ತೀರ್ಥರಾಮೇಶ್ವರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಎಂ.ಪಿ.ರೇಣುಕಾಚಾರ್ಯ

KannadaprabhaNewsNetwork |  
Published : Mar 06, 2024, 02:26 AM IST
ಹೊನ್ನಾಳಿ ಫೋಟೋ 3ಎಚ್.ಎಲ್.ಐ2 ತೀರ್ಥರಾಮೇಶ್ವರದಲ್ಲಿ ಅಭಿಮಾನಿಗಳು ಆಚರಿಸಿದ ತಮ್ಮ ಹುಟ್ಟು ಹಬ್ಬ ಆಚರಣೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಅಭಿಮಾನಿಗಳಿಂದ ಪುಪ್ಪಾಹಾರಗಳನ್ನು ಸ್ವೀಕರಿಸಿ ಅಭಿನಂದಿಸಿದರು , | Kannada Prabha

ಸಾರಾಂಶ

ಪ್ರಸ್ತುತ ತನ್ನ ಹುಟ್ಟುಹಬ್ಬ ಆಚರಿಸುವುದು ಬೇಡ ಕ್ಷೇತ್ರದ ಜನತೆ ಬರಗಾಲದ ಕಷ್ಟದಲ್ಲಿದ್ದಾರೆಂದು ಆಚರಣೆ ನಿರಾಕರಿಸಿದ್ದರು. ಆದರೂ ಅವರ ಅಭಿಮಾನಿಗಳು ಸರಳವಾಗಿ ಆಚರಿಸಲೇಬೇಕು ಎಂದು ತೀರ್ಮಾನಿಸಿ ತೀರ್ಥರಾಮೇಶ್ವರದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸರಳವಾಗಿ ಆಚರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ರೇಣುಕಾಚಾರ್ಯರ 61ನೇ ಹುಟ್ಟುಹಬ್ಬ ಪ್ರಯುಕ್ತ ತೀರ್ಥರಾಮೇಶ್ವರ ಕ್ಷೇತ್ರಕ್ಕೆ ಆಗಮಿಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಪತ್ನಿ ಸುಮಾ ರೇಣುಕಾಚಾರ್ಯ ಹಾಗೂ ಕುಟುಂಬದವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ನ್ಯಾಮತಿ ಮತ್ತು ಹೊನ್ನಾಳಿ ಅವಳಿ ತಾಲೂಕಿನ ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಕ್ ಕತ್ತರಿಸಿ, ಪಕ್ಷದ ಹಿರಿಯ ಮುಖಂಡರಿಗೆ ಕೇಕ್ ತಿನ್ನಿಸಿ ಹುಟ್ಟುಹಬ್ಬ ಆಚರಿಸಿದರು. ವೇದಿಕೆ ಕಾರ್ಯಕ್ರಮವನ್ನು ನಿವೃತ್ತ ಸೈನಿಕ ಯರಗನಾಳ್ ನ ಹನುಮಗೌಡ ಗಿಡಕ್ಕೆ ನೀರೆರೆದು ಚಾಲನೆಗೊಳಿಸಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು, ಜನರ ಬಗೆಗಿನ ಪ್ರೀತಿ, ವಿಶ್ವಾಸಗಳ ಕಂಡು ನಾನು ಅವರ ಅಭಿಮಾನಿಯಾಗಿದ್ದೇನೆ. ಜನನಾಯಕನಿಗಿರುವ ಗುಣ ವಿಶೇಷಗಳ ಅವರಲ್ಲಿ ಕಂಡಿದ್ದೇನೆ, ಅವರ ಸೇವೆ ಇನ್ನೂ ಕೂಡ ಈ ಕ್ಷೇತ್ರಕ್ಕೆ, ನಾಡಿಗೆ ಸಿಗುವಂತಾಗಲಿ ಎಂದು ಹಾರೈಸಿದರು.

ಬಗರ್ ಹುಕುಂ ಸಮಿತಿ ಮಾಜಿ ಅಧ್ಯಕ್ಷ ಮಾದೇನಹಳ್ಳಿ ಕೆ.ಇ.ನಾಗರಾಜ್ ಮಾತನಾಡಿ, ಪ್ರಸ್ತುತ ತನ್ನ ಹುಟ್ಟುಹಬ್ಬ ಆಚರಿಸುವುದು ಬೇಡ ಕ್ಷೇತ್ರದ ಜನತೆ ಬರಗಾಲದ ಕಷ್ಟದಲ್ಲಿದ್ದಾರೆಂದು ಆಚರಣೆ ನಿರಾಕರಿಸಿದ್ದರು. ಆದರೂ ಅವರ ಅಭಿಮಾನಿಗಳು ಸರಳವಾಗಿ ಆಚರಿಸಲೇಬೇಕು ಎಂದು ತೀರ್ಮಾನಿಸಿ ತೀರ್ಥರಾಮೇಶ್ವರದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.

ಬಿಜೆಪಿ ಮುಖಂಡ ನೆಲಹೊನ್ನೆ ಮಂಜುನಾಥ ಮಾತನಾಡಿದರು. ಸಾವಿರಾರು ಅಭಿಮಾನಿಗಳು ರೇಣುಕಾಚಾರ್ಯ ಹುಟ್ಟುಹಬ್ಬಕ್ಕೆ ಶುಭಾಶಯಗಳ ಕೋರಿದರು.

ಕಾರ್ಯಕ್ರಮದಲ್ಲಿ ಸುಮಾ ರೇಣುಕಾಚಾರ್ಯ, ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಕೆ.ಪಿ.ಕುಬೇರಪ್ಪ, ಮಾಜಿ ಅಧ್ಯಕ್ಷ ಡಿ.ಜಿ.ರಾಜಪ್ಪ, ದಿಡಗೂರು ಪಾಲಾಕ್ಷಪ್ಪ, ಧರ್ಮಪ್ಪ, ಕೆ.ರಂಗಪ್ಪ, ತರಗನಹಳ್ಳಿ ರಮೇಶ್ ಗೌಡ, ಬೀರಪ್ಪ, ನಾಗರಾಜ್ ಅರಕೆರೆ, ಶಿವಾನಂದ, ಸುರೇಂದ್ರ ನಾಯ್ಕ, ಸೋಮ ಸುಂದರ ಅರಸ್, ನ್ಯಾಮತಿ ಈರಣ್ಣ ಸೇರಿ ನ್ಯಾಮತಿ, ಹೊನ್ನಾಳಿ ತಾಲೂಕಿನ ಬಿಜೆಪಿ ಮುಖಂಡರಿದ್ದರು.

-----

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ