ಮಂಗಳೂರು: ಶೃಂಗೇರಿ ಶಾರದಾ ಪೀಠದ ವೈಭವ, ವೀಣೆಯ ನುಡಿಸುತ್ತಾ ಮುಗುಳ್ನಗುವ ಕಂದಮ್ಮಗಳು, ಕೈಯೊಳು ತಾವರೆ, ಪುಸ್ತಿಕೆಗಳಿಂದ ಶೋಭಿಸುವ ವಿದ್ಯಾಧಿದೇವತೆ.. ಈ ಮಧ್ಯೆ ನವರೂಪಗಳಲ್ಲಿ ಶೋಭಿಸುವ ನವದುರ್ಗೆಯರು..! ಇದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವದಲ್ಲಿ ಬುಧವಾರ ನಡೆದ ಮುದ್ದು ಶಾರದೆ ಮತ್ತು ನವದುರ್ಗೆಯರ ಸ್ಪರ್ಧೆಯ ಝಲಕ್.ಪಿ.ಕೆ. ಲೋಹಿತ್ ಸ್ಮರಣಾರ್ಥ ಪಿ.ಕೆ. ದೂಜ ಪೂಜಾರಿ ಗ್ರೂಪ್ಸ್ ಪ್ರಾಯೋಜಕತ್ವದಲ್ಲಿ ಆಭರಣ ಜುವೆಲ್ಲರ್ಸ್ ಮತ್ತು ಅದಿರಾ ಪ್ರಾಪರ್ಟಿಸ್ ಸಹಕಾರದೊಂದಿಗೆ ಈ ಸ್ಪರ್ಧೆ ಆಯೋಜಿಸಲಾಗಿತ್ತು. ನೂರಾರು ಮಂದಿ ಪುಟಾಣಿಗಳು ಮುದ್ದು ಶಾರದೆ, ನವದುರ್ಗೆಯರಾಗಿ ಶೋಭಿಸಿದರು.ಉದ್ಘಾಟನೆ: ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಟ್ರಸ್ಟಿ ಕೃತಿನ್ ಧೀರಜ್ ಅಮೀನ್, ಅಭಿವೃದ್ಧಿ ಸಮಿತಿ ಸದಸ್ಯ ವಾಸುದೇವ ಕೋಟ್ಯಾನ್, ಪಿ.ಕೆ. ಪೂಜಾರಿ ಗ್ರೂಪ್‌ನ ಪಿ.ಕೆ ಸತೀಶ್ ಪೂಜಾರಿ, ಗೌರವಿ ರಾಜಶೇಖರ್, ಪಿ.ಕೆ.ಸ್ಮರಣ್ ಪೂಜಾರಿ, ಪ್ರಣವಿ ಪೂಜಾರಿ, ಆಭರಣ ಜ್ಯುವೆಲ್ಲರ್ಸ್‌ನ ಮಂಗಳೂರು ವಿಭಾಗದ ಮ್ಯಾನೇಜರ್ ಲಕ್ಷ್ಮೀನಾರಾಯಣ ಶೆಣೈ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಕೂಳೂರು ಇದ್ದರು.
ಮುದ್ದು ಶಾರದೆ- ನವದುರ್ಗೆ ವಿಜೇತರು
೬ರಿಂದ ೧೦ ವರ್ಷದೊಳಗಿನ ಮುದ್ದು ಶಾರದೆ ವಿಭಾಗ: ಶಿವಿಕಾ ಡಿಂಪಲ್ (ಪ್ರಥಮ), ಆದ್ಯಾ ವಿ.ಕೋಟ್ಯಾನ್ (ದ್ವಿತೀಯ), ಅನೈರಾ ಎ. ಶೆಟ್ಟಿ, ಶಾನ್ಯ ಗಂಗೊಳ್ಳಿ, ಅದ್ವಿತಿ ಎ. ಪೂಜಾರಿ, ಆನ್ವಿ ಎ., ರೋಷಿನಿ ಡಿ.ಕೆ (ಆಕರ್ಷಕ ಬಹುಮಾನ).ನವದುರ್ಗೆಯರು: ಶಾನ್ಯ ಬಿ. ಸುವರ್ಣ (ಪ್ರಥಮ), ಋಥ್ವಾ ಎಚ್.ಪಿ. (ದ್ವಿತೀಯ), ಕಾಶ್ವಿ, ಚಾರ್ವಿ ಕುಕ್ಯಾನ್, ದಿಯಾ ಡಿ., ಪ್ರಾಂಜಲಿ, ಶಿಪ್ರಾ ಪಿ. ಶೆಟ್ಟಿ (ಆಕರ್ಷಕ ಬಹುಮಾನ) .
ಮುದ್ದು ಶಾರದೆ ೩-೬ ವರ್ಷ ವಿಭಾಗ: ಶ್ರೀಯಾ ಕೆ. ಕಾಂಚನ್ (ಪ್ರಥಮ), ನಕ್ಷತ್ರ ಎಸ್. ಆಚಾರ್ಯ (ದ್ವಿತೀಯ), ವೈ ಆರಾಧ್ಯಾ ಭಟ್, ಶೈವಿ ಸಾಲ್ಯಾನ್, ಓಜಸ್ವಿ, ಜಾನ್ವಿ ಆರ್., ಮನಸ್ವಿ ಡಿ ಪೂಜಾರಿ (ಆಕರ್ಷಕ ಬಹುಮಾನ) ಪಡೆದರು.