ಎಂಟಿಆರ್‌ನ 4 ಹೊಸ ಉತ್ಪನ್ನ ಮಾರುಕಟ್ಟೆಗೆ

KannadaprabhaNewsNetwork |  
Published : Aug 18, 2026, 02:15 AM IST
ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎಂ.ಟಿ.ಆರ್. ಫುಡ್ಸ್‌ನ 4 ಹೊಸ ಉತ್ಪನ್ನಗಳನ್ನು ಎಂ.ಟಿ.ಆರ್. ಮಾರಾಟ ವಿಭಾಗದ ಮುಖ್ಯಸ್ಥ ಆರ್. ಮೂರ್ತಿ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಗ್ರಾಹಕರಿಗಾಗಿ ಎಂಟಿಆರ್ ಫುಡ್ಸ್ ಶೇಂಗಾ ಚಟ್ನಿ ಪುಡಿ, ಗುರೆಳ್ಳು ಚಟ್ನಿ ಪುಡಿ, ಅಗಸಿ ಚಟ್ನಿ ಪುಡಿ ಹಾಗೂ ಮಸಾಲಾ ಖಾರ ಸೇರಿದಂತೆ 4 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಹುಬ್ಬಳ್ಳಿ:

ಉತ್ತರ ಕರ್ನಾಟಕದ ಗ್ರಾಹಕರಿಗಾಗಿ ಎಂಟಿಆರ್ ಫುಡ್ಸ್ ಶೇಂಗಾ ಚಟ್ನಿ ಪುಡಿ, ಗುರೆಳ್ಳು ಚಟ್ನಿ ಪುಡಿ, ಅಗಸಿ ಚಟ್ನಿ ಪುಡಿ ಹಾಗೂ ಮಸಾಲಾ ಖಾರ ಸೇರಿದಂತೆ 4 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಸೋಮವಾರ ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉತ್ಪನ್ನ ಬಿಡುಗಡೆಗೊಳಿಸಿದ ಎಂಟಿಆರ್ ಮಾರಾಟ ವಿಭಾಗದ ಮುಖ್ಯಸ್ಥ ಆರ್. ಮೂರ್ತಿ, ಹೊಸ ಉತ್ಪನ್ನಗಳು ಸಾಮಾನ್ಯ ಮಳಿಗೆ, ಆಧುನಿಕ ಮಳಿಗೆ, ನಮ್ಮ ಎಂಟಿಆರ್ ಮಳಿಗೆ ಹಾಗೂ ಪ್ರಮುಖ ಆನ್‌ಲೈನ್ ವೇದಿಕೆಗಳಲ್ಲಿ ಲಭ್ಯವಿರುವುದಾಗಿ ತಿಳಿಸಿದರು.

100 ಗ್ರಾಂ ಶೇಂಗಾ ಚಟ್ನಿ ಪುಡಿ ₹49, ಗುರೆಳ್ಳು ಚಟ್ನಿ ಪುಡಿ ₹55, ಅಗಸಿ ಚಟ್ನಿ ಪುಡಿ ₹49 ಹಾಗೂ ಮಸಾಲಾ ಖಾರ ₹65 ದರ ನಿಗದಿಪಡಿಸಲಾಗಿದೆ. ಸ್ಥಳೀಯ ಮಟ್ಟದ ಪ್ರಚಾರಕ್ಕೆ ಆದ್ಯತೆ ನೀಡಲಾಗಿದ್ದು, ಡಿಜಿಟಲ್ ಮಾಧ್ಯಮ, ಮಳಿಗೆಗಳ ಪ್ರಚಾರ, ಹೊರಾಂಗಣ ಪ್ರಚಾರ ಹಾಗೂ ನೇರ ಗ್ರಾಹಕ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಎಂಟಿಆರ್ ಫುಡ್ಸ್‌ನ ಮುಖ್ಯ ಮಾರುಕಟ್ಟೆ ಮತ್ತು ಬೆಳವಣಿಗೆ ಅಧಿಕಾರಿ ಅನುಪಮ್ ನಾಯರ್ ಮಾತನಾಡಿ, ಉತ್ತರ ಕರ್ನಾಟಕದ ಮನೆಗಳಲ್ಲಿ ಶೇಂಗಾ, ಗುರೆಳ್ಳು, ಅಗಸಿ ಚಟ್ನಿ ಪುಡಿ ಹಾಗೂ ಮಸಾಲಾ ಖಾರವು ಜೋಳದ ರೊಟ್ಟಿ ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಹಾರಗಳೊಂದಿಗೆ ಬಳಕೆಯಾಗುತ್ತವೆ. ಗೃಹಿಣಿಯರ ಸಲಹೆ ಪಡೆದು, ಗ್ರಾಹಕರೊಂದಿಗೆ ಹಲವು ಹಂತಗಳಲ್ಲಿ ಉತ್ಪನ್ನ ಪರೀಕ್ಷಿಸಿ ಸ್ಥಳೀಯ ರುಚಿಗೆ ಅನುಗುಣವಾಗಿ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಎಂಟಿಆರ್ ಫುಡ್ಸ್‌ನ ಸಿಇಒ ಸುನಯ್ ಭಾಸಿನ್ ಮಾತನಾಡಿ, ಸಾಂಪ್ರದಾಯಿಕ ರುಚಿಗಳೊಂದಿಗೆ ಗುಣಮಟ್ಟ, ಸ್ವಚ್ಛತೆ ಹಾಗೂ ಸ್ಥಿರತೆ ಕಾಯ್ದುಕೊಳ್ಳಲು ಬದ್ಧ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶುದ್ಧ ನೀರು ಸೇವನೆಯಿಂದ ಉತ್ತಮ ಆರೋಗ್ಯ
ಕಾಂಗ್ರೆಸ್‌ನಿಂದ ವಂದೇ ಮಾತರಂ ಗೀತೆಗೆ ಅಗೌರವ, ಬಿಜೆಪಿ ಪ್ರತಿಭಟನೆ