ಸಾಧನೆ ನಿಮ್ಮ ಜೀವನದ ಗುರಿಯಾಗಿ ಗುರು ಭಕ್ತಿ ಮುಖಾಂತರ ಸಾಧನೆ ಮಾಡಬೇಕುಮಗು ನಮ್ಮ ಮಾತು ವಿನೂತನ ಕಾರ್ಯಕ್ರಮ, ಶಾಲಾ ಶಿಕ್ಷಣ
ಮಗು ನಮ್ಮ ಮಾತು ವಿನೂತನ ಕಾರ್ಯಕ್ರಮ, ಶಾಲಾ ಶಿಕ್ಷಣ, ಮಂಡ್ಯಮಕ್ಕಳು ಶಾಲೆಗೆ ಆಗಮಿಸಿದಾಗ ಕಲಿಯುವ ಹಂಬಲವನ್ನು ಮೈಗೂಡಿಸಿಕೊಂಡು ಶಿಸ್ತು ಬದ್ಧವಾಗಿ ಓದಿನಲ್ಲಿ ತೋಡಗಿದರೆ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ. ಸಾಧನೆ ನಿಮ್ಮ ಜೀವನದ ಗುರಿಯಾಗಿ ಗುರು ಭಕ್ತಿ ಮುಖಾಂತರ ಸಾಧನೆ ಮಾಡಬೇಕು.ಕನ್ನಡಪ್ರಭ ವಾರ್ತೆ ವಲಾಪುರಮಕ್ಕಳು ವ್ಯಾಸಂಗದ ಅವಧಿಯಲ್ಲಿ ಕಲಿಕೆ ಜೊತೆಗೆ ಶ್ರದ್ಧೆ, ಭಕ್ತಿ, ವಿನಯ ಮೈಗೂಡಿಸಿಕೊಂಡಾಗ ಯಶಸ್ಸು ಸಾಧ್ಯ ಎಂದು ಮುಖ್ಯ ಶಿಕ್ಷಕ ಜೈಸ್ವಾಮಿ ತಿಳಿಸಿದರು.
ನಾಗಮಂಗಲ ತಾಲೂಕಿನ ಹರದನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದಿಂದ ನಡೆದ ನಮ್ಮ ಮಗು ನಮ್ಮ ಮಾತು ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ಶಾಲೆಗೆ ಆಗಮಿಸಿದಾಗ ಕಲಿಯುವ ಹಂಬಲವನ್ನು ಮೈಗೂಡಿಸಿಕೊಂಡು ಶಿಸ್ತು ಬದ್ಧವಾಗಿ ಓದಿನಲ್ಲಿ ತೋಡಗಿದರೆ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.ಸಾಧನೆ ನಿಮ್ಮ ಜೀವನದ ಗುರಿಯಾಗಿ ಗುರು ಭಕ್ತಿ ಮುಖಾಂತರ ಸಾಧನೆ ಮಾಡಬೇಕು ಎಂದು ಶಿಕ್ಷಕ ಸುನಿಲ್ ತಿಳಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಕೆ.ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕರಾದ ಗುರುರಾಜ್, ವರದೇವಿ ಮಾತನಾಡಿದರು. ಸಮಾರಂಭದಲ್ಲಿ ಮೈಲಾರಪಟ್ಟಣ ಸಿಆರ್‌ಪಿ ಕೆಂಪೇಗೌಡ, ಪಾಲಾಗ್ರಹಾರ ಸಿಆರ್‌ಪಿ ವೆಂಕಟೇಶ್, ಶಾಲಾ ಮುಖ್ಯ ಶಿಕ್ಷಕ ಚಿಕ್ಕ ಬೋರಯ್ಯ ಹಾಗೂ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.
ಯೋಗಾಭ್ಯಾಸದಿಂದ ಮಾನಸಿಕ ಒತ್ತಡದಿಂದ ಮುಕ್ತ: ಲಕ್ಷ್ಮಣ್ ಜಿಕನ್ನಡಪ್ರಭ ವಾರ್ತೆ ಮದ್ದೂರುಮನುಷ್ಯ ದಿನನಿತ್ಯ ಯೋಗಾಭ್ಯಾಸದಲ್ಲಿ ತೊಡಗುವುದರಿಂದ ಮಾನಸಿಕ ಒತ್ತಡದಿಂದ ಮುಕ್ತರಾಗಲು ಸಾಧ್ಯ ಎಂದು ನಾಗಮಂಗಲದ ಸ್ವಾಸ್ಥ್ಯ ಕೇಂದ್ರದ ಯೋಗ ಗುರು ಲಕ್ಷ್ಮಣ್ ಜಿ ಹೇಳಿದರು.
ಪಟ್ಟಣದ ಕೋಟೆ ಬೀದಿ ಶ್ರೀರಾಘವೇಂದ್ರ ಮಠದ ಸಭಾಂಗಣದಲ್ಲಿ ಮದ್ದೂರು ರೋಟರಿ ಸಂಸ್ಥೆ, ಭಾರತ್ ವಿಕಾಸ್ ಪರಿಷತ್, ಶಂಕರ್ ಸಭಾ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ 10 ದಿನಗಳ ಯೋಗ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಮನುಷ್ಯ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾನೆ. ಇದರಿಂದ ಆರೋಗ್ಯದಲ್ಲಿ ಏರುಪೇರಾಗಿ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾನೆ. ಮಾನಸಿಕ ಒತ್ತಡದಿಂದ ಮುಕ್ತರಾಗಲು ದಿನನಿತ್ಯ ಯೋಗಾಭ್ಯಾಸದಲ್ಲಿ ತೊಡಗುವ ಜೊತೆಗೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.ನೈಸರ್ಗಿಕವಾಗಿ ಸಿಗುವ ವಸ್ತುಗಳು ಮತ್ತು ಮನೆ ಮದ್ದುಗಳ ಹಾಗೂ ಆಹಾರ ಪದ್ಧತಿ ಬದಲಾವಣೆಯಿಂದ ಸರ್ವರೋಗಗಳನ್ನು ನಿವಾರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಚನ್ನಂಕೆಗೌಡ, ಮಾಜಿ ಅಧ್ಯಕ್ಷ ಶಶಿಗೌಡ, ಭಾರತ್ ವಿಕಾಸ್ ಪರಿಷತನ ಶಾಮಿಯಾನ ಗುರುಸ್ವಾಮಿ ಮತ್ತು ಶಂಕರ್ ಸಭಾದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.