ಮುದ್ದಂಡ ಹಾಕಿ : ಇಂದಿನಿಂದ ಪ್ರಿ ಕ್ವಾರ್ಟರ್ ಫೈನಲ್

KannadaprabhaNewsNetwork | Published : Apr 22, 2025 1:53 AM

ಸಾರಾಂಶ

ಕೊಡವ ಕೌಟುಂಬಿಕ ಹಾಕಿ ಉತ್ಸವ ಮುದ್ದಂಡ ಹಾಕಿ ಕಪ್‌ ಅಂತಿಮಘಟ್ಟ ಸಾಗುತ್ತಿದ್ದು ಮಂಗಳವಾರ ಪ್ರಿ ಕ್ವಾರ್ಟರ್‌ ಪಂದ್ಯಗಳು ನಡೆಯಲಿವೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ 25ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವ ಮುದ್ದಂಡ ಹಾಕಿ ಕಪ್ ಅಂತಿಮ ಘಟ್ಟದತ್ತ ಸಾಗುತ್ತಿದ್ದು, ಮಂಗಳವಾರದಿಂದ ಪ್ರಿ ಕ್ವಾರ್ಟರ್ ಪಂದ್ಯಗಳು ನಡೆಯಲಿದೆ.

ಸೋಮವಾರ ನಡೆದ ಪಂದ್ಯದಲ್ಲಿ ನಾಳಿಯಂಡ ಮತ್ತು ಕೊಂಗೇಟಿರ ತಂಡಗಳ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ನಿಗದಿತ ಅವಧಿಯಲ್ಲಿ ಶೂನ್ಯ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಟೈ ಬ್ರೇಕರ್ ನಲ್ಲಿ 4-3 ಗೋಲುಗಳ ಅಂತರದಲ್ಲಿ ನಾಳಿಯಂಡ ತಂಡ ಗೆಲುವು ಸಾಧಿಸಿತು.

ಕೊಂಗೇಟಿರ ರೋಹನ್ ತಿಮ್ಮಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕೋಟೇರ ಮತ್ತು ಪುದಿಯೊಕ್ಕಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಪುದಿಯೊಕ್ಕಡ ತಂಡ ಜಯ ಸಾಧಿಸಿತು. ಪುದಿಯೊಕ್ಕಡ ಪರ ಪ್ರಧಾನ್ ಸೋಮಣ್ಣ ಹಾಗೂ ಮಿಥನ್ ಪೊನ್ನಪ್ಪ ತಲಾ ಒಂದು ಗೋಲು ದಾಖಲಿಸಿದರು. ಕೋಟೇರ ಪರ ಲೋಕೇಶ್ ಒಂದು ಗೋಲು ಬಾರಿಸಿದರು.

ಕೋಟೇರ ಕೌಶಿಕ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಚೆಪ್ಪುಡಿರ ಮತ್ತು ಅಟ್ರಂಗಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಚೆಪ್ಪುಡಿರ ತಂಡ ಗೆಲುವು ದಾಖಲಿಸಿತು. ಚೆಪ್ಪುಡಿರ ಪರ ಚೇತನ್ ಚಿಣ್ಣಪ್ಪ 2, ನರೇನ್ ಕಾರ್ಯಪ್ಪ, ಗಗನ್ ತಿಮ್ಮಯ್ಯ ಹಾಗೂ ಸಿ.ಕೆ.ಸೋಮಣ್ಣ ತಲಾ ಒಂದು ಗೋಲು ದಾಖಲಿಸಿದರು. ಅಟ್ರಂಗಡ ನರ್ತನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಮೇಕೇರಿರ ಮತ್ತು ಅಂಜಪರವಂಡ ನಡುವಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಎರಡು ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈಬ್ರೇಕರ್ ನಲ್ಲಿ 4-2 ಗೋಲುಗಳ ಅಂತರದಲ್ಲಿ ಅಂಜಪರವಂಡ ತಂಡ ಜಯ ಸಾಧಿಸಿತು. ಮೇಕೇರಿರ ನವೀನ್ ಮಾದಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಚಂಗುಲಂಡ ಮತ್ತು ಮೇಚಿಯಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಮೇಚಿಯಂಡ ತಂಡ ಗೆಲುವು ಸಾಧಿಸಿತು. ಮೇಚಿಯಂಡ ತಂಡದ ಪರ ಪೃಥ್ವಿ ಗಣಪತಿ ಎರಡು ಗೋಲು ದಾಖಲಿಸಿದರು. ಚಂಗುಲಂಡ ಪರ ಅಜಿತ್ ಅಯ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಬೊಟ್ಟೋಳಂಡ ಮತ್ತು ಚೇಂದಂಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್ ನಲ್ಲಿ 4-3 ಗೋಲುಗಳ ಅಂತರದಲ್ಲಿ ಚೇಂದಂಡ ತಂಡ ಗೆಲುವು ಸಾಧಿಸಿತು. ಬೊಟ್ಟೋಳಂಡ ಪರ ಸೂರಜ್ ಅಯ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಇಂದಿನ ಪ್ರಿ - ಕ್ವಾರ್ಟರ್ ಫೈನಲ್ಸ್

ಮೈದಾನ 1

ಬೆಳಿಗ್ಗೆ 9 ಗಂಟೆಗೆ ಮೇಚಿಯಂಡ ಮತ್ತು ಚೇಂದಂಡ,

10.30 ಗಂಟೆಗೆ ಅಂಜಪರವಂಡ ಮತ್ತು ಚೆಪ್ಪುಡಿರ,

ಮಧ್ಯಾಹ್ನ 12 ಗಂಟೆಗೆ ಸಣ್ಣುವಂಡ ಮತ್ತು ಮಂಡೇಪಂಡ,

1.30 ಗಂಟೆಗೆ ಪರದಂಡ ಮತ್ತು ಕುಪ್ಪಂಡ (ಕೈಕೇರಿ)

Share this article