ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಹಾಕಿ ಕಪ್ ನ ಮಹಿಳೆಯರಿಗೆ ನಡೆಯುತ್ತಿರುವ 5''''''''''''''''ಎ ಸೈಡ್ ಪಂದ್ಯದಲ್ಲಿ ಕಂಬೀರಂಡ ಮತ್ತು ಕೇಚೆಟ್ಟಿರ ಫೈನಲ್‌ಗೆ ಪ್ರವೇಶಿಸಿವೆ.ಕ್ವಾಟರ್ ಫೈನಲ್ :ಕಾಂಡಂಡ ಮತ್ತು ಕೇಚೆಟ್ಟಿರ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಕೇಚೆಟ್ಟಿರ ಜಯ ಸಾಧಿಸಿತು. ಕೇಚೆಟ್ಟಿರ ಪರ ತೇಜಸ್ವಿ 2 ಹಾಗೂ ಲಕ್ಷ್ಯ 1 ಗೋಲು ದಾಖಲಿಸಿದರು. ಕಾಂಡಂಡ ನೇಹಾ ಅಪ್ಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕುಟ್ಟಂಡ (ಮಾದಾಪುರ) ಮತ್ತು ಕುಪ್ಪಂಡ (ಕೈಕೇರಿ) ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 2-0 ಗೋಲುಗಳ ಅಂತರದಲ್ಲಿ ಕುಪ್ಪಂಡ ತಂಡ ಜಯ ಸಾಧಿಸಿತು. ಕುಟ್ಟಂಡ ಚುಪ್ಪಿ ಕಾರ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ಕಂಬೀರಂಡ ಮತ್ತು ಚೆಯ್ಯಂಡ ನಡುವಿನ ಪಂದ್ಯದಲ್ಲಿ 9-1 ಗೋಲುಗಳ ಅಂತರದಲ್ಲಿ ಕಂಬೀರಂಡ ಗೆಲುವು ದಾಖಲಿಸಿತು. ಕಂಬೀರಂಡ ಪರ ಮಿಲನಾ ಹಾಗೂ ದಿವ್ಯ ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ಪೊನ್ನಮ್ಮ 2 ಮತ್ತು ಕುಸುಮ 1 ಗೋಲು ಬಾರಿಸಿದರು. ಚೆಯ್ಯಂಡ ದೀಕ್ಷ 1 ಗೋಲು ದಾಖಲಿಸಿದರು. ಚೆಯ್ಯಂಡ ಭಾಗ್ಯಶ್ರೀ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕಲಿಯಂಡ ಮತ್ತು ಮುಕ್ಕಾಟಿರ (ದೊಡ್ಡಪುಲಿಕೋಟು) ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 2-0 ಗೋಲುಗಳ ಅಂತರದಲ್ಲಿ ಕಲಿಯಂಡ ತಂಡ ಜಯ ಸಾಧಿಸಿತು. ಮುಕ್ಕಾಟಿರ ಶೈನು ಬೊಳ್ಳಮ್ಮ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ಸೆಮಿ ಫೈನಲ್ : ಕೇಚೆಟ್ಟೀರ ಮತ್ತು ಕುಪ್ಪಂಡ (ಕೈಕೇರಿ) ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಕೇಚೆಟ್ಟಿರ ಗೆಲುವು ಸಾಧಿಸಿತು. ಕೇಚೆಟ್ಟಿರ ಪರ ತೇಜಸ್ವಿ ಹಾಗೂ ಕೆ.ಎ.ಪಾರ್ವತಿ ಗೋಲು ದಾಖಲಿಸಿದರು. ಕುಪ್ಪಂಡ ನಕ್ಷ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕಂಬೀರಂಡ ಮತ್ತು ಕಲಿಯಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 1-0 ಗೋಲುಗಳ ಅಂತರದಲ್ಲಿ ಕಂಬೀರಂಡ ಜಯ ಸಾಧಿಸಿತು. ಕಲಿಯಂಡ ಮಿಲನ್ ಮಂದಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.