ಮುದ್ದೇಬಿಹಾಳ ಬಂದ್‌: ಸ್ವಯಂಪ್ರೇರಿತ ವ್ಯಾಪಾರ ವಹಿವಾಟು ಬಂದ್‌

KannadaprabhaNewsNetwork |  
Published : Jun 19, 2026, 03:00 AM IST
ಸುದ್ದಿಗೋಷ್ಠಿ | Kannada Prabha

ಸಾರಾಂಶ

ಶಾಸಕ ಅಪ್ಪಾಜಿ ಸಿ.ಎಸ್. ನಾಡಗೌಡ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಮುದ್ದೇಬಿಹಾಳ ಕ್ಷೇತ್ರದ ಜನರು ಸ್ವಯಂಪ್ರೇರಿತವಾಗಿ ಶಾಂತಿಯುತ ಬಂದ್ ಮಾಡಿ ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಲು ತೀರ್ಮಾಣಿಸಲಾಗಿದೆ ಎಂದು ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುರುಣ್ಣ ತಾರನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಶಾಸಕ ಅಪ್ಪಾಜಿ ಸಿ.ಎಸ್. ನಾಡಗೌಡ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಮುದ್ದೇಬಿಹಾಳ ಕ್ಷೇತ್ರದ ಜನರು ಸ್ವಯಂಪ್ರೇರಿತವಾಗಿ ಶಾಂತಿಯುತ ಬಂದ್ ಮಾಡಿ ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಲು ತೀರ್ಮಾಣಿಸಲಾಗಿದೆ ಎಂದು ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುರುಣ್ಣ ತಾರನಾಳ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಕ್ಷೇತ್ರದ ಎಲ್ಲ ವ್ಯಾಪಾರಸ್ಥರು, ಗಣ್ಯ ಉದ್ಯಮಿದಾರರು, ಸಂಘ ಸಂಸ್ಥೆಯವರು ನನ್ನನ್ನು ಸಂಪರ್ಕಿಸಿ ಮುದ್ದೇಬಿಹಾಳ ಸಂಪೂರ್ಣ ಬಂದ್ ಮಾಡುವ ಮೂಲಕ ನಮ್ಮ ಬೇಡಿಕೆಯನ್ನು ಸಿಎಂ ಡಿ.ಕೆ. ಶಿವಕುಮಾರ ಹಾಗೂ ಹೈಕಮಾಂಡ್‌ಗೆ ತಿಳಿಸಿಕೊಡಬೇಕಿದೆ. ಆದ್ದರಿಂದ ನಾವೆಲ್ಲರೂ ಯಾವುದೇ ಯಾರದೇ ಬಲವಂತವಿಲ್ಲದೆ ನಮ್ಮ ವ್ಯಾಪಾರ ವಹಿವಾಟುಗಳನ್ನು ಒಂದು ದಿನದ ಮಟ್ಟಿಗೆ ಬಂದ್ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ ಎಂದವರು ಹೇಳಿದರು.

ಬನಶಂಕರಿ ದೇವಸ್ಥಾನದಿಂದ ಮೆರವಣಿಗೆ:

ಮುದ್ದೇಬಿಹಾಳ ಕ್ಷೇತ್ರದಿಂದ ಸುಮಾರು 5000 ಜನರು ಪಟ್ಟಣಕ್ಕೆ ಆಗಮಿಸುವ ಅಂಕಿಸಂಖ್ಯೆ ಇದ್ದ ಕಾರಣ ಇಲ್ಲಿನ ಬನಶಂಕರಿ ದೇವಸ್ಥಾನದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ಮೂಲಕ ಆಗಮಸಿ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಸಿಎಂ ಡಿ.ಕೆ. ಶಿವಕುಮಾರ ಹಾಗೂ ರಾಜ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ ಅವರಿಗೆ ಫ್ಯಾಕ್ಸ್ ಮೂಲಕ ಮನವಿ ಕಳುಹಿಸಿ ಶಾಸಕ ಅಪ್ಪಾಜಿ ಸಿ.ಎಸ್. ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಬ್ಲಾಕ್‌ ಕಾಂಗ್ರೆಸ್‌ ತಾಲೂಕಾಧ್ಯಕ್ಷ ಗುರುಣ್ಣ ತಾರನಾಳ ಹೇಳಿದರು.

ಬಂದ್ ಹಿನ್ನೆಲೆ ಕೆಎಸ್‌ಆರ್‌ಟಿಸಿ ಬಸ್ ಸ್ಥಗಿತಗೊಳಿಸಿ ಬೆಂಬಲ ನೀಡಬೇಕೆಂದು ಡಿಪೋ ಮ್ಯಾನೇಜರ್‌ಗೆ ಮನವಿ ಮಾಡಲಾಗಿದೆ. ಕಾರ್ಯಕರ್ತರು ಶಾಂತಿಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಳಬೇಕು. ಪೊಲೀಸ್ ಇಲಾಖೆಗೂ ಪ್ರತಿಭಟನೆಗೆ ಭದ್ರತೆ ನೀಡಬೇಕೆಂದು ಮನವಿ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಲ್ಲರೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಂಡು ಬಂದ್ ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.

ಬೆಂಗಳೂರಿಗೆ ನಿಯೋಗ:

ಹಿರಿಯ ರಾಜಕಾರಣಿಯಾಗಿರುವ ಸಿ.ಎಸ್. ನಾಡಗೌಡ ಅವರಿಗೆ ಮೊದಲ ಹಂತದಲ್ಲೇ ಸಚಿವ ಸ್ಥಾನ ದೊರೆಯಬೇಕಿತ್ತು. ದೊರಕದೇ ಇರುವುದು ಅವರ ಅಭಿಮಾನಿ ಹಾಗೂ ಮುದ್ದೇಬಿಹಾಳ ಕಾರ್ಯಕರ್ತರಲ್ಲಿ ನೋವುಂಟು ಮಾಡಿದೆ. ಹೀಗಾಗಿ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಲು ಬೆಂಗಳೂರಿಗೆ ನಿಯೋಗ ಹೋಗಲು ನಿರ್ಧರಿಸಲಾಗಿದೆ. ಈ ಸಂಬಂಧ ಪಕ್ಷದ ಮುಖಂಡರ, ಕಾರ್ಯಕರ್ತರ ಸಭೆ ಕರದೇ ಚರ್ಚಿಸಿ ದಿನಾಂಕ ನಿಗದಿ ಮಾಡಿ ನಿಯೋಗ ಹೋಗಿ ಸಿ.ಎಸ್. ನಾಡಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಲಾಗುವುದು ಎಂದರು.ಕಾಂಗ್ರೆಸ್‌ಅಧಿಕಾರಕ್ಕೆ ಬಂದಾಗೊಮ್ಮೆ ಸಿ.ಎಸ್. ನಾಡಗೌಡಅವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂಬ ಭರವಸೆ ನೀಡುತ್ತಿದ್ದಾರೆ.ಆದರೆ, ಕೊನೆ ಹಂತದಲ್ಲಿಅವರ ಹೆಸರುಕೈಬಿಡಲಾಗುತ್ತಿದೆ.ಅದುಯಾಕೆ? ಎಂಬುವುದು ತಿಳಿಯುತ್ತಿಲ್ಲ. ನಿಷ್ಠಾವಂತರಿಗೆ ಬೆಲೆ ಇಲ್ಲದಂತಾಗಿದೆ.ಮುದ್ದೇಬಿಹಾಳ ಮತಕ್ಷೇತ್ರಅಭಿವೃದ್ಧಿಯಾಗಬೇಕು.ನಮ್ಮ ನಾಯಕರು ಸಚಿವರಾಬೇಕುಎಂಬುವುದು ಮುದ್ದೇಬಿಹಾಳ ತಾಲೂಕಿನ ಪ್ರತಿಯೊಬ್ಬರಆಸೆಯಾಗಿದೆ.ನಾಡಗೌಡಅವರು ಸಿಎಂ ಡಿ.ಕೆ.ಶಿವಕುಮಾರ ಅವರ ಸಮಕಾಲೀನ ರಾಜಕಾರಣಿಆಗಿದ್ದಾರೆ.ಹೀಗಾಗಿ ಅವರ ಹಿರಿತನ ಗಮನಿಸಿ ಸಚಿವ ಸ್ಥಾನ ನೀಡಬೇಕು.ಎರಡನೇ ಹಂತದಲ್ಲಿ ಸಚಿವ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸ ನಮ್ಮದುಎಂದು ತಿಳಿಸಿದರು.

ಬಸ್ ಬಂದ್‌ಗೂ ಮನವಿ:

ಮುದ್ದೇಬಿಹಾಳ ಪಟ್ಟಣದಿಂದ ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೂಯಾವುದೇ ಬಸ್ ಸಂಚಾರ ನಡೆಸದೇ ಸ್ಥಗಿತಗೊಳಿಸಬೇಕು ಎಂದು ಸಾರಿಗೆಇಲಾಖೆಯ ವ್ಯವಸ್ಥಾಪಕರಿಗೆ ಮನವಿ ಮಾಡಲಾಗುತ್ತದೆ. ಇದರಿಂದ ಕ್ಷೇತ್ರದ ಜನರು ನಾಡಗೌಡ ಅವರ ಪರವಾಗಿ ಇಟ್ಟಿರುವ ಗಟ್ಟಿ ನಿಲುವಿನ ಬಗ್ಗೆ ಸರಕಾರಕ್ಕೆ ಮುಟ್ಟಿದಂತಾಗುತ್ತದೆ ಎಂದವರು ಹೇಳಿದರು.

ಅಹಿತಕರ ಘಟನೆಗೆ ಅವಕಾಶ ನೀಡದಿರಿ:

ಶುಕ್ರವಾರ ಬಂದ್‌ ಕರೆ ನೀಡಿದ ಹಿನ್ನೆಲೆ ತಾಲೂಕಿನ ಗ್ರಾಮೀಣ ಭಾಗದಿಂದ ಆಗಮಿಸುವ ಶಾಲಾ ಹಾಗೂ ಕಾಲೇಜು ಮಕ್ಕಳಿಗೆ, ಇನ್ನುಳಿದ ಸರಕಾರಿ ಕಛೇರಿಗೆ ಆಗಮಿಸುವ ಜನರಿಗೆ ಯಾವುದೇ ತೊಂದರೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ನೋಡಿಕೊಳ್ಳಬೇಕಾಗಿದೆ. ಈ ಬಂದ್‌ ಕರೆ ಸ್ವಯಂ ಪ್ರೇರಿತವಾಗಿಯೇ ಹೊರತು ಯಾವುದೇ ಒತ್ತಾಯ ಇರುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಬಾಬುರಾಯ ದೇಸಾಯಿ(ಹಡಗಲಿ), ಮಾಜಿ ಪುರಸಭೆ ಅಧ್ಯಕ್ಷ ಮೆಹಬೂಬ ಗೊಳಸಂಗಿ, ಸದಸ್ಯರಾದ ಶಿವು ಶಿವಪೂರ, ರಫೀಕ್‌ ದ್ರಾಕ್ಷಿ, ಕಾಮರಾಜ ಬಿರಾದಾರ, ಎ.ಗಣೇಶ ಅನ್ನಗೋನಿ, ಅಮರೇಶ ಗೂಳಿ, ಸಿಕಂದರ್‌ ಜಾನ್ವೇಕರ, ಪಿಂಟು ಸಾಳಿಮನಿ, ಹನುಮಂತ ಮೇಲಿನಮನಿ, ಹುಸೇನ ಮುಲ್ಲಾ, ರಾಜುರಾಯಗೊಂಡ, ಸುರೇಶಗೌಡ ಪಾಟೀಲ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉನ್ನತ ಹುದ್ದೆಗಳಲ್ಲಿ ಶಿಕ್ಷಕ ಹುದ್ದೆ ಅತ್ಯಂತ ಶ್ರೇಷ್ಠ
ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಠಾಣೆಗೆ ದೂರು