ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುನಿಲ್ ಬೋಸ್ ಅವರಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಸುನಿಲ್ ಬೋಸ್, ನನ್ನನ್ನು ಗೆಲ್ಲಿಸಿರುವ ಜನರ ಋಣವನ್ನು ತೀರಿಸುವ ಕೆಲಸ ವಾಡುತ್ತೇನೆ ಎಂದರು.ನಮ್ಮ ಕಾರ್ಯಕರ್ತರು ಅವರ ಮನೆಯಲ್ಲಿ ಒಬ್ಬ ಚುನಾವಣೆಗೆ ನಿಂತಿರುವಂತೆ ಕೆಲಸ ಮಾಡಿದ್ದಾರೆ. ಅದರಲ್ಲೂ ಮೈಸೂರು ಭಾಗಕ್ಕೆ ಮಹದೇವಪ್ಪ ಮಗನಾಗಿ ಪರಿಚಯವಾಗಿದ್ದೆ. ಚಾಮರಾಜನಗರ ಭಾಗದಲ್ಲಿ ಅಷ್ಟಾಗಿ ಪರಿಚಯ ಇಲ್ಲದಿದ್ದರೂ. ಆ ಭಾಗದ ಜನತೆ ಗ್ಯಾರಂಟಿ ಯೋಜನೆಗೆ ಮತ ನೀಡಿದ್ದಾರೆ ಎಂದರು.
ವಾಸ್ತವದಲ್ಲಿ ನನಗೆ ಟಿಕೆಟ್ ಸಿಗಲು ಯತೀಂದ್ರ ಕಾರಣರಾಗಿದ್ದು, ಅವರ ಋಣ ಎಂದೆಂದಿಗೂ ಮರೆಯುವುದಿಲ್ಲ.ಅನೇಕರು ಸುನಿಲ್ ಬೋಸ್ ಸೋಲುತ್ತಾರೆ. ಅವರ ತಂದೆಗೆ ಟಿಕೆಟ್ ಕೊಡಿ ಎಂದು ಸಿದ್ದರಾಮಯ್ಯ ಅವರ ಬಳಿ ಹೇಳಿದಾಗಲೂ ಡಾ. ಯತೀಂದ್ರ ಅವರು ಅಷ್ಟು ವರ್ಷದಿಂದ ದುಡಿದಿದ್ದಾರೆ. ಅವರಿಗೆ ಟಿಕೆಟ್ಕೊಡಿ ಎಂದು ಹೇಳಿ ಕೊಡಿಸಿದ್ದಾಗಿ ಸ್ಮರಿಸಿದರು.
ಸಿದ್ಧರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಕೃತಘ್ನತೆ ಸಲ್ಲಿಸುತ್ತೇನೆ. ಈ ಬಾರಿ ಸಚಿವರ ಪುತ್ರ ಎಂಬ ಕಾರಣಕ್ಕೆ ಜನತೆ, ಶಾಸಕರು, ತಮ್ಮದೇ ಚುನಾವಣೆ ಎಂಬಂತೆ ಕೆಲಸ ಮಾಡಿದ್ದರಿಂದ ಜಯಗಳಿಸಿದ್ದೇನೆ. ಜನತೆ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅದನ್ನು ಉಳಿಸಿಕೊಂಡು ಜನತೆ ಸ್ಪಂದಿಸಿದರಷ್ಟೇ ಮುಂದಿನ ಐದು ವರ್ಷದ ಬಳಿಕ ಸುನಿಲ್ ಬೋಸ್ ಉಳಿಯುವುದು ಎಂಬುದು ಗೊತ್ತಿದೆ ಎಂದರು.ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಒಂದು ಸ್ಥಾನದಿಂದ ಒಂಭತ್ತು ಸ್ಥಾನಕ್ಕೆ ಕಾಂಗ್ರೆಸ್ ಹೋಗಿದ್ದು, ಬಿಜೆಪಿ- ಜೆಡಿಎಸ್ಕಡಿಮೆ ಇದ್ದು, ಜನ ನಮ್ಮ ಪರವಾಗಿದ್ದಾರೆ. ಹೀಗಾಗಿ ಕಾರ್ಯಕರ್ತರು ದೃತಿಗೆಡಬೇಕಿಲ್ಲ ಎಂದು ಅವರು ಹೇಳಿದರು.