ಆಲೂರಿನಲ್ಲಿ ಸಂಸದ ಶ್ರೇಯಸ್‌ ಪಟೇಲ್‌ ಹುಟ್ಟುಹಬ್ಬ

KannadaprabhaNewsNetwork |  
Published : Nov 16, 2024, 12:39 AM IST
15ಎಚ್ಎಸ್ಎನ್7 : ಕನ್ನಡಪ್ರಭ ವಾರ್ತೆ ಆಲೂರು- ಸಂಸದ ಶ್ರೇಯಸ್ ಪಟೇಲ್ ರವರ 33ನೇ ಹುಟ್ಟುಹಬ್ಬವನ್ನು ಪಟ್ಟರದಲ್ಲಿ ಸಿಹಿ ಹಂಚುಮೂಲಕ ಆಚರಿಸಲಾಯಿತು. ಶುಕ್ರವಾರ ಬೆಳಿಗ್ಗೆ ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ನಂತರ ನಾಗರಿಕರಿಗೆ ಸಿಹಿ ಹಚ್ಚುವ ಮೂಲಕ ಶ್ರೇಯಸ್ ಪಟೇಲ್ ರವರ 33ನೇ ಜನ್ಮ ದಿನವನ್ನು ಆಚರಿಸಿದರು. ನಂತರ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮೂರ್ತಿ ಯುವ ನಾಯಕ ಶ್ರೇಯಸ್ ಪಟೇಲ್ ವರು ಲೋಕಸಭಾ ಸದಸ್ಯರಾಗಿ ಉತ್ತಮ ಕೆಲಸ ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಗಳಿಸಲೆಂದು ನಾವು ಪ್ರಾರ್ಥನೆ ಮಾಡುತ್ತೇವೆ ಎಂದು ತಿಳಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತ ಕೃಷ್ಣ ಮಾತನಾಡಿ ತಾಲೂಕಿನ ಸಮಸ್ತ ಜನತೆಯ ಪರವಾಗಿ ನಮ್ಮ ಯುವ ನಾಯಕ ಶ್ರೇಯಸ್ ಪಟೇಲ್ ರವರ 33ನೇ ಹುಟ್ಟುಹಬ್ಬದ ಆಚರಣೆ ಮಾಡುತ್ತಿದ್ದು, ಭಗವಂತ ಅವರಿಗೆ ಆಯುರಾರೋಗ್ಯ ಯಶಸ್ಸನ್ನು ಕರುಣಿಸಲಿ, ಅವರು ಜಿಲ್ಲೆಯ ಜನತೆಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಹಗಲಿರುಳು ಶ್ರಮಿಸಲಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡಲು ದೇವರು ಅವರಿಗೆ ಹೆಚ್ಚಿನ ಶಕ್ತಿ ನೀಡಲಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ರಂಗೇಗೌಡ,ಬಿಕೆ ಲಿಂಗರಾಜ್, ಬಿ ಎಚ್ ಧರ್ಮಪ್ಪ, ಖಾಲಿದ್ ಪಾಷಾ, ಶಿವಣ್ಣ, ಸರ್ವರ್, ಹರೀಶ, ಸಂದೇಶ್, ರಾಜಶೇಖರ್, ನಾರಾಯಣ ಮುಂತಾದವರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಸಂಸದ ಶ್ರೇಯಸ್ ಪಟೇಲ್ ರವರ 33ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಯುವ ನಾಯಕ ಶ್ರೇಯಸ್ ಪಟೇಲ್ ಅವರು ಲೋಕಸಭಾ ಸದಸ್ಯರಾಗಿ ಉತ್ತಮ ಕೆಲಸ ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಗಳಿಸಲೆಂದು ನಾವು ಪ್ರಾರ್ಥನೆ ಮಾಡುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮೂರ್ತಿ ಹೇಳಿದರು. ಶ್ರೇಯಸ್ ಪಟೇಲ್ ರವರ 33ನೇ ವರ್ಷದ ಹುಟ್ಟುಹಬ್ಬವನ್ನು ಪಟ್ಟಣದಲ್ಲಿ ಸಿಹಿ ಹಂಚುವ ಮೂಲಕ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಆಲೂರು

ಸಂಸದ ಶ್ರೇಯಸ್ ಪಟೇಲ್ ರವರ 33ನೇ ವರ್ಷದ ಹುಟ್ಟುಹಬ್ಬವನ್ನು ಪಟ್ಟಣದಲ್ಲಿ ಸಿಹಿ ಹಂಚುವ ಮೂಲಕ ಆಚರಿಸಲಾಯಿತು.

ಶುಕ್ರವಾರ ಬೆಳಿಗ್ಗೆ ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ನಂತರ ನಾಗರಿಕರಿಗೆ ಸಿಹಿ ಹಚ್ಚುವ ಮೂಲಕ ಶ್ರೇಯಸ್ ಪಟೇಲ್ ರವರ 33ನೇ ಜನ್ಮ ದಿನವನ್ನು ಆಚರಿಸಿದರು. ನಂತರ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮೂರ್ತಿ, ಯುವ ನಾಯಕ ಶ್ರೇಯಸ್ ಪಟೇಲ್ ಅವರು ಲೋಕಸಭಾ ಸದಸ್ಯರಾಗಿ ಉತ್ತಮ ಕೆಲಸ ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಗಳಿಸಲೆಂದು ನಾವು ಪ್ರಾರ್ಥನೆ ಮಾಡುತ್ತೇವೆ ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತ ಕೃಷ್ಣ ಮಾತನಾಡಿ, ತಾಲೂಕಿನ ಸಮಸ್ತ ಜನತೆಯ ಪರವಾಗಿ ನಮ್ಮ ಯುವ ನಾಯಕ ಶ್ರೇಯಸ್ ಪಟೇಲ್ ರವರ 33ನೇ ಹುಟ್ಟುಹಬ್ಬದ ಆಚರಣೆ ಮಾಡುತ್ತಿದ್ದು, ಭಗವಂತ ಅವರಿಗೆ ಆಯುರಾರೋಗ್ಯ ಯಶಸ್ಸನ್ನು ಕರುಣಿಸಲಿ, ಅವರು ಜಿಲ್ಲೆಯ ಜನತೆಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಹಗಲಿರುಳು ಶ್ರಮಿಸಲಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡಲು ದೇವರು ಅವರಿಗೆ ಹೆಚ್ಚಿನ ಶಕ್ತಿ ನೀಡಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ರಂಗೇಗೌಡ,ಬಿಕೆ ಲಿಂಗರಾಜ್, ಬಿ ಎಚ್ ಧರ್ಮಪ್ಪ, ಖಾಲಿದ್ ಪಾಷಾ, ಶಿವಣ್ಣ, ಸರ್ವರ್, ಹರೀಶ, ಸಂದೇಶ್, ರಾಜಶೇಖರ್, ನಾರಾಯಣ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ