ಸಂಸದ ಶ್ರೇಯಸ್‌ರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್‌ ಸದೃಢಗೊಳಿಸಲು ಸಾಧ್ಯ

KannadaprabhaNewsNetwork |  
Published : Nov 17, 2024, 01:21 AM IST
16ಎಚ್ಎಸ್ಎನ್4 : ಸಂಸದರಾದ ಶ್ರೇಯಸ್ ಪಟೇಲ್‌ರವರ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಶಾಲುಹೊದಿಸಿ ಸನ್ಮಾನಸಿಲಾಯಿತು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢಗೊಳಿಸಲು ಶ್ರೇಯಸ್ ಪಟೇಲ್ ಒಂದು ಶಕ್ತಿಯಾಗಿದ್ದಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಸಿ. ಜಿ. ರವಿ ಹಾಗೂ ರಕ್ಷಾ ಕಮಿಟಿ ಸದಸ್ಯ ಶಂಕರ್‌ ಬರಗೂರು ತಿಳಿಸಿದರು. ಶ್ರೇಯಸ್‌ ಅವರು ಸರಳ ಹಾಗೂ ಸುಸಂಸ್ಕೃತ ಯುವಕರು. ಜಿಲ್ಲೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಬಡವರು, ದೀನದಲಿತರು, ರೈತರ ಪರವಾಗಿ ಕೆಲಸ ಮಾಡುತ್ತಿದ್ದು, ಇಂತಹ ಯುವ ನಾಯಕರನ್ನು ಪಡೆದ ನಾವೇ ಪುಣ್ಯವಂತರು ಎಂದು ಹೊಗಳಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢಗೊಳಿಸಲು ಶ್ರೇಯಸ್ ಪಟೇಲ್ ಒಂದು ಶಕ್ತಿಯಾಗಿದ್ದಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಸಿ. ಜಿ. ರವಿ ಹಾಗೂ ರಕ್ಷಾ ಕಮಿಟಿ ಸದಸ್ಯ ಶಂಕರ್‌ ಬರಗೂರು ತಿಳಿಸಿದರು.

ಅವರು ಸಂಸದರಾದ ಶ್ರೇಯಸ್ ಪಟೇಲ್‌ರವರ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಶಾಲು ಹೊದಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಪ್ರಾಮಾಣಿಕವಾಗಿ ನೀಡುತ್ತಿದ್ದು, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಪಕ್ಷ ಸಂಘಟನೆಗೆ ಹೆಚ್ಚು ಒತ್ತುನೀಡಲು ಕಾರ್ಯಕರ್ತರು ಪಕ್ಷ ಸಂಘಟನೆಗೆ ಮುಂದಾಗಬೇಕು. ಶ್ರೇಯಸ್‌ ಅವರು ಸರಳ ಹಾಗೂ ಸುಸಂಸ್ಕೃತ ಯುವಕರು. ಜಿಲ್ಲೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಬಡವರು, ದೀನದಲಿತರು, ರೈತರ ಪರವಾಗಿ ಕೆಲಸ ಮಾಡುತ್ತಿದ್ದು, ಇಂತಹ ಯುವ ನಾಯಕರನ್ನು ಪಡೆದ ನಾವೇ ಪುಣ್ಯವಂತರು. ಜಿಲ್ಲೆಯ ನೀರಾವರಿ ಯೋಜನೆ, ರಸ್ತೆ, ಕೆರೆಕಟ್ಟೆ ಅಭಿವೃದ್ಧಿ, ಆಸ್ಪತ್ರೆಗಳು ಜನರ ಪರವಾಗಿ ಕೆಲಸ ಮಾಡಿದ ಅಂದಿನ ಪುಟ್ಟಸ್ವಾಮಿಗೌಡರು ಅವರ ಅಭಿವೃದ್ಧಿಯ ದೃಷ್ಠಿಯೇ ಈ ಬಾರಿ ಸಂಸದರು ಗೆಲ್ಲಲು ಕಾರಣವಾಯಿತು. ಮುಂದಿನ ದಿನಗಳಲ್ಲಿ ಸಂಸದರು ಹೆಚ್ಚು ಕೆಲಸ ಮಾಡಲು ದೇವರು ಶಕ್ತಿ ಕರುಣಿಸಲಿ ಎಂದರು.ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹೊನ್ನೇಗೌಡ, ಮೋಹನ್‌ ಬರಗೂರುಹ್ಯಾಂಡ್, ಆಲಗೋಡನಹಳ್ಳಿ ಜಗದೀಶ್, ಬೀರೂರು ಮಧು ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''