ಮುದ್ಗಲ್ ಪುರಾಣ ಪ್ರಸಿದ್ಧ ಉಚ್ಛಿಷ್ಟ ಗಣಪತಿಮೂರ್ತಿ ವಿಸರ್ಜನೆ

KannadaprabhaNewsNetwork |  
Published : Sep 11, 2025, 12:03 AM IST
8ಕೆಆರ್ ಎಂಎನ್ 6.ಜೆಪಿಜಿರಾಮನಗರದ ಛತ್ರದಬೀದಿಯಲ್ಲಿ ಪ್ರತಿಷ್ಟಾಪಿಸಿದ್ದ ಮುದ್ಗಲ್ ಪುರಾಣ ಪ್ರಸಿದ್ಧ ಉಚ್ಛಿಷ್ಟ ಗಣಪತಿ ಗಣೇಶೋತ್ಸವ ಮೆರವಣಿಗೆ ನಡೆಯಿತು. | Kannada Prabha

ಸಾರಾಂಶ

ರಾಮನಗರ: ರಾಮನಗರದ ಛತ್ರದಬೀದಿಯಲ್ಲಿ ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಮತ್ತು ಅರಳೀಕಟ್ಟೆ ಗೆಳೆಯರ ಬಳಗ 41ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿಶೇಷವಾಗಿ ಪ್ರತಿಷ್ಠಾಪಿಸಿದ್ದ ಮುದ್ಗಲ್ ಪುರಾಣ ಪ್ರಸಿದ್ಧ ಉಚ್ಛಿಷ್ಟ ಗಣಪತಿ ಗಣೇಶೋತ್ಸವ ಮೆರವಣಿಗೆ ನಡೆಯಿತು.

ರಾಮನಗರ: ರಾಮನಗರದ ಛತ್ರದಬೀದಿಯಲ್ಲಿ ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಮತ್ತು ಅರಳೀಕಟ್ಟೆ ಗೆಳೆಯರ ಬಳಗ 41ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿಶೇಷವಾಗಿ ಪ್ರತಿಷ್ಠಾಪಿಸಿದ್ದ ಮುದ್ಗಲ್ ಪುರಾಣ ಪ್ರಸಿದ್ಧ ಉಚ್ಛಿಷ್ಟ ಗಣಪತಿ ಗಣೇಶೋತ್ಸವ ಮೆರವಣಿಗೆ ನಡೆಯಿತು.

ರಾಮನಗರ ನಗರಸಭಾಧ್ಯಕ್ಷ ಕೆ.ಶೇಷಾದ್ರಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಮನೆ ಮನೆಗೆ ಸೀಮಿತವಾಗಿದ್ದ ಗಣೇಶಮೂರ್ತಿ ಪ್ರತಿಷ್ಠಾಪನೆಯನ್ನು ಬಾಲಗಂಗಾಧರನಾಥ ತಿಲಕರು ಜನರನ್ನು ಒಗ್ಗೂಡಿಸುವ ಸಲುವಾಗಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ತಂದರು. ಅಂದಿನಿಂದಲೂ ಸಾರ್ವಜನಿಕ ಗಣೇಶೋತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿವೆ ಎಂದರು.

ಸಾರ್ವಜನಿಕ ಗಣೇಶೋತ್ಸವಗಳು ಸರ್ವರನ್ನೂ ಒಗ್ಗೂಡಿಸಿ ಸ್ನೇಹ, ಬಾಂಧವ್ಯ ಬೆಸೆಯುತ್ತದೆ. ಗಣೇಶೋತ್ಸವ ಕಾರ್ಯಕ್ರಮಗಳು ಸಮಾಜದ ಸಾಮರಸ್ಯ ಸಾರುತ್ತವೆ. ಯುವಕರಲ್ಲಿ ಒಗ್ಗಟ್ಟು ಮೂಡಿಸುತ್ತದೆ. ರಾಮನಗರದಲ್ಲಿ ಕೂಡ ಹಿಂದಿನಿಂದಲೂ ಎಲ್ಲರೂ ಒಗ್ಗಟ್ಟಾಗಿ ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಿಸುತ್ತಾ ಬಂದಿದ್ದಾರೆ ಎಂದು ಹೇಳಿದರು.

ವಿಜೃಂಭಣೆಯ ಮೆರವಣಿಗೆ: ಗಣಪತಿ ಮೆರವಣಿಗೆಯು ಛತ್ರದ ಬೀದಿಯಲ್ಲಿನ ಆಸ್ಥಾನ ಮಂಟಪದಿಂದ ಹೊರಟು ಅಗ್ರಹಾರ, ಕಾಯಿಸೊಪ್ಪಿನಬೀದಿ, ನಗರಸಭೆ ರಸ್ತೆ, ಶೆಟ್ಟಹಳ್ಳಿ ಬೀದಿ, ಕಾಮನಗುಡಿ ಸರ್ಕಲ್, ಎಂ.ಜಿ.ರಸ್ತೆ, ಮಂಡಿಪೇಟೆ ಬಾಲಗೇರಿ, ಹಳೇ ಬಸ್ ನಿಲ್ದಾಣ, ಮಾಗಡಿ ರಸ್ತೆ ಮತ್ತು ಐಜೂರಿನ ಪ್ರಮುಖ ಬೀದಿಗಳಲ್ಲಿ ನಡೆಯಿತು. ನಂತರ ಭಾನುವಾರ ಸಂಜೆ ರಂಗರಾಯರದೊಡ್ಡಿ ಕೆರೆ ಬಳಿಯ ಸಿರಿಗೌರಿ ಕಲ್ಯಾಣಿಯಲ್ಲಿ ಗಣಪತಿ ವಿಸರ್ಜನೆ ಮಾಡಲಾಯಿತು.

ಜಾನಪದ ಕಲಾತಂಡಗಳು: ಮೆರವಣಿಗೆಯಲ್ಲಿ ಮಂಗಳವಾದ್ಯ. ಕೇರಳದ ಚಂಡೆ, ಪೂಜಾ ಕುಣಿತ, ವೀರಗಾಸೆ ಅಘೋರಿ, , ತಮಟೆ ಕಲಾವಿದರ ಜನಪದ ಕಲಾ ಮೇಳಗಳು ಮೆರವಣಿಗೆಗೆ ಮತ್ತಷ್ಟು ಮೆರಗು ಹೆಚ್ಚಿಸಿತ್ತು.

ನಗರ ವೃತ್ತ ನಿರೀಕ್ಷಕ ಕೃಷ್ಣ, ಪುರ ಠಾಣೆ ಸಬ್ ಇನ್ಸ್‌ಪೆಕ್ಟರ್ ತನ್ವೀರ್ ಹುಸೇನ್. ಸಂಚಾರಿ ಠಾಣೆ ಸಬ್ ಇನ್ಸ್‌ಪೆಕ್ಟರ್ ಅಲ್ಲಾವುದ್ದೀನ್, ಗಣೇಶ್ ಜುವೆಲ್ರ‍್ಸ್ ಮಾಲೀಕ ಲಕ್ಷ್ಮಣ್ , ಟಿಇಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್, ಕಬ್ಬಾಳಮ್ಮ ಗಿರೀಶ್, ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘದ ಅಧ್ಯಕ್ಷ ಪಿ. ವೈ ರವಿಂದ್ರ ಹೇರ್ಳೆ ಕಾರ್ಯದರ್ಶಿ ಉಮಾ ಮಹದೇವಪ್ಪ ಮತ್ತು ಅರಳೀಕಟ್ಟೆ ಗೆಳೆಯರ ಬಳಗ ಮತ್ತು ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘದ ಪದಾಧಿಕಾರಿಗಳು ಇದ್ದರು.

8ಕೆಆರ್ ಎಂಎನ್ 6.ಜೆಪಿಜಿ

ರಾಮನಗರದ ಛತ್ರದಬೀದಿಯಲ್ಲಿ ಪ್ರತಿಷ್ಟಾಪಿಸಿದ್ದ ಮುದ್ಗಲ್ ಪುರಾಣ ಪ್ರಸಿದ್ಧ ಉಚ್ಛಿಷ್ಟ ಗಣಪತಿ ಗಣೇಶೋತ್ಸವ ಮೆರವಣಿಗೆ ನಡೆಯಿತು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!