ಭಾರತದ ಟಾಪ್‌ ನೂರು ಎಂಎಸ್‌ಎಂಇಗಳಲ್ಲಿ ಲೆಕ್ಸಾ ಲೈಟಿಂಗ್‌ ಟೆಕ್ನೋಲಾಜಿಸ್‌ಗೆ ಸ್ಥಾನ

KannadaprabhaNewsNetwork |  
Published : Aug 12, 2026, 03:15 AM IST
ಲೆಕ್ಸಾ ಲೈಟಿಂಗ್‌ ಟೆಕ್ನೋಲಾಜಿಸ್‌ ಸಂಸ್ಥೆಗೆ ಪ್ರತಿಷ್ಠಿತ ರಾಷ್ಟ್ರೀಯ ಮಾನ್ಯತೆ ನೀಡಿ ಗೌರವಿಸಲಾಯಿತು | Kannada Prabha

ಸಾರಾಂಶ

ಕರ್ನಾಟಕದ ಗ್ರಾಮೀಣ ಪ್ರದೇಶವಾದ ನಿಡ್ಡೋಡಿ / ಮೂಡುಬಿದಿರೆಯ ರೊನಾಲ್ಡ್ ಸಿಲ್ವನ್ ಡಿಸೋಜಾ ಅವರ ದೂರದೃಷ್ಟಿ, ಪರಿಶ್ರಮ ಮತ್ತು ನಿರಂತರ ಪ್ರಯತ್ನದ ಫಲವಾಗಿ ಬೆಳೆದ ಲೆಕ್ಸಾ ಲೈಟಿಂಗ್‌ ಟೆಕ್ನೋಲಾಜಿಸ್‌ ಪ್ರೈವೇಟ್‌ ಲಿಮಿಟೆಡ್‌ (Leksa Lighting Technologies Pvt. Ltd.) ಸಂಸ್ಥೆ ಭಾರತದ ಟಾಪ್‌ 100 ಎಂಎಸ್‌ಎಂಇ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಮಂಗಳೂರು: ಕರ್ನಾಟಕದ ಗ್ರಾಮೀಣ ಪ್ರದೇಶವಾದ ನಿಡ್ಡೋಡಿ / ಮೂಡುಬಿದಿರೆಯ ರೊನಾಲ್ಡ್ ಸಿಲ್ವನ್ ಡಿಸೋಜಾ ಅವರ ದೂರದೃಷ್ಟಿ, ಪರಿಶ್ರಮ ಮತ್ತು ನಿರಂತರ ಪ್ರಯತ್ನದ ಫಲವಾಗಿ ಬೆಳೆದ ಲೆಕ್ಸಾ ಲೈಟಿಂಗ್‌ ಟೆಕ್ನೋಲಾಜಿಸ್‌ ಪ್ರೈವೇಟ್‌ ಲಿಮಿಟೆಡ್‌ (Leksa Lighting Technologies Pvt. Ltd.) ಸಂಸ್ಥೆ ಭಾರತದ ಟಾಪ್‌ 100 ಎಂಎಸ್‌ಎಂಇ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ನವದೆಹಲಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಎಂಎಸ್‌ಎಂಇ ಉದ್ಯೋಗ್‌ ಫೌಂಡೇಶನ್‌ ವತಿಯಿಂದ ಈ ಪ್ರತಿಷ್ಠಿತ ರಾಷ್ಟ್ರೀಯ ಮಾನ್ಯತೆ ನೀಡಲಾಯಿತು.

ಸರಳ ಹಿನ್ನೆಲೆಯಿಂದ ಉದ್ಯಮದ ಪಯಣ ಆರಂಭಿಸಿದ ರೊನಾಲ್ಡ್ ಸಿಲ್ವನ್ ಡಿಸೋಜಾ ಅವರು ಗುಣಮಟ್ಟ, ಶಿಸ್ತು, ತಾಂತ್ರಿಕ ನವೀನತೆ ಮತ್ತು ಭಾರತೀಯ ಉತ್ಪಾದನೆಗೆ ಒತ್ತು ನೀಡುವ ಮೂಲಕ ಲೆಕ್ಸಾ ಲೈಟಿಂಗ್‌ ಸಂಸ್ಥೆಯನ್ನು ಇಂದು ಪ್ರತಿಷ್ಠಿತ ಬೆಳಕಿನ ತಂತ್ರಜ್ಞಾನ ಸಂಸ್ಥೆಯಾಗಿ ರೂಪಿಸಿದ್ದಾರೆ. ‘ಗ್ರಾಮೀಣ ಕರ್ನಾಟಕದಲ್ಲಿ ಕಂಡ ಕನಸು ಒಂದು ದಿನ ಇಡೀ ದೇಶವನ್ನು ಬೆಳಗಿಸಬೇಕು’ ಎಂಬ ಆಶಯದೊಂದಿಗೆ ಆರಂಭವಾದ ಈ ಪಯಣ, ಇಂದು ರಾಷ್ಟ್ರೀಯ ಗೌರವದ ಹಂತ ತಲುಪಿದೆ.

ಸಾಧನೆಯ ಕುರಿತು ಮಾತನಾಡಿದ ರೊನಾಲ್ಡ್ ಸಿಲ್ವನ್ ಡಿಸೋಜಾ, ಈ ಗೌರವ ನನ್ನೊಬ್ಬರ ಸಾಧನೆಯಲ್ಲ. ಇದು ಲೆಕ್ಸಾ ಕುಟುಂಬದ ಪ್ರತಿಯೊಬ್ಬ ಸದಸ್ಯನ ಪರಿಶ್ರಮ. ನಮ್ಮ ಗ್ರಾಹಕರು, ಪಾಲುದಾರರು, ನನ್ನ ಕುಟುಂಬ ಹಾಗೂ ನಮ್ಮ ಮೇಲೆ ನಂಬಿಕೆ ಇಟ್ಟ ಪ್ರತಿಯೊಬ್ಬರ ಕೊಡುಗೆಯ ಫಲ. ನಿಡ್ಡೋಡಿ / ಮೂಡುಬಿದಿರೆಯಂತಹ ಗ್ರಾಮೀಣ ಪ್ರದೇಶದಿಂದ ಆರಂಭವಾದ ಒಂದು ಕನಸು ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ನನಗೆ ಅಪಾರ ಹೆಮ್ಮೆ ಮತ್ತು ಸಂತೋಷವನ್ನು ನೀಡಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಥಣಿಯಿಂದ ಶ್ರೀಶೈಲಕ್ಕೆ ಬಸ್ ಸೇವೆಗೆ ಚಾಲನೆ
ಷಡ್ಯಂತ್ರಕ್ಕೆ ನಾಡಗೌಡರಿಗೆ ಮತ್ತೆ ಸಚಿವ ಸ್ಥಾನ ಬಲಿ!