ಎಂ.ಎಸ್.ಕುಮಾರ್ ಆಯ್ಕೆ

KannadaprabhaNewsNetwork |  
Published : Mar 03, 2024, 01:31 AM IST
ಎಂ.ಎಸ್.ಕುಮಾರ್ | Kannada Prabha

ಸಾರಾಂಶ

ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ತಾಲೂಕು ಅಧ್ಯಕ್ಷರಾಗಿ ಎಂ.ಎಸ್.ಕುಮಾರ್ ಆಯ್ಕೆಗೊಂಡಿದ್ದಾರೆ.

ಶನಿವಾರಸಂತೆ: ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ಶನಿವಾರಸಂತೆ ಹೋಬಳಿಯ ಚೌಡೇನಹಳ್ಳಿ ಗ್ರಾಮದ ಎಂ.ಎಸ್.ಕುಮಾರ್ ಆಯ್ಕೆಗೊಂಡಿದ್ದಾರೆ. ಶೋಷಿತ ಸಮುದಾಯಗಳ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಟಿ.ಸುರೇಶ್ ಕಂಠಿ ಅವರು ಕುಮಾರ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

--------------------------

ಸುಂಟಿಕೊಪ್ಪ: ಇಂದು ಸಾಮೂಹಿಕ ವಿವಾಹ

ಮಡಿಕೇರಿ: ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ ಆಶ್ರಯದಲ್ಲಿ ಭಾನುವಾರ ಸುಂಟಿಕೊಪ್ಪದ ಎಸ್ ಎಸ್ ಇಂಟರ್ ನ್ಯಾಷನಲ್ ಕನ್ವೆನ್ಷನ್ ಹಾಲ್ ನಲ್ಲಿ 10 ಜೋಡಿ ಮುಸ್ಲಿಂ ಬಡ ಕನ್ಯೆಯರ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ.ಸಂಸ್ಥೆಯ ಮಹಾಪೋಷಕ, ಮಾಜಿ ಶಾಸಕ ಕೆಎಂ ಇಬ್ರಾಹಿಂ ಮಾಸ್ಟರ್ ಅಧ್ಯಕ್ಷತೆಯಲ್ಲಿ ಪೂರ್ವಾಹ್ನ 11ಗಂಟೆಗೆ ನಡೆಯಲಿರುವ ಸಮಾರಂಭವನ್ನು ಸೈಯದ್ ಕೆ .ಎಸ್. ಮುಕ್ತಾರ್ ತಂಙಳ್ ಕುಂಬೋಲ್ ಅವರು ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಉಪ ಖಾಝಿ ಎಂ. ಎಂ. ಅಬ್ದುಲ್ಲ ಫೈಝಿ, ಸುಂಟಿಕೊಪ್ಪದ ಸುನ್ನಿ ಮುಸ್ಲಿಂ ಜಮಾಅತ್ ನ ಮುದರ್ರಿಸ್ ಉಸ್ಮಾನ್ ಫೈಝಿ, ಪೆರುಂಬಾಡಿಯ ಸಂಸುಲ್ ಉಲಮಾ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಬಶೀರ್ ಹಾಜಿ, ಕುಶಾಲನಗರದ ದಾರುಲ್ ಉಲೂಂ ಮದರಸ ಸಂಸ್ಥೆಯ ಪ್ರಾಂಶುಪಾಲ ತಮ್ಲೀಕ್ ದಾರಿಮಿ, ಸುಂಟಿಕೊಪ್ಪದ ಎಸ್ ಎಸ್ ಹಾಲ್ ಮಾಲೀಕ ಎಂ.ಎಂ..ಸಾಹಿರ್, ಗದ್ದೆ ಹಳ್ಳ ಮಸೀದಿಯ ಧರ್ಮಗುರು ಉಸಾಮಾ ಸಖಾಫಿ, ಕೊಡಗರಹಳ್ಳಿಯ ಬಾಪು ಹಾಜಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಅಲ್ ಅಮೀನ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ