರಾದ ದಿನೇಶ ಮೂಲಗೆ ಹಾಗೂ ಪ್ರಮುಖರಾದ ನೀತಿನ ಕರ್ಪೂರ, ಗೋಪಾಲ, ಸೂರ್ಯಕಾಂತ ರಾಮಶೇಟ್ಟಿ, ಶರಣಪ್ಪ ಪಂಚಾಕ್ಷರಿ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾಸ್‌ ಸಿಗದಿರುವುದಕ್ಕೆ ಸರ್ಕಾರದವಿರುದ್ಧ ಆಟೋ ಚಾಲಕರ ಆಕ್ರೋಶ
ಏಕ ಬಳಕೆ ಪ್ಲಾಸ್ಟಿಕ್ ಬಳಸಿದರೆ 5 ಲಕ್ಷ ದಂಡ : ಜಿಬಿಎ ಎಚ್ಚರಿಕೆ