ಶಾಲಾ ಮಕ್ಕಳಿಂದ ಮೂಡಲಪಾಯ ಬಯಲಾಟ ಪ್ರದರ್ಶನ

KannadaprabhaNewsNetwork |  
Published : Nov 10, 2025, 12:15 AM IST
ಶಾಲಾ ಮಕ್ಕಳಿಂದ ಮೂಡಲಪಾಯ ಬಯಲಾಟ ಪ್ರದರ್ಶನ | Kannada Prabha

ಸಾರಾಂಶ

ತಾಲೂಕಿನ ಮತ್ತಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳು ಶ್ರೀ ಬಿದರಾಂಬಿಕ ಕೃಪಾ ಪೋಷಿತ ಮೂಡಲಪಾಯ ಯಕ್ಷಗಾನ ಬಯಲಾಟ ಮಂಡಳಿಯಿಂದ ತುಮಕೂರಿನ ಕನ್ನಡ ಭವನದಲ್ಲಿ ಆಯೋಜಿಸಿದ್ದ ಮೂಡಲಪಾಯ ಬಯಲಾಟ ಸಮ್ಮೇಳನದಲ್ಲಿ ಪ್ರದರ್ಶನ ನೀಡಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕಿನ ಮತ್ತಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳು ಶ್ರೀ ಬಿದರಾಂಬಿಕ ಕೃಪಾ ಪೋಷಿತ ಮೂಡಲಪಾಯ ಯಕ್ಷಗಾನ ಬಯಲಾಟ ಮಂಡಳಿಯಿಂದ ತುಮಕೂರಿನ ಕನ್ನಡ ಭವನದಲ್ಲಿ ಆಯೋಜಿಸಿದ್ದ ಮೂಡಲಪಾಯ ಬಯಲಾಟ ಸಮ್ಮೇಳನದಲ್ಲಿ ಪ್ರದರ್ಶನ ನೀಡಿದರು. ಈ ಪ್ರದರ್ಶನಕ್ಕೆ ಭಾಗವತರಾಗಿ ಸರ್ಕಾರಿ ಶಾಲಾ ಶಿಕ್ಷಕ ಮಂಜಪ್ಪ ಮತ್ತಿಹಳ್ಳಿ ಮಾರ್ಗದರ್ಶನ ನೀಡಿ, ಹಿನ್ನೆಲೆ ಗಾಯಕರಾಗಿ ಗ್ರಂಥಪಾಲಕ ಲೋಕೇಶ್, ತಾಳದಲ್ಲಿ ಪರಮೇಶ್, ಮದ್ದಳೆಯಲ್ಲಿ ನಾಗರಾಜು ಕಾರ್ಯನಿರ್ವಹಿಸಿದರು. ಪಾತ್ರಧಾರಿಯಾಗಿ ಶಾಲೆಯ ಹಲವು ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಕೌಶಲ್ಯ ಪ್ರದರ್ಶಿಸಿದರು. ಕಾರ್ಯಕ್ರಮವನ್ನು ಸಂಸ್ಕೃತಿ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ವೀಕ್ಷಿಸಿ ಮಕ್ಕಳ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಯಲ್ಲಿ ಹಿರಿಯ ಕಲಾವಿದ ಲಕ್ಷ್ಮಣದಾಸ್, ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷ ಡಾ.ಕೆ.ಆರ್.ದುರ್ಗಾದಾಸ್, ಸಾಹಿತಿ ಚಿಕ್ಕಣ್ಣ ಅಣ್ಣೇಕಟ್ಟೆ, ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಮೂರ್ತಿ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ